Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಬುಡಬುಡಿಕೆ
  4. ಹಾಗಾದರೆ ದಾಳಿ ನಡೆದೇ ಇಲ್ಲವಾ ಸಾರ್?

ಹಾಗಾದರೆ ದಾಳಿ ನಡೆದೇ ಇಲ್ಲವಾ ಸಾರ್?

ವಾರ್ತಾಭಾರತಿವಾರ್ತಾಭಾರತಿ9 Oct 2016 12:16 AM IST
share

‘‘ಸರ್ಜಿಕಲ್ ಸ್ಟ್ರೈಕ್ ನಡೆದಿದೆ’’ ಎಂದು ಯಾರೋ ಜೋರಾಗಿ ಕೂಗಿ ಹೇಳುತ್ತಿದ್ದರು.
‘‘ಇಲ್ಲ ನಡೆದಿಲ್ಲ’’ ಇನ್ಯಾರೋ ಅದನ್ನು ಪ್ರತಿಭಟಿಸುತ್ತಿದ್ದರು.
ಪತ್ರಕರ್ತ ಎಂಜಲು ಕಾಸಿಯ ಕಿವಿ ಚುರುಕಾಯಿತು. ಯಾರೋ ದೇಶಪ್ರೇಮಿ ಮತ್ತು ದೇಶವಿರೋಧಿಗಳ ನಡುವೆ ಚರ್ಚೆ ನಡೆಯುತ್ತಿದೆ ಎನ್ನುವುದು ಅವನಿಗೆ ಗೊತ್ತಾಯಿತು. ಕಿವಿಗೊಟ್ಟು ಆಲಿಸಿದರೆ ಒಂದು ಈಶ್ವರಪ್ಪರ ಧ್ವನಿ. ಮಗದೊಂದು ಯಡಿಯೂರಪ್ಪರ ಧ್ವನಿ. ಅರೆ! ಈಶ್ವರಪ್ಪ ಅವರು ಸರ್ಜಿಕಲ್ ಅಟ್ಯಾಕ್ ಪರವಾಗಿದ್ದಾರೆ. ಆದರೆ ಯಡಿಯೂರಪ್ಪ ಅಟ್ಯಾಕ್ ನಡೆದಿಲ್ಲ ಎಂದು ಹೇಳುತ್ತಿದ್ದಾರೆ. ನೇರವಾಗಿ ಈಶ್ವರಪ್ಪ ಅವರ ಬಳಿಗೆ ಪತ್ರಕರ್ತ ಎಂಜಲು ಕಾಸಿ ಓಡಿದ.
‘‘ಸರ್...ಗಡಿಯಲ್ಲಿ ಸರ್ಜಿಕಲ್ ಅಟ್ಯಾಕ್ ನಡೆದಿದೆ ಎಂದು ಹೇಳುತ್ತೀರಾ ಹಾಗಾದರೆ...ನಿಮ್ಮ ಬಳಿ ಆ ಬಗ್ಗೆ ಯಾವುದಾದರೂ ಸಾಕ್ಷಗಳು ಇವೆಯೇ?’’ ಕೇಳಿದ.
‘‘ಯಡಿಯೂರಪ್ಪ ಅವರು ಬಾಲ ಸುಟ್ಟ ನವಾಝ್ ಶರೀಫ್ ಥರ ವರ್ತಿಸುತ್ತಿರುವುದೇ ನಾನು ಸರ್ಜಿಕಲ್ ಸ್ಟ್ರೈಕ್ ಮಾಡಿರುವುದಕ್ಕೆ ಸಾಕ್ಷಿ ಕಣ್ರೀ...’’ ಈಶ್ವರಪ್ಪ ಮುಖ ಕೊಡವಿ ಘೋಷಿಸಿದರು.
‘‘ಸಾರ್...ಮೋದಿ ನೇತೃತ್ವದಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ತಾನೇ ನೀವು ಹೇಳುತ್ತಿರುವುದು? ಸೇನೆ ಅದನ್ನು ಮಾಡಿದೆ ಎಂದು ಹೇಳುತ್ತೀರಾ...?’’ ಕಾಸಿ ಗೊಂದಲದಿಂದ ಮತ್ತೆ ಕೇಳಿದ.
