ವಿವಿ ಅಥ್ಲೆಟಿಕ್ಸ್: 2ನೆ ದಿನ ಮತ್ತೆ 12 ಕೂಟ ದಾಖಲೆ

ಉಡುಪಿ, ಅ.8:ಮಂಗಳೂರು ವಿವಿ ಅಂತರ ಕಾಲೇಜು 36ನೇ ಅಥ್ಲೆಟಿಕ್ ಕೂಟದ ಎರಡನೇ ದಿನದ ಸ್ಪರ್ಧೆಗಳಲ್ಲಿ ಮತ್ತೆ ಒಟ್ಟು 12 ಹೊಸ ಕೂಟ ದಾಖಲೆಗಳನ್ನು ಬರೆಯಲಾಯಿತು. ಇದರೊಂದಿಗೆ ಈ ಕ್ರೀಡಾಕೂಟದಲ್ಲಿ ದಾಖಲೆ ಪ್ರಮಾಣದಲ್ಲಿ ಒಟ್ಟು 21 ಹೊಸ ದಾಖಲೆಗಳು ನಿರ್ಮಾಣ ಗೊಂಡವು. ಇವುಗಳಲ್ಲಿ 20 ದಾಖಲೆಗಳನ್ನು ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಕ್ರೀಡಾಪಟುಗಳೇ ಅಳಿಸಿ ಮತ್ತೆ ಬರೆದರು.
ಇಂದು ಆಳ್ವಾಸ್ ಕ್ರೀಡಾಪಟುಗಳು 11 ದಾಖಲೆಗಳನ್ನು ಬರೆದರೆ, ಉಜಿರೆಯ ಎಸ್‌ಡಿಎಂ ಕಾಲೇಜಿನ ಮಹಿಳಾ ತಂಡ 100ಮೀ. ರಿಲೇ ಸ್ಪರ್ಧೆ ಯಲ್ಲಿ ಹಿಂದಿನ ದಾಖಲೆಯನ್ನು ಸರಿಗಟ್ಟಿತು. ಇಂದು ಪುರುಷರ ವಿಭಾಗದಲ್ಲಿ 6 ಹಾಗೂ ಮಹಿಳಾ ವಿಭಾಗದಲ್ಲಿ 6 ದಾಖಲೆಗಳು ಮೂಡಿಬಂದವು.
ಇತ್ತೀಚೆಗೆ ರಿಯೋದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಆಳ್ವಾಸ್‌ನ ದಾರುಣ್ ಎ. ಅವರು 400ಮೀ.. ಹರ್ಡರ್ಲ್ಸ್‌ನಲ್ಲಿ 51.9ಸೆ.ಗಳ ನೂತನ ದಾಖಲೆ ಬರೆದರು. ಅವರು ಆಳ್ವಾಸ್‌ನ ನಾಗಭೂಷಣ್ ಕಳೆದ ವರ್ಷ ಬರೆದ 53.3ಸೆ.ಗಳ ದಾಖಲೆ ಮುರಿದರು. ಕುತೂಹಲದ ವಿಷಯವೆಂದರೆ ಇಂದು ನಾಗಭೂಣ್ ಅವರು 53.2ಸೆ.ಗಳಲ್ಲಿ ದೂರ ಕ್ರಮನಿಸಿ ಕಳೆದ ಬಾರಿಯ ಸಾಧನೆಯನ್ನು ಉತ್ತಮ ಪಡಿಸಿದರೂ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು.
10,000ಮೀ. ಓಟದಲ್ಲಿ ಆಳ್ವಾಸ್‌ನ ರಂಜೀತ್ ಕುಮಾರ್ ಪಾಟೀಲ್ 32:36.2ಸೆ.ಗಳ ಹೊಸ ದಾಖಲೆ ಕಳೆದ ವರ್ಷ ತಾನೇ ಬರೆದ ದಾಖಲೆಯನ್ನು ಉತ್ತಮ ಪಡಿಸಿದರು. ಲಾಂಗ್‌ಜಂಪ್‌ನಲ್ಲಿ ಸಿದ್ಧಾರ್ಥ ಮೋಹನ್ ನಾಯ್ಕಾ 7.49ಮೀ. ದೂರ ನೆಗೆದು ಅವಿನ್ ಕುಮಾರ್ ಕೆ. ಅವರ 7.48ಮೀ.ಗಳ ದಾಖಲೆ ಅಳಿಸಿದರು. ಹ್ಯಾಮರ್ ತ್ರೋನಲ್ಲಿ ಗವಿಸ್ವಾಮಿ 55.74ಮೀ.ಗಳ ಸಾಧನೆಯೊಂದಿಗೆ ಕೌಸೀಮ್ 2014-15ರಲ್ಲಿ ಸ್ಥಾಪಿಸಿದ 55.27ಮೀ. ದಾಖಲೆ ಮುರಿದರು.
