ಸಚಿವ ರಮಾನಾಥ ರೈ ಪ್ರವಾಸ
ಮಂಗಳೂರು, ಅ.7: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಅ.8, 9 ಮತ್ತು 10ರಂದು ದ.ಕ. ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅ.8ರಂದು ಬೆಳಗ್ಗೆ 11ಕ್ಕೆ ಕಾರ್ಕಳ ಗ್ಯಾಲಕ್ಸಿ ವಿವಿಧೋದ್ದೇಶ ಸಭಾಭವನದಲ್ಲಿ ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ ಇದರ 62ನೆ ವನ್ಯಜೀವಿ ಸಪ್ತಾಹ ಆಚರಣೆ-2016 ಉದ್ಘಾಟನಾ ಸಮಾರಂಭ, ಅಪರಾಹ್ನ 3ಕ್ಕೆ ಹೊನ್ನುರುಪದವಿನ ದ.ಕ. ಜಿಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿದ್ದಕಟ್ಟೆ ಸರಕಾರಿ ಪಪೂ ಕಾಲೇಜಿನ ಎನ್ನೆಸೆಸ್ ಶಿಬಿರದ ಉದ್ಘಾಟನಾ ಸಮಾರಂಭ, ರಾತ್ರಿ 7:30ಕ್ಕೆ ಯುವಶಕ್ತಿ ಐರ್ವನಾಡು ಗ್ರಾಮ ಸುಳ್ಯ ಇದರ ಶಾರದೋತ್ಸವದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಅ.9ರಂದು ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ ಕಾರ್ಯಕ್ರಮದಲ್ಲಿ ಭಾಗವಹಿಸುವರು.ರಾತ್ರಿ 7:15ಕ್ಕೆ ವಾಮದಪದವು ಶಾರದೋತ್ಸವ ಸಮಿತಿಯ ಶಾರದೋತ್ಸವದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುವುದು. ಅ.10ರ ಬೆಳಗ್ಗೆ 10:30ಕ್ಕೆ ಪುತ್ತೂರು ಬಾಲವನ ಬಯಲು ರಂಗಮಂದಿರದಲ್ಲಿ ಡಾ.ಶಿವರಾಮ ಕಾರಂತ ಜನ್ಮದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಲಿರುವರು ಎಂದು ಪ್ರಕಟನೆ ತಿಳಿಸಿದೆ.