‘‘ಆ ಸ್ಟ್ರೈಕೇ ಬೇರೆ...ಈ ಸ್ಟ್ರೈಕೇ ಬೇರೆ....ನಿಯಂತ್ರಣ ಗಡಿಯಾಚೆಗೆ ದಾಟಿ ನನ್ನ ರಾಯಣ್ಣ ಬ್ರಿಗೇಡ್‌ನ ಯೋಧರು ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ. ಅದರ ಬಗ್ಗೆ ಈವರೆಗೆ ಯಾರೂ ಮಾತನಾಡಿಲ್ಲ...ಆದರೆ ಅದು ನಡೆದಿದೆ ಎನ್ನುವುದಕ್ಕೆ ನನ್ನ ಬಳಿ ಸಾಕ್ಷಿ ಇದೆ...’’ ಈಶ್ವರಪ್ಪ ಬಿಜೆಪಿಯ ಕಚೇರಿಯ ಗೋಡೆಗೆ ಕೈಯನ್ನು ಗುದ್ದಿ ಹೇಳಿದರು.
‘‘ಅಂದರೆ ಗಡಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಉಗ್ರರ ಶಿಬಿರದ ಮೇಲೆ ದಾಳಿ ನಡೆಸಿರುವುದು ನಿಮ್ಮ ರಾಯಣ್ಣ ಬ್ರಿಗೇಡ್‌ನ ಕಾರ್ಯಕರ್ತರೇ?’’ ಕಾಸಿ ರೋಮಾಂಚಿತನಾಗಿ ಕೇಳಿದ.
‘‘ಕರ್ನಾಟಕದಲ್ಲಿ ಬಿಜೆಪಿಯ ನಿಯಂತ್ರಣಾಗಡಿಯಲ್ಲಿ ನಡೆದಿರುವ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ನಾನು ಹೇಳುತ್ತಿದ್ದೇನೆ ಕಣ್ರೀ....ಅಲ್ಲಿ ಮೋದಿಯವರ ನೇತೃತ್ವದಲ್ಲಿ ಗಡಿ ನಿಯಂತ್ರಣ ದಾಟಿ ಸೇನೆ ದಾಳಿ ಮಾಡಿದರೆ, ಇಲ್ಲಿ ನಮ್ಮ ಬ್ರಿಗೇಟ್ ಬಿಜೆಪಿಯ ಗಡಿ ನಿಯಂತ್ರಣವನ್ನು ದಾಟಿ ದಾಳಿ ಮಾಡಿದೆ...’’ ಈಶ್ವರಪ್ಪ ವಿವರಿಸಿದರು.
 ಕಾಸಿ ಕಂಗಾಲಾದ ‘‘ಸಾರ್...ನಿಮ್ಮ ಬ್ರಿಗೇಡ್ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ನಡೆಸಿರುವುದು ಯಾರ ಮೇಲೆ ಸಾರ್? ತಮಿಳು ನಾಡಿನ ಮೇಲೆಯೇ? ಸಿದ್ದರಾಮಯ್ಯ ಅವರ ಮೇಲೆಯೇ?’’ ವಿವರಣೆ ಕೇಳಿದ.
‘‘ಏನ್ರೀ ನೀವು. ನನ್ನ ರಾಯಣ್ಣ ಬ್ರಿಗೇಡ್‌ನ ಸರ್ಜಿಕಲ್ ಸ್ಟ್ರೈಕ್‌ನ ದಾಳಿ ನೋಡಿ ದಿಲ್ಲಿಯ ಅಮಿತ್ ಶಾ ಅವರೇ ಬೆಚ್ಚಿ ಬಿದ್ದಿದ್ದಾರೆ. ರಾಜ್ಯಕ್ಕೆ ವಕ್ತಾರರನ್ನು ಕಳುಹಿಸಿದ್ದಾರೆ. ಮುಂದಿನ ಬಾರಿ ಪಾಕಿಸ್ತಾನ ಗಡಿಯಲ್ಲಿ ಸ್ಟ್ರೈಕ್ ಇದ್ದರೆ ನಿಮ್ಮ ಬ್ರಿಗೇಡನ್ನೇ ಬಳಸುತ್ತೇವೆ. ನೀವು ಸುಮ್ಮನೆ ಅಲ್ಲಿ ಬಿಜೆಪಿಯ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಸ್ಟ್ರೈಕ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ....’’ ಈಶ್ವರಪ್ಪ ರಾಯಣ್ಣನಂತೆ ಮೀಸೆ ತಿರುವಿದರು.
‘‘ಸಾರ್...ಈ ನಿಮ್ಮ ಸೀಮಿತ ದಾಳಿಯ ಫಲಾನುಭವಿ ಯಾರು ?’’ ಕಾಸಿ ಕೇಳಿದ.
