ಕಾರವಾರ: ಕರಾವಳಿ ರಕ್ಷಣೆಗೆ ಹೋವರ್‌ಕ್ರಾಫ್ಟ್

ಕಾರವಾರ, ಅ. 9: ಕರಾವಳಿಗೆ ರಕ್ಷಣೆ ಕಲ್ಪಿಸಲು ಇರುವ ಹೋವರ್ ಕ್ರಾಫ್ಟ್ ಕಾರವಾರಕ್ಕೆ ಆಗಮಿಸಿದ್ದು ನಗರದ ಆರ್‌ಟಿಒ ಕಚೇರಿ ಮುಂಭಾಗದ ಕಡಲ ತೀರದಲ್ಲಿ ಲಂಗರು ಹಾಕಲಾಗಿದೆ. ಸಮುದ್ರ ಹಾಗೂ ಸಮತಟ್ಟಾದ ನೆಲದ ಮೇಲೆ ಸಂಚರಿಸುವ ಸಾಮರ್ಥ್ಯ ಹೊಂದಿರುವ ಹೋವರ್ ಕ್ರಾಫ್ಟ್ ಪ್ರತಿ ಗಂಟೆಗೆ 45 ನಾಟಿಕಲ್ (ಒಂದು ನಾಟಿಕಲ್ ಎಂದರೆ 6 ಕಿ.ಮೀ.) ದೂರ ಸಂಚರಿಸವ ಅಶ್ವಶಕ್ತಿಯನ್ನು ಹೊಂದಿದೆ.
ನವೆಂಬರ್ 26ರ ಉಗ್ರರ ದಾಳಿಯ ಬಳಿಕ ಕರಾವಳಿ ತೀರದ ಉದ್ದಕ್ಕೂ ರಕ್ಷಣಾ ಕ್ರಮಗಳನ್ನು ತೀವ್ರಗೊಳಿಸಲಾಗಿದ್ದು, ಇದಕ್ಕೆ ಪೂರಕವಾಗಿ ರಾಜ್ಯ ಕರಾವಳಿ ಕಾವಲು ಪಡೆಗೆ ಈ ಹೋವರ್ ಕ್ರಾಫ್ಟ್ ಒದಗಿಸಲಾಗಿದೆ. ಸಮುದ್ರದಲ್ಲಿ ಯಾವುದಾದರೂ ಬೋಟುಗಳನ್ನು ಬೆ್ನಟ್ಟಲು, ಕಡಿಮೆ ನೀರಿನ ಪ್ರದೇಶಗಳಲ್ಲಿಯೂ ಈ ಹೋವರ್ ಕ್ರಾಫ್ಟ್‌ನ್ನು ಬಳಸ ಬಹುದಾಗಿದೆ. ಇದರಿಂದಾಗಿ ಕರ್ನಾಟಕ ಕರಾವಳಿಯಲ್ಲಿ ಗಸ್ತು ಕಾರ್ಯಕ್ಕೆ ಹೆಚ್ಚಿನ ಬಲ ಬಂದಿದ್ದು, ಈ ಹೋವರ್ ಕ್ರಾಫ್ಟ್ ಕಾರವಾರ ದಿಂದ ಮಂಗಳೂರು ವರೆಗಿನ ಕರಾವಳಿ ತೀರದ ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದೆ
Next Story





