ಮಿನಿಬಸ್‌ಗೆ ಲಾರಿ ಢಿಕ್ಕಿ: 11 ಮಂದಿಗೆ ಗಾಯ
ಹೆಬ್ರಿ, ಅ.8: ಮುದ್ರಾಡಿ ಶ್ರೀಗಣಪತಿ ದೇವಸ್ಥಾನದ ಬಳಿ ಅ.8ರಂದು ಬೆಳಗ್ಗೆ 7:15ರ ಸುಮಾರಿಗೆ ಮಿನಿ ಬಸ್‌ಗೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ 11 ಮಂದಿ ಗಾಯಗೊಂಡ ಬಗ್ಗೆ ವರದಿಯಾಗಿದೆ.
ವಿಟ್ಲದಿಂದ ಶಿವಮೊಗ್ಗದ ಹೊಸನಗರಕ್ಕೆ ಹೋಗುತ್ತಿದ್ದ ಮಿನಿಬಸ್‌ಗೆ ಹೆಬ್ರಿ ಕಡೆಯಿಂದ ಬಂದ ಲಾರಿ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಇದರಿಂದ ಬಸ್ಸಿನಲ್ಲಿದ್ದ ಕೃಷ್ಣಕುಮಾರಿ ಬದನಾಜೆ, ಕೃಷ್ಣವೇಣಿ ಸೇರಾಜೆ, ಜಯಲಕ್ಷ್ಮೀ ಬಿ.ಸಿ.ರೋಡ್, ಇಂದಿರಾ ವಿಟ್ಲ, ಮಿನಿ ಬಸ್ ಚಾಲಕ ರಾಜೇಶ್ ತೀವ್ರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅದೇ ರೀತಿ ಸಣ್ಣ ಪುಟ್ಟ ಗಾಯಗೊಂಡಿರುವ ಸೇರಾಜ್ ಸುಬ್ರಹ್ಮಣ್ಯ ಭಟ್, ರವಿ ಜೋಷಿ ವಿಟ್ಲ, ಬಿ.ಶ್ಯಾಂ ಭಟ್, ಅದಿತಿ ಪಡಾರು, ಲತಾ ಶಿವ ಕುಮಾರ್, ಈಶ್ವರಿ ಭಟ್ ಎಂಬವರು ಹೆಬ್ರಿಯ ರಾಘವೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