ಆಳ್ವಾಸ್‌ನ ಪುರುಷರ ತಂಡ 100ಮೀ. ಹಾಗೂ 400ಮೀ. ಸ್ಪರ್ಧೆಗಳಲ್ಲಿ ನೂತನ ದಾಖಲೆಗಳನ್ನು ಬರೆದವು. 100ಮೀ. ರಿಲೇಯಲ್ಲಿ 42.2ಸೆ. (ಹಳೆಯದು 42.25ಸೆ.) ಹಾಗೂ 400ಮೀ.. ರಿಲೇಯಲ್ಲಿ 3:19.4ಸೆ. ( 3:19.9) ನೂತನ ದಾಖಲೆಗಳು ಬರೆಯಲ್ಪಟ್ಟವು.
ಮಹಿಳೆಯರ ವಿಭಾಗದ 400ಮೀ. ಹರ್ಡಲ್ಸ್‌ನಲ್ಲಿ ಅನು ಆರ್. 01:02.6 ದಾಖಲೆ (01:03.3ಸೆ.) ಬರೆದರೆ, 10,000ಮೀ.ಓಟದಲ್ಲಿ ಚೌಹಾನ್ ಜ್ಯೋತಿ ಜಗ್‌ಬಹಾದ್ದೂರ್37:31.7 ಸೆ.ಗಳ (38:08.7) ದಾಖಲೆಯನ್ನು ಮಾಡಿದರು. ಶಾಟ್‌ಪುಟ್‌ನಲ್ಲಿ ಅನಾಮಿಕ ದಾಸ್ 13.94ಮೀ.ಗಳ ಸಾಧನೆ ಮಾಡಿ 13.53ಮೀ. ದಾಖಲೆ ಮುರಿದರು. ಇದರಲ್ಲಿ ದ್ವಿತೀಯ ಸ್ಥಾನ ಪಡೆದ ಸೋನಲ್ ಗೋಯಲ್ ಅವರು ಸಹ ಗುಂಡನ್ನು 13.58ಮೀ. ದೂರ ಎಸೆದು ಹಿಂದಿನ ದಾಖಲೆಯನ್ನು ಮೀರಿದರು.
ಹ್ಯಾಮರ್ ಥ್ರೋನಲ್ಲಿ ನಿಶಾ ಯಾದವ್ ಅವರು 54.56ಮೀ.ನ ನೂತನ ದಾಖಲೆ (42.19) ಬರೆದರು. 100ಮೀ.. ರಿಲೇಯಲ್ಲಿ ಎಸ್‌ಡಿಎಂ ಮಹಿಳಾ ತಂಡ 47.9ಸೆ.ಗಳಲ್ಲಿ ಮೊದಲಿಗರಾಗಿ ಗುರಿ ಮುಟ್ಟಿ ಆಳ್ವಾಸ್‌ನ ಹಿಂದಿನ ದಾಖಲೆ ಸರಿಗಟ್ಟಿದರೆ, 400ಮೀ. ರಿಲೇಯಲ್ಲಿ ಆಳ್ವಾಸ್ ತಂಡ 3:52.5ಸೆ.ಗಳ ಹೊಸ ದಾಖಲೆ (4:02.4) ಬರೆಯಿತು.
ಎರಡನೇ ದಿನದ ಫಲಿತಾಂಶ:
ಪುರುಷರ ವಿಭಾಗ
200ಮೀ.: 1.ಮನಿಷ್, ಎಂಜಿಎಂ (21.3ಸೆ.),2. ಅನುರೂಪ್ ಜಾನ್, ಆಳ್ವಾಸ್ 3.ರೋಹಿತ್, ತೆಂಕನಿಡಿಯೂರು.
1500ಮೀ..:
1.ಮಂಜಿತ್ ಸಿಂಗ್, ಆಳ್ವಾಸ್ (3:59.9ಸೆ.), 2. ವಾಗ್ ಸುರೇಶ್ ಹಿರಾಮನ್, ಆಳ್ವಾಸ್, 3.ಚಿದಾನಂದ ಎಚ್.ವಿ.ನಿಟ್ಟೆ ಕಾಲೇಜು.
10,000ಮೀ.:
1.ರಂಜಿತ್ ಕುಮಾರ್ ಪಾಟೀಲ್, ಆಳ್ವಾಸ್(32:36.2), 2.ರಾಜಕುಮಾರ್ ಸಿಂಗ್, ಆಳ್ವಾಸ್ ಸಂಜೆ ಕಾಲೇಜು, 3.ಕುಂಬಾರ ಕಾಂತಿಲಾಲ್ ಡಿ, ಆಳ್ವಾಸ್.
