ಕ್ರೀಡಾ ಅಭಿವೃದ್ಧಿಗೆ ಅಗತ್ಯಅನುದಾನ: ಸಿದ್ದರಾಮಯ್ಯ
ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾ ರತ್ನಪ್ರಶಸ್ತಿ ಪ್ರಧಾನ ಸಮಾರಂಭ

ಮೈಸೂರು.ಅ.7: ಕ್ರೀಡೆಯಲ್ಲಿ ಆಸಕ್ತಿ ಇರುವವರು ಹೆಚ್ಚಿನ ಸಾಧನೆ ಮಾಡಲು ಕ್ರೀಡಾ ಶಾಲೆ, ಕ್ರೀಡಾ ಹಾಸ್ಟಲ್ ಹಾಗೂ ಕ್ರೀಡೆಯ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸುವುದಾಗಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಅವರು ಇಂದು ನಗರದ ಜೆ.ಕೆ.ಮೈದಾನದಲ್ಲಿರುವ ಅಮೃತೋತ್ಸವ ವನದಲ್ಲಿ ಏಕಲವ್ಯ ಜೀವಮಾನ ಸಾಧನೆ ಮತ್ತು ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ-2015 ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡೆ ರಾಜ್ಯಗಳ ಹಾಗೂ ದೇಶಗಳ ನಡುವೆ ಬಾಂಧವ್ಯ ಹೆಚ್ಚಿಸುತ್ತದೆ. ಯುವಕರು ಧರ್ಮ, ಜಾತಿಗಳ ಅಂತರವಿಲ್ಲದೆ ಕ್ರೀಡಾಮನೋಭಾವದಿಂದ ಭಾಗವಹಿಸುತ್ತಾರೆ ಎಂದರ್ರುೀಡೆಗಳು ಸ್ಪರ್ಧಾತ್ಮಕ ಮನೋಭಾವ, ಆರೋಗ್ಯ, ಶಿಸ್ತು, ನಾಯಕತ್ವ ಗುಣ, ದೇಶಪ್ರೇಮದಂತಹ ಗುಣಗಳನ್ನು ಬೆಳೆಸುತ್ತದೆ. ಮಕ್ಕಳನ್ನು ಕ್ರೀಡೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು. ಪ್ರತಿಯೊಬ್ಬ ಕ್ರೀಡಾಪಟುವು ಗೆಲ್ಲಲು ಸಾಧ್ಯವಿಲ್ಲ ಆದರೆ ಕ್ರೀಡೆ ಮಾನಸಿಕ ಹಾಗೂ ಬಲಿಷ್ಠವಾದ ಯುವಶಕ್ತಿಯನ್ನು ಸಮಾಜಕ್ಕೆ ನೀಡುತ್ತದೆ. ಕ್ರೀಡೆಯನ್ನು ಪ್ರೋತ್ಸಾಹಿಸಲು ಬೇಕಾಗುವ ಪೂರಕ ವಾತಾವರಣಗಳಾದ ಆಟದ ಮೈದಾನ, ದೈಹಿಕ ಶಿಕ್ಷಕರು ಹಾಗೂ ಪೌಷ್ಠಿಕ ಆಹಾರವನ್ನು ಕ್ರೀಡಾಪಟುಗಳಿಗೆ ಒದಗಿಸಿಕೊಡಬೇಕು ಎಂದರು.ದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ವಾಸು, ಮೈಸೂರು ನಗರದಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸುವುದರಿಂದ ಆಗುವ ಅನುಕೂಲಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ಕ್ರೀಡಾಪಟುಗಳನ್ನು ತಯಾರಿಸಲು ಬೇಕಾಗುವ ಎಲ್ಲಾ ಸಹಕಾರವನ್ನು ಒದಗಿಸಲಾಗುವುದು ಎಂದರು.ಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮದ್ವರಾಜ್, ಶಾಸಕ ಸೋಮಶೇಖರ್, ವಿಧಾನಪರಿಷತ್ ಸದಸ್ಯ ಗೋವಿಂದರಾಜ್ ಮೊದಲಾದವರು ಉಪಸ್ಥಿತರಿದ್ದರು.