‘‘ಮತ್ಯಾರ್ರೀ...ರಾತ್ರೋ ರಾತ್ರಿ... ನಮ್ಮ ಪಡೆ ಗಡಿನಿಯಂತ್ರಣ ರೇಖೆಯನ್ನು ದಾಟಿ, ಅಲ್ಲಿರುವ ಯಡಿಯೂರಪ್ಪ ಅವರ ಗುಂಪಿನ ಶಿಬಿರಗಳ ಮೇಲೆ ದಾಳಿ ನಡೆಸಿ ಯಶಸ್ವಿಯಾಗಿದೆ....ಯಡಿಯೂರಪ್ಪ ಈ ದಾಳಿಗೆ ಬೆಚ್ಚಿ ಬಿದ್ದಿದ್ದಾರೆ...ಹ್ಹ ಹ್ಬ ಹ್ಬ...’’ ಸಂಗೊಳ್ಳಿ ರಾಯಣ್ಣ ಪಾತ್ರ ಮಾಡಿದ ನಟ ದರ್ಶನ್ ಅವರ ತಂದೆ ತೂಗುದೀಪ ಶ್ರೀನಿವಾಸ್ ತರ ನಕ್ಕರು.
‘‘ಸಾರ್...ಇದಕ್ಕೆ ನಿಮ್ಮಲ್ಲಿ ದಾಖಲೆಗಳೇನಾದರೂ ಇದೆಯೆ?’’ ಕಾಸಿ ಕೇಳಿದ.    
‘‘ನೋಡ್ರೀ...ದಾಖಲೆ ಕೇಳಿದರೆ ಅವರ ಮೇಲೆ ದೇಶದ್ರೋಹದ ಕೇಸು ಹಾಕೋದಕ್ಕೆ ಮೋದಿ ಸೂಚನೆ ನೀಡಿದ್ದಾರೆ...’’ ಈಶ್ವರಪ್ಪ ಎಚ್ಚರಿಸಿದರು.
‘‘ಆದರೆ ಅದು ಪಾಕಿಸ್ತಾನದ ಗಡಿಯ ದಾಳಿಗೆ ಸಂಬಂಧಪಟ್ಟಂತೆ ಸಾರ್...ಇದು ಬೇರೆ ಸರ್ಜಿಕಲ್ ದಾಳಿಯಲ್ಲವೆ?’’ ಕಾಸಿ ಆತಂಕದಿಂದ ಕೇಳಿದ.


‘‘ಸರ್ಜಿಕಲ್ ದಾಳಿ ಎಂದ ಮೇಲೆ ಮುಗಿಯಿತು. ಅದಕ್ಕೆ ದಾಖಲೆಗಳನ್ನು ಕೇಳಲೇ ಬಾರದು...ಅಷ್ಟೇ...’’ ಈಶ್ವರಪ್ಪ ಕಡ್ಡಿ ಮುರಿದಂತೆ ಹೇಳಿದರು. ಕಾಸಿ ತನ್ನ ಜೋಳಿಗೆಯ ಜೊತೆಗೆ ಯಡಿಯೂರಪ್ಪ ಮನೆಗೆ ಓಡಿದ. ಅಲ್ಲಿ ಅವರ ನಿವಾಸದಿಂದ ಒಂದೇ ಸಮನೆ ಅರಚಾಟ ಕೇಳುತ್ತಿತ್ತು ‘‘ಅಂತಹ ಯಾವುದೇ ದಾಳಿ ನಡೆದಿಲ್ಲ. ಅವರು ಸುಳ್ಳು ಹೇಳುತ್ತಿದ್ದಾರೆ...ಹಾಗೆ ಅವರ ಬ್ರಿಗೇಡ್ ನನ್ನ ಮೇಲೆ ದಾಳಿ ನಡೆಸಿದ್ದರೆ ಅದಕ್ಕೆ ಸಾಕ್ಷಿ ತೋರಿಸಲಿ...’’
‘‘ಸಾರ್...ನವಾಝ್ ಶರೀಫ್ ಕೂಡ ಮೋದಿಯವರಲ್ಲಿ ಇದನ್ನೇ ಕೇಳುತ್ತಿದ್ದಾರೆ...’’ ಕಾಸಿ ಕೇಳಿದ.
