ಚಲೋ ಉಡುಪಿ:ಜನನುಡಿಯಲ್ಲಿ ದೀಪಾ ಗಿರೀಶ್

ನಾನು ಕೊಲ್ಲುವುದಿಲ್ಲ
ಜಗತ್ತಿನ ಯಾರೊಬ್ಬರ ಹಸಿವೂ
ನನ್ನದೇ ಹಸಿವೆ.
ನಾನು ಹಸಿವೆಯನ್ನು ನಿರಾಕರಿಸುತ್ತೇನೆ
ಎಂದೇ ಗೌರವಿಸುತ್ತೇನೆ ಆಹಾರವನ್ನು
ಕುಂಬಳಕಾಯನ್ನೂ.. ದನದ ಬಾಡನ್ನೂ..
ಅದ ತಿನ್ನುವ ಮನುಷ್ಯರನ್ನೂ..
ನಾನು ಪ್ರಾಣಿಗಳನ್ನು ಕೊಲ್ಲುವುದಿಲ್ಲ..
ಆಹಾರಕ್ಕಾಗಿ ಕೊಂದು ತಿನ್ನುವ
ನನ್ನಂಥ ಮನುಷ್ಯರನ್ನೂ...
ನಾನು ಗೋವನ್ನು ಪ್ರೀತಿಸುತ್ತೇನೆ..
ಹಾಗೇ ಮನುಷ್ಯರನ್ನೂ..
ನಾನು ಯಾರನ್ನೂ ಪೂಜಿಸುವುದಿಲ್ಲ..
ಹಾಗೇ ಗೋವನ್ನೂ..
ಆಹಾರ ಪ್ರತಿಯೊಂದು ಜೀವಿಯ ವೈಯಕ್ತಿಕ ಆಯ್ಕೆ ಮತ್ತು ಹಕ್ಕು.. ಅದರೊಂದಿಗೆ ಕುಟುಂಬ, ಜಾತಿ ಅಥವಾ ಧರ್ಮಗಳ ಹಸ್ತಕ್ಷೇಪವನ್ನು ನಾನು ವಿರೋಧಿಸುತ್ತೇನೆ. ಆದ್ದರಿಂದ ನಾನು ಚಲೋ ಉಡುಪಿ ಜೊತೆಗಿದ್ದೇನೆ..
- ದೀಪಾ ಗಿರೀಶ್
Next Story





