Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಮ್ಯಾಥ್ಯೂ ಚಂಡಮಾರುತ: ಹೈಟಿಯಲ್ಲಿ 990...

ಮ್ಯಾಥ್ಯೂ ಚಂಡಮಾರುತ: ಹೈಟಿಯಲ್ಲಿ 990 ಬಲಿ

ವಾರ್ತಾಭಾರತಿವಾರ್ತಾಭಾರತಿ8 Oct 2016 9:13 PM IST
share
ಮ್ಯಾಥ್ಯೂ ಚಂಡಮಾರುತ:  ಹೈಟಿಯಲ್ಲಿ 990 ಬಲಿ

ಪೋರ್ಟ್ ಒ ಪ್ರಿನ್ಸ್,ಅ.8: ಶುಕ್ರವಾರ ಅಮೆರಿಕದ ಫ್ಲೋರಿಡಾವನ್ನು ಹಾದು ಹೋದ ಮ್ಯಾಥ್ಯೂ ಚಂಡಮಾರುತವು ಅದಕ್ಕೂ ಮುನ್ನ ಕೆರಿಬ್ಬಿಯನ್ ರಾಷ್ಟ್ರ ಹೈಟಿಯಲ್ಲಿ ಭಾರೀ ವಿನಾಶವನ್ನೇ ಮಾಡಿದೆ. ಅಮೆರಿಕಾ ಖಂಡದಲ್ಲಿ ಅತ್ಯಂತ ಬಡರಾಷ್ಟ್ರವಾಗಿರುವ ಹೈಟಿಗೆ ಈ ಚಂಡಮಾರುತ ಭಾರೀ ಆಘಾತವನ್ನು ನೀಡಿದ್ದು, ಸುಮಾರು 900 ಜನರು ಸಾವನ್ನಪ್ಪಿದ್ದಾರೆ. ಹತ್ತಾರು ಸಾವಿರ ಜನರು ಮನೆಮಠಗಳನ್ನು ಕಳೆದುಕೊಂಡು ನಿರ್ವಸಿತರಾಗಿದ್ದಾರೆ. ಚಂಡಮಾರುತವೀಗ ಅಮೆರಿಕದ ಜಾರ್ಜಿಯಾ ಸಮೀಪ ಸಾಗುತ್ತಿದ್ದು, ಅದರ ಗಾಳಿಯ ವೇಗ ಆರಂಭದ ಪ್ರತಿ ಗಂಟೆಗೆ 223 ಕಿ.ಮೀ.ನಿಂದ 19 ಕಿ.ಮೀ.ಗೆ ತಗ್ಗಿದೆ.

ಚಂಡಮಾರುತದ ಅಬ್ಬರಕ್ಕೆ ದೇಶದ ಇತರ ಭಾಗಗಳಿಂದ ಸಂಪರ್ಕವನ್ನು ಕಳೆದುಕೊಂಡಿದ್ದ ದೂರದ ಪ್ರದೇಶಗಳಲಿ ್ಲಸಂಭವಿಸಿರುವ ಸಾವುನೋವುಗಳು ಇದೀಗ ಬೆಳಕಿಗೆ ಬರುತ್ತಿದ್ದು, ಶುಕ್ರವಾರದವರೆಗೆ ಕನಿಷ್ಠ 877 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮ್ಯಾಥ್ಯೂ ಚಂಡಮಾರುತ ಅಮೆರಿಕದ ಕರಾವಳಿಗೆ ಅಪ್ಪಳಿಸುವ ಭೀತಿಯಲ್ಲಿ ಅಧ್ಯಕ್ಷ ಒಬಾಮಾ ಅವರು ಶುಕ್ರವಾರ ತುರ್ತು ಸ್ಥಿತಿಯನ್ನು ಘೋಷಿಸಿದ್ದರು. ಫ್ಲೋರಿಡಾದಿಂದ ಜಾರ್ಜಿಯಾದವರೆಗೆ ಮತ್ತು ದಕ್ಷಿಣ ಕೆರೋಲಿನಾದಿಂದ ಉತ್ತರ ಕೆರೋಲಿನಾವರೆಗೆ ಅಮೆರಿಕದ ಕರಾವಳಿಯಲ್ಲಿನ ಜನರನ್ನು ತೆರವುಗೊಳಿಸಲಾಗಿದೆ.

