ಮ್ಯಾನ್ಮಾರ್ ಮೇಲಿನ ದಿಗ್ಬಂಧನ ತೆರವು
ಮ್ಯಾನ್ಮಾರ್ ಮೇಲೆ ಅಮೆರಿಕ ವಿಧಿಸಿರುವ ದಿಗ್ಬಂಧನಗಳನ್ನು ತೆರವುಗೊಳಿಸಿರುವುದಾಗಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಶುಕ್ರವಾರ ಔಪಚಾರಿಕವಾಗಿ ಘೋಷಿಸಿದರು. ಮ್ಯಾನ್ಮಾರ್‌ನ ಮಾಜಿ ಸೇನಾ ಸರಕಾರದ ನೀತಿಗಳು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿವೆ ಎಂದು ಭಾವಿಸುವ ತುರ್ತು ಆದೇಶವೊಂದನ್ನು ಒಬಾಮ ರದ್ದುಪಡಿಸಿದರು.
‘‘ರಾಷ್ಟ್ರೀಯ ತುರ್ತು ಪರಿಸ್ಥಿತಿಗೆ ಕಾರಣವಾಗಿದ್ದ ಮ್ಯಾನ್ಮಾರ್‌ನಲ್ಲಿನ ಪರಿಸ್ಥಿತಿಯಲ್ಲಿ ಬಹಳಷ್ಟು ಸುಧಾರಣೆಯಾಗಿದೆ ಹಾಗೂ ಆ ದೇಶ ಪ್ರಜಾಪ್ರಭುತ್ವದತ್ತ ದಾಪುಗಾಲಿಡುತ್ತಿದೆ ಹಾಗೂ ಇದಕ್ಕೆ ಪೂರಕವಾಗಿ 2015 ನವೆಂಬರ್‌ನಲ್ಲಿ ಆ ದೇಶದಲ್ಲಿ ಚುನಾವಣೆ ನಡೆದಿದೆ’’ ಎಂದು ಅಮೆರಿಕದ ಹೌಸ್ ಮತ್ತು ಸೆನೆಟ್ ಸ್ಪೀಕರ್‌ಗಳಿಗೆ ಬರೆದ ಪತ್ರದಲ್ಲಿ ಒಬಾಮ ಹೇಳಿದ್ದಾರೆ.
Next Story





