ಸಾರಿಗೆ ಇಲಾಖೆಯ ಇ-ಪಾವತಿ ವ್ಯವಸ್ಥೆಗೆ ಚಾಲನೆ
ಬೆಂಗಳೂರು, ಅ. 7: ಸಾರಿಗೆ ಇಲಾಖೆಯ ನವೀಕೃತ ಅಂತರ್ಜಾಲ ಹಾಗೂ ವಾಹನ ತೆರಿಗೆ ಪಾವತಿಗೆ ಇ-ಪಾವತಿ ವ್ಯವಸ್ಥೆಗೆ ಶಾಂತಿನಗರದ ಕೆಎಸ್ಸಾರ್ಟಿಸಿಕೇಂದ್ರ ಕಚೇರಿಯಲ್ಲಿ ಇಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಿದರು.
ನಂತರ ಪತ್ರಿಕಾ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತೆರಿಗೆದಾರರಿಗೆ ಅನುಕೂಲವಾಗುವಂತೆ ನೂತನ ವೆಬ್‌ಸೈಟ್ ಆರಂಭಿಸಲಾಗಿದೆ. ಆನ್‌ಲೈನ್ ಮೂಲಕವೇ ತೆರಿಗೆದಾರರು ಹಣ ಪಾವತಿಸುವುದರಿಂದ ಕಚೇರಿಗೆ ಅಲೆದಾಡುವುದು, ಸಮಯ ವ್ಯರ್ಥವಾಗುವುದು ತಪ್ಪುತ್ತದೆ ಎಂದು ಹೇಳಿದರು.
ಸಾರಿಗೆ ಇಲಾಖೆಗೆ ವಾರ್ಷಿಕ 5ಸಾವಿರ ಕೋಟಿ ರೂ. ಆದಾಯ ಹರಿದು ಬರುತ್ತಿದೆ. ನೂತನ ವೆಬ್‌ಸೈಟ್‌ನಲ್ಲಿ ಸಾರಿಗೆ ಇಲಾಖೆಯ 25 ಸೇವೆಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಲಾಗಿದೆ. ವಿಕಲಚೇತನರಿಗೆ ಸಂಬಂಧಿಸಿದ ನಿಯಮಗಳ ಅಳವಡಿಕೆ ಹಾಗೂ ಅಂಧರಿಗೆ ಅನುಕೂಲವಾಗುವಂತೆ ವೆಬ್‌ಸೈಟ್‌ವೀಕ್ಷಣಾ ಸೌಲಭ್ಯ ಕಲ್ಪಿಸಲಾಗಿದೆ. ಕಲಿಕಾ ಮತ್ತು ಚಾಲನಾ ಅನುಜ್ಞಾನ ಪತ್ರ, ವಾಹನ ನೋಂದಣಿ ಮತ್ತು ರಹದಾರಿಗಳಿಗೆ ಸಂಬಂಧಿಸಿದ ಸೇವೆಗಳ ಬಗ್ಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾಹಿತಿ ಒದಗಿಸಲಾಗಿದೆ ಎಂದು ತಿಳಿಸಿದರು.ನ್ನಡ ಭಾಷೆಯನ್ನೇ ಪ್ರಧಾನವಾಗಿರಿಸಿ ವೆಬ್‌ಸೈಟ್ ರೂಪಿಸಲಾಗಿದೆ. ಸಾಮಾಜಿಕ ಜಾಲತಾಣಗಳಾದ ೇಸ್‌ಬುಕ್, ಟ್ವಿಟರ್ ಖಾತೆಗಳನ್ನು ಸೇರ್ಪಡೆಗೊಳಿಸಲಾಗಿದೆ. ಸಾರ್ವಜನಿಕರು ಕುಂದುಕೊರತೆ, ಸಲಹೆಗಳನ್ನು ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಕಚೇರಿಗೆ ಸುಲಭವಾಗಿ ಸಲ್ಲಿಸುವ ಸೌಲಭ್ಯವನ್ನು ನೂತನ ವೆಬ್‌ಸೈಟ್‌ನಲ್ಲಿ ಒದಗಿಸಲಾಗಿದೆ ಎಂದರು