‘‘ನೋಡ್ರಿ ನವಾಝ್ ಶರೀಫ್ ವಿಷಯ ನೀವು ದಿಲ್ಲಿಯಲ್ಲಿ ಹೋಗಿ ಮಾತನಾಡಿ. ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಯಾರೂ ದಾಳಿ ನಡೆಸಿಲ್ಲ. ನಾನು ಯಾರಿಗೂ ಹೆದರುವುದೂ ಇಲ್ಲ...’’
‘‘ಆದರೆ ಕೇಂದ್ರದ ವಕ್ತಾರರು ರಾಜ್ಯಕ್ಕೆ ಬಂದಿರುವುದು ಈ ದಾಳಿಯ ಕಾರಣದಿಂದಲೇ ಅಂತೆ. ಬಿಜೆಪಿಯ ಗಡಿಯೊಳಗೆ ಶಾಂತಿಯನ್ನು ಕಾಪಾಡಿಕೊಳ್ಳಬೇಕು. ಇನ್ನೊಮ್ಮೆ ಇಂತಹ ದಾಳಿ ನಡೆಸಬಾರದು ಎಂದು ಈಶ್ವರಪ್ಪರಲ್ಲಿ ದಿಲ್ಲಿ ಹೈಕಮಾಂಡ್ ಮನವಿ ಮಾಡಿದೆಯಂತೆ...’’ ಕಾಸಿ ಒಂದೇ ಸಮನೆ ಸಿಡಿಸ ತೊಡಗಿದ.

ಯಡಿಯೂರಪ್ಪ ಬೆಚ್ಚಗಾದರು ‘‘ಅಂತೆಕಂತೆಗಳನ್ನು ಇಲ್ಲಿ ತರಬೇಡಿ. ಅವರು ಬಂದಿರುವುದು ಈಶ್ವರಪ್ಪ ಅವರಿಗೆ ಛೀಮಾರಿ ಹಾಕುವುದಕ್ಕೆ. ಬಾಯಿಗೆ ಬಂದಂತೆ ಹೇಳಿಕೆ ನೀಡಬೇಡಿ ಎಂದು ಸಲಹೆ ನೀಡುವುದಕ್ಕೆ. ದಾಳಿ ನಡೆಸಿದ್ದರೆ ಸಾಕ್ಷ ತೋರಿಸಿ ಎಂದು ಕೇಳುವುದಕ್ಕೆ’’ ‘‘ಹಾಗಾದರೆ ದಾಳಿ ನಡೆದೇ ಇಲ್ಲವಾ ಸಾರ್?’’ ಕಾಸಿ ಮತ್ತೊಮ್ಮೆ ಕೇಳಿದ.
‘‘ನೋಡ್ರಿ ದಾಳಿ ನಡೆದಿಲ್ಲ ಮಾತ್ರವಲ್ಲ, ನಾವು ನಡೆಸಿದ ದಾಳಿಯಿಂದಾಗಿ ಅವರ ಗುಂಪಿನ ಭಿನ್ನಮತೀಯರನ್ನೆಲ್ಲ ದಮನ ಮಾಡಿದ್ದೇವೆೆ. ಆದುದರಿಂದಲೇ ಅವರು ಕೆರಳಿ, ಅದೇನೇನೋ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ....ಈಗಾಗಲೇ ಅವರ ಗುಂಪಿನ ಹಲವು ಭಿನ್ನ ಮತೀಯರು ನಮ್ಮ ರೆಸಾರ್ಟ್‌ಲ್ಲಿ ಮೂಗು ಮುಟ್ಟ ಕುಡಿದು ಮಕಾಡೆ ಮಲಗಿದ್ದಾರೆ...’’ ಯಡಿಯೂರಪ್ಪ ಪ್ರತ್ಯುತ್ತರಿಸಿದರು.
ಕಾಸಿಗೆ ಗೊಂದಲ ನಿವಾರಿಸಲೇ ಬೇಕು ಅನ್ನಿಸಿತು. ನೇರವಾಗಿ ಸದಾನಂದ ಗೌಡರ ಬಳಿಗೆ ಧಾವಿಸಿದರು ‘‘ಸಾರ್ ಸರ್ಜಿಕಲ್ ಸ್ಟ್ರೈಕ್ ನಡೆದಿರುವುದಕ್ಕೆ ಸಾಕ್ಷಿಯಿದೆಯಾ?’’
