ಈಗ ಬುಕ್ ಮಾಡಿ, ನಂತರ ಖರೀದಿಸಿ’
ಮಲಾಕಾ ಅಪ್ಲಾಯೆನ್ಸಸ್‌ನಲ್ಲಿ ಗ್ರಾಹಕ ಸ್ನೇಹಿ ಯೋಜನೆ,,
ಮಂಗಳೂರು, ಅ.8: ಪ್ರಸಿದ್ಧ ಗೃಹೋಪಯೋಗಿ ಉಪಕರಣಗಳ ಮಳಿಗೆ ಮಲಾಕಾ ಅಪ್ಲಾಯೆನ್ಸಸ್ ಗ್ರಾಹಕರ ಅನುಕೂಲತೆಗಾಗಿ ‘‘ಈಗ ಬುಕ್ ಮಾಡಿ, ನಂತರ ಖರೀದಿಸಿ’’ ಎಂಬ ವಿಶೇಷ ಯೋಜನೆಯನ್ನು ಹಮ್ಮಿಕೊಂಡಿದೆ. ಯೋಜನೆ ಈಗಾಗಲೇ ಆರಂಭಗೊಂಡಿದ್ದು, ಇನ್ನು 4 ದಿನ ಚಾಲ್ತಿಯಲ್ಲಿರುತ್ತದೆ. ಈ ಯೋಜನೆಯಂತೆ ಗ್ರಾಹಕರು ತಮ್ಮ ಆಯ್ಕೆಯ ಉಪಕರಣವನ್ನು ಈಗ ಬುಕ್ ಮಾಡಿ, ಮುಂದೆ ಹಣ ಇದ್ದಾಗ ಅದನ್ನು ಮನೆಗೆ ಕೊಂಡೊಯ್ಯಬಹುದಾಗಿದೆ. ಅಲ್ಲದೆ 39 ಎಲ್‌ಇಡಿ ಟಿವಿಯನ್ನು ಉಚಿತವಾಗಿ ಗೆಲ್ಲುವ ಅವಕಾಶವಿದೆ. ಆಯ್ದ ಉಪಕರಣಗಳ ಖರೀದಿಯ ಮೇಲೆ ಡೌನ್ ಪೇಮೆಂಟ್ ಇಲ್ಲದೆ 0% ಫೈನಾನ್ಸ್ ಸೌಲಭ್ಯವಿದ್ದು, ಮೊಬೈಲ್ ಫೋನ್ ಅಥವಾ 4,990 ರೂ. ವೌಲ್ಯದ 750 ವ್ಯಾಟ್ಸ್ ಮಿಕ್ಸರ್ ಗ್ರೈಂಡರ್ ಉಚಿತವಾಗಿ ಪಡೆಯುವ ಅವಕಾಶವಿದ್ದು, ಕ್ರೆಡಿಟ್ ಕಾರ್ಡ್ ಮೇಲೆ ಇ.ಎಂ.ಐ ಸೌಲಭ್ಯ, ಎಕ್ಸ್‌ಚೇಂಜ್ ಆಫರ್, ಬಜಾಜ್ ಫೈನಾನ್ಸ್ ಸೌಲಭ್ಯ ಲಭ್ಯವಿದೆ. ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಮಲಾಕಾ ಅಪ್ಲಾಯೆನ್ಸಸ್ ಮುಂಬಯಿ ಮತ್ತು ಕರ್ನಾಟಕದಲ್ಲಿ ಒಟ್ಟು 25 ಶಾಖೆಗಳನ್ನು ಹೊಂದಿದೆ. ಎಲೆಕ್ಟ್ರಾನಿಕ್ಸ್ ಉಪಕರಣ ಮಾತ್ರವಲ್ಲದೆ ಜವುಳಿ ಮತ್ತು ಫರ್ನಿಚರ್ ಮಾರಾಟ ವ್ಯವಹಾರವೂ ಇದೆ. ಮಂಗಳೂರಿನ ಚಿಲಿಂಬಿಯಲ್ಲಿ ಒಂದು ಶಾಖೆ, ತೊಕ್ಕೊಟು ಮತ್ತು ಬಿ.ಸಿ. ರೋಡ್‌ಗಳಲ್ಲಿ ತಲಾ ಎರಡು ಶಾಖೆಗಳಿದ್ದು, ಮಂಗಳೂರಿನ ಬೆಂದೂರ್‌ವೆಲ್, ವಿಟ್ಲ ಮತ್ತು ಪುತ್ತೂರುಗಳಲ್ಲಿ ಶಾಖೆಗಳು ಶೀಘ್ರವೇ ಆರಂಭವಾಗಲಿವೆ. ಹಬ್ಬದ ಸಂದಭರ್ ಗೆಸ್ ಆ್ಯಂಡ್ ವಿನ್ ಮತ್ತು ಮನಿ ಬ್ಯಾಕ್ ಆಫರ್ ಸೌಲಭ್ಯ ಲಭ್ಯವಿದ್ದು, ಗೆಸ್ ಆ್ಯಂಡ್ ವಿನ್ ಆಫರ್‌ನಲ್ಲಿ 45,000 ರೂ. ವರೆಗಿನ ಮೊತ್ತದ ಉಚಿತ ಗಿಫ್ಟ್‌ಗಳನ್ನು ಗೆಲ್ಲುವ ಅವಕಾಶವಿದೆ. ‘ಬೆಸ್ಟ್ ಬ್ರಾಂಡ್, ಬೆಸ್ಟ್ ಪ್ರಾಡಕ್ಟ್, ಬೆಸ್ಟ್ ಸರ್ವೀಸ್’ ಮಲಾಕಾ ಸಂಸ್ಥೆಯ ಧ್ಯೇಯ. ಎಲ್‌ಜಿ, ಸೋನಿ, ಸ್ಯಾಮ್‌ಸಂಗ್, ಹ್ಯುಂಡೈ, ವೈರ್ಲ್‌ಪೂಲ್, ವೀಡಿಯೊಕಾನ್, ಡೇವೂ, ಸ್ಯಾನ್‌ಸುಯಿ, ಕೆಲ್ವಿನೇಟರ್, ಎಲೆಕ್ಟ್ರೋಲಕ್ಸ್ ಮತ್ತಿತರ ಸುಪ್ರಸಿದ್ಧ ಬ್ರಾಂಡ್‌ಗಳ ಎಲ್‌ಇಡಿ ಟಿ.ವಿ., ವಾಶಿಂಗ್ ಮೆಶಿನ್, ರೆಫ್ರಿಜರೇಟರ್, ಮಿಕ್ಸರ್ ಗ್ರೈಂಡರ್, ಮೊಬೈಲ್ ಪೋನ್, ಲ್ಯಾಪ್‌ಟಾಪ್, ಗ್ಯಾಸ್ ಸ್ಟವ್, ವಾಟರ್ ಪ್ಯೂರಿಪೈರ್, ಸೋಡಾ ಮೇಕರ್ಸ್ ಮತ್ತಿತರ ಉಪಕರಣಗಳಿವೆ. ಹ್ಯುಂಡೈ ಎಲ್‌ಇಡಿ ಟಿ.ವಿ.ಗೆ 5 ವರ್ಷಗಳ ವಾರಂಟಿ ಇದೆ. ವೀಡಿಯೊಕಾನ್ ಎ.ಸಿ. ಕಂಪ್ರೆಸರ್ ಮತ್ತು ಇಂಡೋರ್ ಯುನಿಟ್‌ಗಳ ಮೇಲೆ 5 ವರ್ಷಗಳ ವಾರಂಟಿ ಲಭ್ಯ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.





