ಅ.16ರಂದು ಶಾಂತಿಗಾಗಿ ಗೋವಾ ಚರ್ಚ್‌ಗಳಲ್ಲಿ ಪ್ರಾರ್ಥನೆ
ಪಣಜಿ, ಅ.8: ಭಾರತ-ಪಾಕಿಸ್ತಾನಗಳ ನಡುವೆ ಹೆಚ್ಚಿರುವ ಉದ್ವಿಗ್ನತೆಯ ಮಧ್ಯವೇ, ಪ್ರದೇಶದಲ್ಲಿ ಶಾಂತಿಗಾಗಿ ಗೋವಾ ದ್ಯಂತದ ಚರ್ಚ್‌ಗಳು ಅ.16ರಂದು ಪ್ರಾರ್ಥನೆ ನಡೆಸಲಿವೆ.
ನಮ್ಮ ಗಡಿಗಳಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಉದ್ವಿಗ್ನತೆ ಸಂಬಂಧಿತ ದೇಶಗಳ ಜನರಲ್ಲಿ ಗಂಭೀರ ಕಳವಳ ಮೂಡಿಸಿದೆ. ಇದು, ಅಕ್ಟೋಬರ್ 16ನ್ನು ಭಾರತಕ್ಕಾಗಿ ಪ್ರಾರ್ಥನೆ ಸಲ್ಲಿಸಲು ಮೀಸಲಿರಿಸುವಂತೆ ಸುತ್ತೋಲೆ ಹೊರಡಿಸಲು ಭಾರತದ ಕೆಥೊಲಿಕ್ ಬಿಷಪರ ಸಮ್ಮೇಳನದ ಅಧ್ಯಕ್ಷರಿಗೆ ಪ್ರಚೋದನೆ ನೀಡಿದೆಯೆಂದು ಗೋವಾ ಮತ್ತು ದಾಮನ್‌ನ ಅರ್ಚ್ ಬಿಷಪ್, ಫಿಲಿಪ್ ನೆರಿ ಫೆರಾರೊ ಇಂದು ತಿಳಿಸಿದ್ದಾರೆ.
Next Story