ರ ಏಕಲವ್ಯ ಪ್ರಶಸ್ತಿ ವಿಜೇತರು:ದಾಮಿನಿ ಕೆ ಗೌಡ -ಈಜು, ವಿದ್ಯಾ ವಿ. ಪಿಳ್ಳೈ-ಬಿಲಿಯರ್ಡ್ಸ್, ಪವನ್ ಶೆಟ್ಟಿ-ಬಾಡಿ ಬಿಲ್ಡಿಂಗ್, ನಿತಿನ್ ತಿಮ್ಮಯ್ಯ-ಹಾಕಿ, ರಾಜಗುರು ಎಸ್-ಕಬಡ್ಡಿ, ಕೃಷ್ಣಾ ಎ ನಾಯ್ಕೋಡಿ-ಸೈಕ್ಲಿಂಗ್, ಅರವಿಂದ ಎ-ಬ್ಯಾಸ್ಕೆಟ್ ಬಾಲ್, ಅರ್ಪಿತಾ ಎಂ-ಅಥ್ಲೆಟಿಕ್ಸ್, ಮೊಹಮದ್ ರಫೀಕ್ ಹೋಳಿ-ಕುಸ್ತಿ, ಮೇಘನಾ ಎಂ. ಸಜ್ಜನರ್-ರೈಪಲ್ ಶೂಟಿಂಗ್, ಧೃತಿ ತಾತಾಚಾರ್ ವೇಣುಗೋಪಾಲ್-ಲಾನ್ ಟೆನ್ನಿಸ್, ಅನೂಪ್ ಡಿ ಕೋಸ್ಟ- ವಾಲಿಬಾಲ್, ನಿಶ್ಚಿತಾ ಜಿ.ಎಂ.-ಬ್ಯಾಡ್ಮಿಂಟನ್, ಉಮೇಶ್ ರುದ್ರಪ್ಪಖಾಡೆ-ಪ್ಯಾರಾ-ಈಜು, ಶವಾದ್ ಜೆ.ಎಂ.-ಪ್ಯಾರಾ-ಅಥ್ಲೆಟಿಕ್ಸ್, ಕಾಂಚನ್ ಪಿ. ಮುನ್ನೋಲ್ಕರ್-ಬಾರ ಎತ್ತುವುದು. ಇವರಿಗೆ ರೂ 2 ಲಕ್ಷ ನಗದು ಏಕಲವ್ಯ ಕಂಚಿನ ಪ್ರತಿಮೆ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.
ಜೀವನಮಾನ ಸಾಧನೆ ಪ್ರಶಸ್ತಿ ವಿಜೇತರು: ಜಾನ್ ಕ್ರಿಸ್ಟೋಪರ್ ನಿರ್ಮಲ್ ಕುಮಾರ್-ಈಜು, ಶಿವಾನಂದ ಆರ್. -ಕುಸ್ತಿ. ಇವರಿಗೆ ರೂ 1.50 ಲಕ್ಷ ನಗದು, ಕಂಚಿನ ಪ್ರತಿಮೆ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.
ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ವಿಜೇತರು:ಡಿ.ಎನ್.ರುದ್ರಸ್ವಾಮಿ-ಯೋಗ, ಪೂರ್ಣಿಮಾ-ಥ್ರೋಬಾಲ್, ಅಮೋಘ ಯು ಚಚಡಿ-ಆಟ್ಯ-ಪಾಟ್ಯ, ರಂಜಿತ ಎಂ.ಪಿ-ಬಾಲ್ ಬ್ಯಾಡ್ಮಿಂಟನ್, ಪ್ರದೀಪ ಕೆ.ಸಿ.-ಖೋ ಖೋ, ಸುಮಿತ ಯು.ಎಂ. ಕಬಡ್ಡಿ, ಜೀವಂಧರ್ ಬಲ್ಲಾಳ್- ಕಂಬಳ, ಆನಂದ್ ಇರ್ವತ್ತೂರು-ಕಂಬಳ, ಆನಂದ ಎಲ್. ಕುಸ್ತಿ, ಮೋಶಪ್ಪ ವಿ ಗುಳಬಾಳ-ಗುಂಡು ಎತ್ತುವುದು. ಇವರಿಗೆ ರೂ 1 ಲಕ್ಷ ನಗದು, ಕಂಚಿನ ಪ್ರತಿಮೆ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.







