ಬಾಂಗ್ಲಾ ಕೆಫೆ ದಾಳಿ: 4 ಭಯೋತ್ಪಾದಕರ ಹತ್ಯೆ
.jpg)
ಢಾಕಾ, ಅ. 8: ಢಾಕಾದ ಕೆಫೆಯೊಂದರಲ್ಲಿ 22 ಮಂದಿಯನ್ನು ಬಲಿತೆಗೆದುಕೊಂಡ ದಾಳಿಯನ್ನು ನಡೆಸಿದ ಭಯೋತ್ಪಾದನಾ ಗುಂಪಿನ ನಾಲ್ವರು ಸದಸ್ಯರನ್ನು ಬಾಂಗ್ಲಾದೇಶದ ಭದ್ರತಾ ಪಡೆಗಳು ಶನಿವಾರ ಕೊಂದಿವೆ.
ಬಾಂಗ್ಲಾದೇಶದ ರ್ಯಾಪಿಡ್ ಆ್ಯಕ್ಷನ್ ಬೆಟಾಲಿಯನ್ (ಆರ್‌ಎಬಿ) ಢಾಕಾದ ಹೊರವಲಯದ ಭಯೋತ್ಪಾದಕ ಅಡಗುದಾಣಗಳ ಮೇಲೆ ನಡೆಸಿದ ಎರಡು ದಾಳಿಗಳಲ್ಲಿ ಜಮಾತುಲ್-ಮುಜಾಹಿದೀನ್‌ನ ಸದಸ್ಯರೆಂದು ನಂಬಲಾದ ನಾಲ್ವರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಆರ್‌ಎಬಿ ವಕ್ತಾರ ಮಿಝನುರ್ ರಹ್ಮಾನ್ ಭೂಯ ತಿಳಿಸಿದರು.
Next Story