 ಚಂಡಮಾರುತ ದುರ್ಬಲಗೊಂಡಿದೆ ಎಂದು ನೆಮ್ಮದಿಯ ಭಾವನೆಗೆ ಪಕ್ಕಾಗದಂತೆ ಜನತೆಯನ್ನು ಆಗ್ರಹಿಸಿರುವ ಒಬಾಮಾ ಸುರಕ್ಷತಾ ಸೂಚನೆಗಳಿಗೆ ಕಿವಿಗೊಡುವಂತೆ ಕೋರಿಕೊಂಡಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಅಪ್ಪಳಿಸಿದ್ದ ಸ್ಯಾಂಡಿ ಚಂಡಮಾರುತದ ಬಳಿಕ ಅಮೆರಿಕವನ್ನು ಕಾಡಿರುವ ಅತ್ಯಂತ ಭೀಕರ ಚಂಡಮಾರುತವಾಗಿರುವ ಮ್ಯಾಥ್ಯೂ ಕುರಿತು ತುರ್ತು ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿಗಳನ್ನು ಪಡೆದುಕೊಂಡ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಒಬಾಮಾ ಅವರು, ಪ್ರಾಣ ಹಾನಿ ಮತ್ತು ಆಸ್ತಿ ನಷ್ಟದ ಭೀತಿ ಇನ್ನೂ ದೂರವಾಗಿಲ್ಲ ಎಂದು ತಿಳಿಸಿದರು.

ಮ್ಯಾಥ್ಯೂ ಚಂಡಮಾರುತ ಮಂಗಳವಾರ ಪ್ರತಿ ಗಂಟೆಗೆ 233 ಕಿ.ಮೀ.ವೇಗದ ಗಾಳಿಯೊಡನೆ ಹೈಟಿಯನ್ನು ಅಪ್ಪಳಿಸಿತ್ತು. ಜೊತೆಗೆ ಧಾರಾಕಾರ ಮಳೆಯೂ ಇತ್ತು. ಎತ್ತರದ ಸಮುದ್ರದ ಅಲೆಗಳು ತೀರದಲ್ಲಿನ ಹಲವಾರು ಗ್ರಾಮಗಳನ್ನು ಮುಳುಗಿಸಿದ್ದು, ಸುಮಾರು 65,000 ಜನರು ಮನೆಗಳನ್ನು ಕಳೆದುಕೊಂಡು ನಿರ್ವಸಿತರಾಗಿದ್ದಾರೆ. ಅವರಿಗೆ ಪರಿಹಾರ ಶಿಬಿರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ.

 ಹೈಟಿ 2010ರಲ್ಲಿ ಸಂಭವಿಸಿದ್ದ ಭೂಕಂಪವು ಉಂಟು ಮಾಡಿದ್ದ ವಿನಾಶದಿಂದ ಇನ್ನೂ ಪೂರ್ಣವಾಗಿ ಚೇತರಿಸಿಕೊಂಡಿಲ್ಲ,ಅಷ್ಟರಲ್ಲೇ ಮ್ಯಾಥ್ಯೂ ಚಂಡಮಾರುತ ಅದಕ್ಕೆ ಮೇಲೇಳಲಾಗದಂತಹ ಪೆಟ್ಟನ್ನು ನೀಡಿದೆ.

ಅತ್ತ ಅಮೆರಿಕದ ಫ್ಲೋರಿಡಾ ಕರಾವಳಿಯನ್ನು ಪ್ರತಿ ಗಂಟೆಗೆ 195 ಕಿಮೀ.ವೇಗದಲ್ಲಿ ಹಾದು ಹೋದ ಚಂಡಮಾರುತ ಅಲ್ಲಿ ಭೂಮಿಗೆ ಅಪ್ಪಳಿಸಿಲ್ಲ. ಅಲ್ಲಿ ನಾಲ್ಕು ಸಾವುಗಳು ವರದಿಯಾಗಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X