ಲಾಂಗ್‌ಜಂಪ್:
1.ಸಿದ್ಧಾರ್ಥ ಮೋಹನ್ ನಾಯ್ಕ, ಆಳ್ವಾಸ್ (7.49), 2.ಸಿರಾಜುದ್ದೀನ್ ಸಿ., ಆಳ್ವಾಸ್, 3.ಅವಿನ್ ಕುಮಾರ್, ವಿವಿ ಕಾಲೇಜು ಮಂಗಳ ಗಂಗೋತ್ರಿ.
ಹೈಜಂಪ್:
1.ಶ್ರೀನಾತ್ ಮೋಹನ್, ಆಳ್ವಾಸ್ (2.12ಮೀ..), 2.ನಿತಿನ್, ಆಳ್ವಾಸ್, 3.ಅಖಿಲ್‌ಜೋರ್ಜ್, ವಿವಿ ಕಾಲೇಜು ಮಂಗಳಗಂಗೋತ್ರಿ.
ಜಾವೆಲಿನ್ ಥ್ರೋ:
1.ಅಶಿಸ್ ಸಿಂಗ್, ಆಳ್ವಾಸ್ (63.40ಮೀ.), 2.ಮನಿಷ್ ಲಕ್ಷ್ಮಣ್, ತೆಂಕನಿಡಿಯೂರು, 3.ಹರ್ಷ, ಶಾರದಾ ಕಾಲೇಜು ಬಸ್ರೂರು.
ಹ್ಯಾಮರ್ ಥ್ರೋ:
1.ಗವಿಸ್ವಾಮಿ, ಆಳ್ವಾಸ್ (55.74ಮೀ.), 2.ಕೇಶವ, ಆಳ್ವಾಸ್, 3.ಸುದರ್ಶನ್, ನಿಟ್ಟೆ ಕಾಲೇಜು.
110ಮೀ. ಹರ್ಡಲ್ಸ್:
1.ಪ್ರವೀಣ್ ಜೇಮ್ಸ್, ಆಳ್ವಾಸ್ (14.8ಸೆ.), 2.ಶೇರೆಗಾರ್ ಕಿಶನ್ ಚಂದ್ರಶೇಖರ್, ಆಳ್ವಾಸ್, 3.ತುಷಾರ್, ಎಸ್‌ಡಿಎಂ ಮಂಗಳೂರು.
400ಮೀ.. ಹರ್ಡಲ್ಸ್:
1.ದಾರುಣ್ ಎ., ಆಳ್ವಾಸ್ (51.9ಸೆ.), 2.ನಾಗಭೂಷಣ್ ಸಿ.ಪಿ. ಆಳ್ವಾಸ್, 3.ಚರಣ್ ಕೆ.ಬಿ., ಆಳ್ವಾಸ್.
ಡೆಕಾತ್ಲಾನ್:
1.ಧೀರಜ್, ಆಳ್ವಾಸ್ (5957ಅಂಕ), 2.ಜಗತಾರ್ ಸಿಂಗ್, ಆಳ್ವಾಸ್ 3.ಹಸನ್ ಎ., ಎಂಜಿಎಂ ಕಾಲೇಜು ಉಡುಪಿ.
100ಮೀ. ರಿಲೇ:
1.ಆಳ್ವಾಸ್ ಮೂಡಬಿದ್ರೆ (42.2ಸೆ.), 2.ಮಂಗಳೂರು ವಿವಿ ಕ್ಯಾಂಪಸ್ ಮಂಗಳಗಂಗೋತ್ರಿ,3.ಎಸ್‌ಡಿಎಂ ಕಾಲೇಜು ಉಜಿರೆ.
400ಮೀ. ರಿಲೇ:
1.ಆಳ್ವಾಸ್ ಮೂಡಬಿದ್ರೆ (3:19.4), 2.ಡಾ.ಎನ್‌ಎಸ್‌ಎಎಂ ಕಾಲೇಜು ನಿಟ್ಟೆ, 3.ಎಸ್‌ಡಿಎಂ ಕಾಲೇಜು ಉಜಿರೆ.
ಮಹಿಳಾ ವಿಭಾಗ:
200ಮೀ.:
1.ಅಕ್ಷತಾ ಪಿ.ಎಸ್., ಎಸ್‌ಡಿಎಂ ಉಜಿರೆ (25.1ಸೆ.), 2.ಪದ್ಮಿನಿ ಎಂ.ಜಿ., ಆಳ್ವಾಸ್, 3.ವಿಶ್ವ, ಆಳ್ವಾಸ್.
