ಕೇರಳದ ಶಾಲೆಯಲ್ಲಿ ಆಕ್ಷೇಪಾರ್ಹ ಪಾಠ: ಪ್ರಕರಣ ದಾಖಲು

ತಿರುವನಂತಪುರ, ಅ.8: ವಿದ್ಯಾರ್ಥಿಗಳಿಗೆ ಆಕ್ಷೇಪಾರ್ಹ ಬೋಧನೆ ಮಾಡುತ್ತಿದ್ದ ಹಾಗೂ ಇಸ್ಲಾಂಗಾಗಿ ಪ್ರಾಣ ಕೊಡುವಂತೆ ಪ್ರಚೋದಿಸುತ್ತಿದ್ದ ಕೊಚ್ಚಿಯ ಶಾಲೆಯೊಂದರ ವಿರುದ್ಧ ಪ್ರಕರಣವೊಂದನ್ನು ದಾಖಲಿಸಲಾಗಿದೆ. ಈ ಪಠ್ಯವನ್ನು ವಿವಾದಿತ ಇಸ್ಲಾಂ ಬೋಧಕ ಝಾಕಿರ್ ನಾಯ್ಕಾನ ನಿಕಟವರ್ತಿಗಳು ರಚಿಸಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ.
ಎರ್ನಾಕುಲಂನ ತಮ್ಮನಂನಲ್ಲಿರುವ ಈ ಪೀಸ್ ಇಂಟರ್ನ್ಯಾಶನಲ್ ಸ್ಕೂಲ್ ಎಂಬ ಶಾಲೆಯು ಕೆಲವು ‘ಸ್ಥಳೀಯ ಪ್ರಭಾವಿ ವ್ಯಾಪಾರಿಗಳ’ ನೇತೃತ್ವದ ಟ್ರಸ್ಟೊಂದರ ಸಂಚಾಲಕತ್ವದ್ದಾಗಿರುತ್ತದೆ.
ಪೊಲೀಸರು ಐಪಿಸಿಯ ಸೆ.153ಎ ಹಾಗೂ 34ರನ್ವಯ ಶಾಲೆಯ ಪ್ರಿನ್ಸಿಪಾಲ್ ಆಡಳಿತಾಧಿಕಾರಿ ಹಾಗೂ ಮೂವರು ಟ್ರಸ್ಟಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆಂದು ಪೊಲೀಸ್ ಮೂಲಗಳು ಪಿಟಿಐಗೆ ತಿಳಿಸಿವೆ.
ಶಾಲೆಯಲ್ಲಿ ಕಲಿಸಲ್ಪಡುತ್ತಿರುವುದು ‘ಜಾತ್ಯತೀತವಾದುದಲ್ಲ’ ಎಂದು ಎರ್ನಾಕುಲಂ ಜಿಲ್ಲಾ ಶಿಕ್ಷಣಾಧಿಕಾರಿ ದಾಖಲಿಸಿದ್ದ ವರದಿಯೊಂದರ ಆಧಾರದಲ್ಲಿ ಈ ಮೊಕದ್ದಮೆ ಹೂಡಲಾಗಿದೆ.
Next Story





