ತಮಿಳುನಾಡು ಸಚಿವರ ಆಪ್ತ ಕಾರ್ಯದರ್ಶಿ ಸೇರಿ 11 ಮಂದಿ ಆರೋಪಿಗಳ ಬಂಧನ
ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ
ಬೆಂಗಳೂರು, ಅ. 8: ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಇಲ್ಲಿನ ಸಿಸಿಬಿ ಪೊಲೀಸರು ತಮಿಳುನಾಡಿನ ಸಚಿವ ಬಾಲಕೃಷ್ಣರೆಡ್ಡಿಯ ಆಪ್ತ ಕಾರ್ಯದರ್ಶಿ ಸೇರಿ 11 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ರಾಜೇಶ್ (26), ಪ್ರಮೋದ್ ಕುಮಾರ್ (23), ಮಂಜು (26) ದೇವ್‌ಸಿಂಗ್ ಬಂಡಾರಿ (28), ಜಾಯಿಶಾಹ (26), ಕನ್ನಯ್ಯ ಲಾಲ್ (37), ರವಿಕಾಂತ್ (25), ಪವನ್ ಕುಮಾರ್(40), ಸತ್ಯನಾರಾಯಣ (ತಮಿಳು ನಾಡು ಮಂತ್ರಿ ಬಾಲಕೃಷ್ಣ ರೆಡ್ಡಿಯ ಆಪ್ತ ಕಾರ್ಯದರ್ಶಿ, 43), ಶ್ರೀನಾಥ್ ಶಾಸ್ತ್ರಿ, ಸೌರಭ್ ರಾಯ್(30) ಎಂದು ಗುರುತಿಸಲಾಗಿದೆ.ರೋಪಿಗಳು ಇಲ್ಲಿನ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ನೂರು ಅಡಿ ರಸ್ತೆಯಲ್ಲಿನ ಹತ್ತನೆ ಮುಖ್ಯ, ನ್ಯೂ ಶಾಂತಿ ಸಾಗರ್ ಹೊಟೇಲ್ ಎದುರಿನ ಮನೆಯೊಂದರಲ್ಲಿ ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ 12 ಮೊಬೈಲ್‌ಫೋನ್‌ಗಳು, 10,250 ರೂ.ನಗದು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ದಂಧೆಯಲ್ಲಿ ತೊಡಗಿಸಿದ್ದ ಪಶ್ಚಿಮ ಬಂಗಾಲ ಮೂಲದ ನಾಲ್ಕು ಮಂದಿ ಯುವತಿಯರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ೆಲಸ ಕೊಡಿಸುವ ನೆಪದಲ್ಲಿ ಹೊರ ರಾಜ್ಯಗಳಿಂದ ಹುಡುಗಿಯರನ್ನು ಕರೆತಂದು ಮಸಾಜ್ ಪಾರ್ಲರ್ ನೆಪದಲ್ಲಿ ಗಿರಾಕಿಗಳನ್ನು ಬರಮಾಡಿಕೊಂಡು ‘ಬಾಡಿ ಟು ಬಾಡಿ, ಹ್ಯಾಪಿ ಎಂಡಿಂಗ್, ಸ್ಯಾಂಡ್‌ವಿಚ್’ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಿಕೊಂಡಿದ್ದು, ತಲೆ ಮರೆಸಿಕೊಂಡಿರುವ ಬಾಲಾಜಿಗೌಡ, ಮ್ಯಾನೇಜರ್ ಉಮೇಶ್ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಕಟ್ಟಡವನ್ನು ಬಾಡಿಗೆ ನೀಡಿದ ಸೀಮಾ, ಪ್ರಿಯಾ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ.







