ಏಕರೂಪ ನಾಗರೀಕ ಸಂಹಿತೆ ದೇಶದ ಶಾಂತಿ ಕದಡಬಹುದು: ಕಾಂತಪುರಂ

ಕೋಝಿಕ್ಕೋಡ್, ಅಕ್ಟೋಬರ್ 8 ಏಕರೂಪ ನಾಗರೀಕ ಸಂಹಿತೆ ತರುವ ಪ್ರಯತ್ನ ದೇಶದ ಶಾಂತ ವಾತಾವರಣವನ್ನು ಕೆಡಿಸಬಹುದು ಎಂದು ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ. ಯಾವ ಧರ್ಮದ ನಿಯಮಗಳು ಸಿವಿಲ್ ಕೋಡಾಗಿ ಪರಿವರ್ತನೆಗೊಳ್ಳಬಹುದು ಎಂಬ ಸಂದೇಹ ಉಳಿದಿದೆ. ಹಿಂದೂಧರ್ಮದ್ದೋ? ಇಸ್ಲಾಂ ಧರ್ಮದ್ದೋ? ಕ್ರೈಸ್ತರದ್ದೋ? ಈರೀತಿಯಲ್ಲಿ ಒಂದು ಏಕರೂಪ ನಾಗರೀಕ ಸಂಹಿತೆ ತರಲು ಸಾಧ್ಯವಿಲ್ಲ. ಭಾರತವು ವಿವಿಧತೆಯಲ್ಲಿ ಏಕತೆಯನ್ನು ಪಾಲಿಸುತ್ತಿರುವ ದೇಶವಾಗಿದೆ.
ಈಗಿನ ಈ ಸ್ಥಿತಿಯೇಮುಂದುವರಿಯುವುದು ಉತ್ತಮವಾಗಿದೆ. ಧಾರ್ಮಿಕ ಭಾವನೆಗಳಿಗೆ ಹಾನಿಯೆಸಗುವ ಕ್ರಮಗಳನ್ನು ಕೇಂದ್ರಸರಕಾರ ಮತ್ತುಪ್ರಧಾನಮಂತ್ರಿ ಸ್ವೀಕರಿಸುವರೆಂದು ತಾನು ಭಾವಿಸುವುದಿಲ್ಲ ಎಂದು ಸಮಾರಂಭದಲ್ಲಿ ಭಾಗವಹಿಸಿದ ಕಾಂತಪುರಂ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆಂದು ವರದಿ ತಿಳಿಸಿದೆ.
Next Story





