ಚೀನಾ ಓಪನ್: ಮರ್ರೆ, ಫೆರರ್ ಸೆಮಿ ಫೈನಲ್‌ಗೆ

ಬೀಜಿಂಗ್, ಅ.7: ಆ್ಯಂಡಿ ಮರ್ರೆ ಹಾಗೂ ಡೇವಿಡ್ ಫೆರರ್ ಚೀನಾ ಓಪನ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿ ಫೈನಲ್ ತಲುಪಿದ್ದಾರೆ.
ಇಲ್ಲಿ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ 3 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಮರ್ರೆ ಡೇವಿಸ್‌ಕಪ್‌ನ ಸಹ ಆಟಗಾರ ಕೈಲ್ ಎಡ್ಮಂಡ್‌ರನ್ನು 7-6(11/9), 6-2 ಸೆಟ್‌ಗಳ ಅಂತರದಿಂದ ಮಣಿಸಿದರು. ಮತ್ತೊಂದು ಪಂದ್ಯದಲ್ಲಿ ಫೆರರ್ ಜರ್ಮನಿಯ ಯುವ ಆಟಗಾರ ಅಲೆಕ್ಸಾಂಡರ್ ಝ್ವೆರೆವ್‌ರನ್ನು 6-7(4/7), 6-1, 7-5 ಸೆಟ್‌ಗಳ ಅಂತರದಿಂದ ಸೋಲಿಸಿದರು.
ಜರ್ಮನಿಯ ಆಟಗಾರ ಅಲೆಕ್ಸಾಂಡರ್ ಸೆಪ್ಟಂಬರ್‌ನಲ್ಲಿ ಸೈಂಟ್‌ಪೀಟರ್‌ಬರ್ಗ್‌ನಲ್ಲಿ ನಡೆದ ಎಟಿಪಿ ಟೂರ್ನಿಯಲ್ಲಿ ಸ್ವಿಸ್‌ನ ವಿಶ್ವದ ನಂ.3ನೆ ಆಟಗಾರ ವಾವ್ರಿಂಕರನ್ನು ಮಣಿಸಿ ಪ್ರಶಸ್ತಿ ಜಯಿಸಿದ್ದರು.
ಮಹಿಳೆಯರ ಸಿಂಗಲ್ಸ್‌ನಲ್ಲಿ ಅಮೆರಿಕದ ಮ್ಯಾಡಿಸನ್ ಕೀ ರೆುಕ್‌ನ ಪೆಟ್ರಾ ಕ್ವಿಟೋವಾರನ್ನು 6-3, 6-7(2/7), 7-6(7/5) ಸೆಟ್‌ಗಳ ಅಂತರದಿಂದ ಸೋಲಿಸಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
Next Story





