ಅ.13ರಂದು ಕಾರಂತ ಹುಟ್ಟುಹಬ್ಬ ಆಚರಣೆ
ಮಂಗಳೂರು, ಅ.8: ದ.ಕ. ಜಿಲ್ಲಾ ಕಸಾಪ ಹಾಗೂ ಕಲ್ಕೂರ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಅ.13ರಂದು ಸಂಜೆ 5ಕ್ಕೆ ನಗರದ ಡಾನ್‌ಬಾಸ್ಕೊ ಹಾಲ್‌ನಲ್ಲಿ ಕಾರಂತ ಹುಟ್ಟುಹಬ್ಬ ಸಮಾರಂಭವನ್ನು ಏರ್ಪಡಿಸಲಾಗಿದೆ.
ಈ ಸಂದರ್ಭ ಶಿಕ್ಷಣ ತಜ್ಞೆ, ಜಾನಪದ ವಿದ್ವಾಂಸ ಡಾ.ಲೀಲಾ ಉಪಾಧ್ಯಾಯ ಅವರಿಗೆ ಕಾರಂತ ಪ್ರಶಸ್ತಿ ನೀಡಲಾಗುವುದು. ಜನಪದ ವಿದ್ವಾಂಸರಾದ ಕೇಳು ಮಾಸ್ತರ್ ಅಗಲ್ಪಾಡಿ, ಸುನಿತ್ ಕುಮಾರ್ ಡಿ. ಇವರಿಗೆ ವಿಶೇಷ ಪುರಸ್ಕಾರ, ಡಾ.ಎಂ.ಶಂಕರ ಭಟ್ ಇವರಿಗೆ ಸಾಹಿತ್ಯ ಸಿರಿ ಗೌರವ ಮತ್ತು ಅಶ್ವಿನಿ ಆಚಾರ್ಯ ಸುರತ್ಕಲ್ ಇವರಿಗೆ ಕಲ್ಕೂರ ಯುವ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಎಸ್.ಪ್ರದೀಪ್ ಕುಮಾರ ಕಲ್ಕೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಮಾರಂಭವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಉದ್ಘಾಟಿಸುವರು. ಕಾರಂತ ಹುಟ್ಟುಹಬ್ಬ ಪ್ರಯುಕ್ತ ಏರ್ಪಡಿಸಲಾಗಿದ್ದ ಕಾರಂತ ಚಿತ್ರ ರಚನಾ ಸ್ಪರ್ಧೆ ವಿಜೇತರಿಗೆ ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಮಹಾ ಪ್ರಬಂಧಕ ಜಯರಾಮ ಹಂದೆ ಹಾಗೂ ಕರ್ನಾಟಕ ಜಾನಪದ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಕೇಶವ ಪ್ರಸಾದ ನಾಣಿತ್ತಿಲು ಬಹುಮಾನ ವಿತರಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.





