ನಾಳೆ ಕುದ್ರೋಳಿ ಭಗವತೀ ಕ್ಷೇತ್ರದಲ್ಲಿ ವಿಶೇಷ ಕುಂಕುಮಾರ್ಚನೆ ಸೇವೆ
ಮಂಗಳೂರು, ಅ.7: ಕುದ್ರೋಳಿ ಶ್ರೀಭಗವತೀ ಕ್ಷೇತ್ರದಲ್ಲಿ ಶ್ರೀಭಗವತೀ ಮಾತೆಯರಿಗೆ ನವರಾತ್ರಿ ಉತ್ಸವದ ಪ್ರಯುಕ್ತ ಭಗವತೀ ಯುವಜನ ಸೇವಾ ಸಮಿತಿ ಹಾಗೂ ಮಹಿಳಾ ಸೇವಾ ಸಮಿತಿ ಜಂಟಿ ಆಶ್ರಯದಲ್ಲಿ ಅ.9ರಂದು ಮಧ್ಯಾಹ್ನ 12:30ಕ್ಕೆ ವಿಶೇಷ ಕುಂಕುಮಾರ್ಚನೆ ಸೇವೆ ನಡೆಯಲಿದೆ.
ಮಧ್ಯಾಹ್ನ 12ಕ್ಕೆ ಕೊಡಿಯಾಲ್‌ಬೈಲಿನಿಂದ ಶೋಭಾಯಾತ್ರೆ ಹೊರಡಲಿದ್ದು, 1ಕ್ಕೆ ಮಹಾಪೂಜೆ ನೆರವೇರಲಿದೆ. ಅ.10ರ ಮಧ್ಯಾಹ್ನ ಮಹಾಪೂಜೆ, ರಾತ್ರಿ 7:30ಕ್ಕೆ ಆಯುಧ ಪೂಜೆ, ಅ.11ರಂದು ಮಧ್ಯಾಹ್ನ 1ಕ್ಕೆ ವಿಜಯದಶಮಿ ಮಹಾಪೂಜೆ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





