ಮಹಾನ್ ನಾಯಕರ ಆದರ್ಶ ಪಾಲನೆಯಾಗಲಿ: ವಿ.ಎಂ. ಹೆಗಡೆ
‘ಇಂಜಿನಿಯರ್ಸ್ ಡೇ ಮತ್ತು ಗಾಂಧಿ ಜಯಂತಿ’ ಕಾರ್ಯಕ್ರಮ

ಅಂಕೋಲಾ, ಅ.9: ಜಗತ್ತು ಕಂಡ ಮಹಾ ನಾಯಕರ ದಿನಾಚರಣೆಗಳ ಜೊತೆಗೆ ಅವರ ಆದರ್ಶಗಳನ್ನು ದಿನ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದು ಕಾರವಾರ ಸರಕಾರಿ ಪಾಲಿಟೆಕ್ನಿಕ್ ಕಾೇಜಿನ ಪ್ರಾಚಾರ್ಯ ವಿ.ಎಂ. ಹೆಗಡೆ ಯುವ ಜನತೆಗೆ ಕರೆ ನೀಡಿದ್ದಾರೆ.
ಅವರು ಇತ್ತೀಚಿಗೆ ಪಟ್ಟಣದ ತಾಪಂ ಸಭಾಭವನದಲ್ಲಿ ಅಸೋಸಿಯೇಶನ್ ಆಫ್ ಇಂಜಿನಿಯರ್ ಹಾಗೂ ಸಾರ್ವಜನಿಕರ ಆಶ್ರಯದಲ್ಲಿ ಆಯೋಜಿಸಲಾಗಿದ್ದು ‘ಇಂಜಿನಿಯರ್ಸ್ ಡೇ ಮತ್ತು ಗಾಂಧಿ ಜಯಂತಿ’ ಕಾರ್ಯಕ್ರಮಗಳನ್ನು ಜಂಟಿಯಾಗಿ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಆಚರಣೆಗಳು ಬರೀ ಆಚರಣೆಗಳಾಗಿರದೆ, ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ತತ್ವ ಮತ್ತು ಆದರ್ಶಗಳನ್ನು ಯುವ ಜನರು ಮೈಗೊಡಿಸಿಕೊಳ್ಳಬೇಕೆಂದು ವಿ.ಎಂ. ಹೆಗ
ೆ ಹೇಳಿದರು. ತಾ.ಪಂ. ಅಧ್ಯಕ್ಷೆ ಸುಜಾತ ಟಿ. ಗಾಂವಕರ ಮಾತನಾಡಿ, ರಾಷ್ಟ್ರ ನಿರ್ಮಾಣದಲ್ಲಿ ಸರ್.ಎಂ. ವಿ
್ವೇಶ್ವರಯ್ಯನವರ ಕೊಡುಗೆ ಅಪಾರ ಮತ್ತು ಚಿರಸ್ಮರಣೀಯ. ಅದೇ ರೀತಿಯಲ್ಲಿ ಮಹಾತ್ಮಗಾಂಧಿಯವರ ತತ್ವ ಸಿದ್ಧಾಂತ ಸ್ವತಂತ್ರ ಭಾರತಕ್ಕೆ ಭದ್ರ ಬುನಾದಿಯಾಗಿದೆ. ಇಂತಹ ಮಹಾನ್ ನಾಯಕರ ಜನ್ಮದಿನ ಆಚರಿಸುವುದು ನಮ್ಮೆಲ್ಲರ ಮುಖ್ಯ ಕರ್ತವ್ಯ ಎಂದರು. ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಹರಿಹರ ಹರಿಕಂತ್ರ ಹಿಲ್ಲೂರು ವಹಿಸಿದ್ದರು. ಹಿಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಹೇಂದ್ರ ನಾಯಕ, ಹೆಸ್ಕಾಂ ಶಾಖಾಧಿಕಾರಿ ಪ್ರವೀಣ ನಾಯ್ಕ, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ ಗಾಂವಕರ, ಅಲಗೇರಿ ಗ್ರಾ.ಪಂ. ಅಧ್ಯಕ್ಷ ಮಂಜುನಾಥ ನಾಯಕ ಮತ್ತಿತರರು ಉಪಸ್ಥಿತರಿದ್ದರು.
ಅಧಿಕಾರಿಗಳು







