ಶಾಲೆಗಳು ಮುಚ್ಚಿರುವುದರಿಂದ ನಿರುದ್ಯೋಗಿಯಾಗಿದ್ದೇನೆ; ಕೆಲಸ ಕೊಡಿ
ಕಾಶ್ಮೀರ ಶಾಲಾ ಶಿಕ್ಷಣ ನಿರ್ದೇಶಕನ ಅಳಲು
ಶ್ರೀನಗರ, ಅ.8: ಕಣಿವೆಯಲ್ಲಿ ಮೂರು ದಿನಗಳಿಂದ ಮುಂದುವರಿದಿರುವ ಹಿಂಸಾಚಾರದಿಂದಾಗಿ ಇಲ್ಲಿನ ಶಾಲೆಗಳೆಲ್ಲ ಮುಚ್ಚಿವೆ. ಇದರಿಂದಾಗಿ ತನಗೀಗ ಕೆಲಸವಿಲ್ಲದಾಗಿದೆ. ತನಗೆ ಕೆಲಸವೊಂದು ಬೇಕು ಎಂದು ಕಾಶ್ಮೀರದ ಶಾಲಾ ಶಿಕ್ಷಣ ನಿರ್ದೇಶಕನ ಫೇಸ್‌ಬುಕ್ ಪೋಸ್ಟ್ ನಾಗರಿಕರ ತೀಕ್ಷ್ಣ ಪ್ರತಿಕ್ರಿಯೆಗೆ ಹೇತುವಾಗಿದೆ.
ತಾನು ಮುಚ್ಚಿರುವ ಶಾಲೆಗಳ ನಿರ್ದೇಶಕ ನಾಗಿದ್ದೇನೆಂದು ಶಾ ಫೈಸಲ್ ಎಂಬವರು, ಕಾಶ್ಮೀರ ಹಿಂಸಾಚಾರದಿಂದ ಶಾಲೆಗಳು ಮುಚ್ಚಿರುವುದನ್ನು ಲ್ಲೇಖಿಸಿ ಪೋಸ್ಟ್ ಮಾಡಿದ್ದಾರೆ.
ಕೆಲವರು ಫೈಸಲ್‌ರನ್ನು ಟೀಕಿಸಿದ್ದರೆ, ಇನ್ನು ಕೆಲವರು ಪರ್ಯಾಯ ಉದ್ಯೋಗಗಳ ಸಲಹೆ ನೀಡಿದ್ದಾರೆ. ಕೆಲವರು ಅವರನ್ನು ಪ್ರತ್ಯೇಕತಾವಾದಿಗಳ ಪಾಳಯ ಸೇರುವಂತೆ ಆಹ್ವಾನಿಸಿದ್ದಾರೆ. ಆದರೆ, ಹಲವರು ಅವರಿಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.
Next Story