1,500ಮೀ.:
1.ಸಿಂಗ್ ರಿಶು ದಾಲ್‌ಸಿಂಗರ್, ಆಳ್ವಾಸ್ (4:46.7), 2.ಸಫೀದಾ ಎಂ.ಪಿ., ಆಳ್ವಾಸ್, 3.ಸುಮಾ, ನಿಟ್ಟೆ ಕಾಲೇಜು.
10,000ಮೀ..:
1.ಚೌಆನ್ ಜ್ಯೋತಿ ಜಗ್‌ಬಹುದ್ದೂರ್, ಆಳ್ವಾಸ್ (37:31.7), 2.ಕೆ.ಎಂ.ಮೀನು, ಆಳ್ವಾಸ್, 3.ಮೇಘನಾ ಕೆ., ಎಸ್‌ಡಿಎಂ ಉಜಿರೆ.
ಲಾಂಗ್‌ಜಂಪ್
1.ಐಶ್ವರ್ಯ, ಆಳ್ವಾಸ್ (6.03ಮೀ..), 2.ಪ್ರಿಯಾ ಎ, ಎಸ್‌ಡಿಎಂ ಉಜಿರೆ, 3.ಸ್ನೇಹಾ ಎಸ್.ಎಸ್., ಎಸ್‌ಡಿಎಂ ಉಜಿರೆ.
ಹೈಜಂಪ್:
1.1.ಚೈತ್ರ ರೋಹಿದಾಸ್ ವರ್ಣೇಕರ್, ಆಳ್ವಾಸ್ (1.63ಮೀ.), 2.ಶಾಲಿನಿ, ಆಳ್ವಾಸ್, 3.ದಿವ್ಯಾ, ಎಸ್‌ಡಿಎಂ ಉಜಿರೆ.
ಶಾಟ್‌ಪುಟ್:
1. ಅನಾಮಿಕ ದಾಸ್, ಆಳ್ವಾಸ್ (13.96ಮೀ..), 2.ಸೋನಲ್ ಗೋಯೆಲ್, ಆಳ್ವಾಸ್, 3.ತೀಸಿಮಾ, ಮಂಗಳೂರು ವಿವಿ ಕ್ಯಾಂಪಸ್.
ಹ್ಯಾಮರ್ ಥ್ರೋ:
1.ನಿಶಾ ಯಾದವ್, ಆಳ್ವಾಸ್ (54.56ಮೀ.), 2.ಪ್ರೀತಿಕಾ ಆಳ್ವಾ, ಆಳ್ವಾಸ್, 3.ಆನುಶ್ರೀ, ವೆಂಕಟರಮಣ ಮಹಿಳಾ ಕಾಲೇಜು ಕಾರ್ಕಳ.
100ಮೀ.. ಹರ್ಡಲ್ಸ್:
1.ಸಿಮೋನಾ ಮಸ್ಕರೇನಸ್, ಆಳ್ವಾಸ್ (15.2ಸೆ.), 2.ಮಂಜುಳಾ ವಿ.ಹಿರೇಮಠ್, ನಿಟ್ಟೆ ಕಾಲೇಜು, 3. ಲಕ್ಷ್ಮೀ ಜಿಎಂ, ಎಸ್‌ಡಿಎಂ ಉಜಿರೆ.
400ಮೀ. ಹರ್ಡಲ್ಸ್:
1.ಅನು ಆರ್, ಆಳ್ವಾಸ್ (01.02.6ಸೆ.), 2. ಸಿಮೋನಾ ಮಸ್ಕರೇನಸ್, ಆಳ್ವಾಸ್, 3.ಲಕ್ಷ್ಮಿಜಿ.ಎಂ., ಎಸ್‌ಡಿಎಂ ಉಜಿರೆ.
ಹೆಪ್ಟತ್ಲಾನ್:
1. ಅಕ್ಷತಾ, ಎಸ್‌ಡಿಎಂ ಉಜಿರೆ (3693), 2.ಜೆಸ್ಮಿ ಥಾಮಸ್, ಆಳ್ವಾಸ್, 3.ರೇಶ್ಮಾ ಶೇಖರ್ ನಾಯಕ್, ಆಳ್ವಾಸ್.
100ಮೀ. ರಿಲೇ:
1.ಎಸ್‌ಡಿಎಂ ಉಜಿರೆ (47.9ಸೆ.), 2.ಆಳ್ವಾಸ್, 3. ನಿಟ್ಟೆ ಕಾಲೇಜು ನಿಟ್ಟೆ. 400ಮೀ. ರಿಲೇ:1.ಆಳ್ವಾಸ್ ಕಾಲೇಜು (3:52.5), 2.ಎಸ್‌ಡಿಎಂ ಉಜಿರೆ, 3.ಮಂಗಳೂರು ವಿವಿ ಕ್ಯಾಂಪಸ್, ಮಂಗಳಗಂಗೋತ್ರಿ







