ಮಹಿಳಾ ದಸರಾಕ್ಕೆ ಸಾಂಸ್ಕೃತಿಕ ಮೆರುಗು

ಮಡಿಕೇರಿ, ಅ.8: ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆದ ಮಹಿಳಾ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಮೊದಲ ಬಾರಿಗೆ ನಾಡಿನ ಖ್ಯಾತ ಗಾಯಕಿ ಎಂ.ಡಿ.ಪಲ್ಲವಿ ಗಾಯನ ಕಾರ್ಯಕ್ರಮ ಮಹಿಳಾ ದಸರಾದ ಪ್ರಮುಖ ಆಕರ್ಷಣೆಯಾಗಿತ್ತು. ಉಳಿದಂತೆ ಮಡಿಕೇರಿಯ ನಾಯರ್ಸ್ ಸೊಸೈಟಿ ವತಿಯಿಂದ ತಿರುವಾದಿರ ನೃತ್ಯ, ಮಡಿಕೇರಿಯ ಸ್ಪಂದನ ಮಹಿಳಾ ತಂಡದಿಂದ ನೃತ್ಯ ಸಂಭ್ರಮ, ಮಾಲ್ದಾರೆಯ ಶ್ರೀಮುತ್ತಪ್ಪನ್ ಚಂಡೆಮೇಳದ ಮಹಿಳಾ ತಂಡದಿಂದ ಸಿಂಗಾರಿ ಮೇಳ, ಮೈಸೂರಿನ ತಾಂಡವಂ ತಂಡದ ಮಹಿಳಾ ಕಲಾವಿದೆಯರಿಂದ ವ್ಯಾಘ್ರ ನೃತ್ಯ, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ವಿದ್ಯಾರ್ಥಿನಿಯರಿಂದ ಡೇರ್ ಟು ಡ್ಯಾನ್ಸ್ ಕಾರ್ಯಕ್ರಮಗಳು ನಡೆದವು.
Next Story





