ಕಿನ್ನಿಗೋಳಿ ಐಕಳ ಗುಡ್ಡೆಯಲ್ಲಿ ಅಸ್ಥಿಪಂಜರ ಪತ್ತೆ
.jpg)
ಮುಲ್ಕಿ, ಅ.9: ಕಿನ್ನಿಗೋಳಿ ಸಮೀಪದ ಐಕಳ ಗುಡ್ದ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಗಂಡಸಿನ ಅಸ್ಥಿ ಪಂಜರ ಪತ್ತೆಯಾದ ಘಟನೆ ರವಿವಾರ ಬೆಳಗ್ಗೆ ನಡೆದಿದೆ.
ರವಿವಾರ ಬೆಳಗ್ಗೆ ಸ್ಥಳೀಯರಾದ ರಮೇಶ್ ಹಾಗೂ ಗಿರೀಶ್ ಜಾನುವಾರುಗಳ ಮೇವಿಗಾಗಿ ಸೊಪ್ಪು ತರಲು ಐಕಳ ಗುಡ್ಡ ಪ್ರದೇಶಕ್ಕೆ ತೆರಳಿದ್ದಾಗ ಕೊಳೆತ ವಾಸನೆ ಬರುತ್ತಿತ್ತು. ಅಲ್ಲದೆ, ಅಲ್ಲೇ ಪಕ್ಕದಲ್ಲಿ ಚಿಕ್ಕ ಗೇರು ಮರದ ಕೊಂಬೆಯಲ್ಲಿ ಕುಣಿಕೆಯಿಂದ ಕೂಡಿದ ವಸ್ತ್ರವೊಂದು ನೇತಾಡುತ್ತಿದ್ದನ್ನು ಗಮನಿಸಿ ಹತ್ತಿರ ಹೋಗಿ ನೋಡಿದಾಗ ಮರದ ಬುಡದಲ್ಲಿ ಇಡೀ ಅಸ್ಥಿಪಂಜರ, ದೇಹದ ಎಲುಬುಗಳು ನೆಲದಲ್ಲಿ ಕಂಡು ಬಂದಿವೆ.
ಈ ವ್ಯಕ್ತಿ ಸುಮಾರು ಒಂದು ತಿಂಗಳ ಹಿಂದೆಯೇ ಸತ್ತಿರುವ ಸಾಧ್ಯತೆಗಳಿದ್ದು ದೃಡಕಾಯದ ಸುಮಾರು ಐದೂವರೆಯಿಂದ ಆರು ಅಡಿ ಎತ್ತರದ ಗಂಡಸಿನ ದೇಹ ಸಂಪೂರ್ಣ ಕೊಳೆತು ಹೋದ ಸ್ಥಿತಿಯಲ್ಲಿನ ಅಸ್ಥಿ ಪಂಜರವಿರಬಹುದು ಎಂದು ಅಂದಾಜಿಸಲಾಗಿದೆ. ಅಸ್ಥಿ ಪಂಜರದಲ್ಲಿ ಗಂಡಸಿನ ಬಟ್ಟೆ ಬರೆ ಇದ್ದು ನೆಲದಿಂದ ಸುಮಾರು 2 ಅಡಿ ಎತ್ತರದಲ್ಲಿ ಕುಣಿಕೆ ಇರುವುದರಿಂದ ಘಟನೆ ಸಂಶಯಾಸ್ಪದವಾಗಿದೆ.
ಮುಲ್ಕಿ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.