‘‘ಪಾಕ್ ವಿರುದ್ಧದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸಾಕ್ಷಿ ಕೇಳುವವರೆಲ್ಲ ದೇಶದ್ರೋಹಿಗಳು....ಅವರು ಪಾಕಿಸ್ತಾನಕ್ಕೆ ತೊಲಗಬೇಕು...’’ ಸದಾನಂದ ಗೌಡರು ನಗು ನಗುತ್ತಲೇ ಅಬ್ಬರಿಸಿದರು.
‘‘ಅದಲ್ಲ ಸಾರ್. ಈಶ್ವರಪ್ಪ ಅವರು ಯಡಿಯೂರಪ್ಪ ವಿರುದ್ಧ ಮಾಡಿರುವ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಕೇಳುತ್ತಿದ್ದೇನೆ...ಅವರು ದಾಳಿ ನಡೆಸಿ ಯಡಿಯೂರಪ್ಪ ಅವರಿಗೆ ಭಾರೀ ನಾಶ ನಷ್ಟವುಂಟು ಮಾಡಿದ್ದಾರಂತಲ್ಲ...’’ ಕಾಸಿ ಕೇಳಿದ.
ಸದಾನಂದ ಗೌಡರೀಗ ಶಾಂತರಾದರು ‘‘ನೋಡ್ರೀ...ಯಾರಿಗೂ ಹೇಳಬೇಡಿ. ನನ್ನ ಆಳ್ವಿಕೆಯ ಕಾಲದಲ್ಲಿ ನಾನು ಕೂಡ ಅಂತಹ ಸರ್ಜಿಕಲ್ ಸ್ಟ್ರೈಕ್ ದಾಳಿ ನಡೆದಿದೆ. ನಾನು ಯಾವುದೇ ಪ್ರೆಸ್‌ಮೀಡ್ ಮಾಡಿ ಹೇಳಿಲ್ಲ ಅಷ್ಟೇ. ಇಂತಹ ದಾಳಿ ಆಗಾಗ ಗುಟ್ಟಾಗಿ ನಡೆಯುತ್ತಿರುತ್ತೆ. ಹತ್ತು ಹಲವು ರೆಸಾರ್ಟ್‌ಗಳಲ್ಲಿ ಸಭೆ ಸೇರಿ, ರೆಡ್ಡಿ ಸಹೋದರರು ನಡೆಸಿರುವ ದಾಳಿ ಅಂದಿನ ಪತ್ರಿಕೆಗಳಲ್ಲಿ ಭಾರೀ ಸುದ್ದಿಯಾಗಿದ್ದವು. ಈಶ್ವರಪ್ಪ ಅವರು ಈ ರಾಯಣ್ಣ ಅವರ ಹೆಸರನ್ನು ಮುಂದಿಟ್ಟುಕೊಂಡು ತಮ್ಮ ರಾಜಕೀಯ ಮಾಡಲು ಯತ್ನಿಸುತ್ತಿದ್ದಾರೆ. ಇಂತಹ ದಾಳಿಗಳನ್ನೆಲ್ಲ ಗುಪ್ತವಾಗಿ ಇಡುವುದು ಪಕ್ಷದ ಹಿತಾಸಕ್ತಿಯಿಂದ ಅತ್ಯಗತ್ಯ....’’

ಅಷ್ಟರಲ್ಲಿ ಬಿಜೆಪಿಯಿಂದ ಜಗದೀಶ್ ಶೆಟ್ಟರ್, ಅಶೋಕ್, ಅನಂತಕುಮಾರ್ ಮೊದಲಾದವರು ತಮ್ಮ ತಮ್ಮ ಕಾಲದಲ್ಲಿ ತಾವು ಯಡಿಯೂರಪ್ಪ ವಿರುದ್ಧ ನಡೆಸಿರುವ ಸರ್ಜಿಕಲ್ ದಾಳಿಗಳ ದಾಖಲೆಗಳನ್ನು ಪತ್ರಿಕಾಗೋಷ್ಠಿಯ ಮೂಲಕ ಬಿಡುಗಡೆ ಮಾಡತೊಡಗಿದರು. ನವಾಝ್ ಶರೀಫ್ ವಿಶ್ವಸಂಸ್ಥೆಯ ವಿಮಾನ ಹತ್ತಿದಂತೆ ಯಡಿಯೂರಪ್ಪ ಅವರು ದಿಲ್ಲಿ ವರಿಷ್ಠರ ಬಳಿಗೆ ಧಾವಿಸಲು ವಿಮಾನ ಹತ್ತಿದರು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X