Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮುಸ್ಲಿಂ ಮಹಿಳೆಯರು ತಮ್ಮ ಕಾಲ ಮೇಲೆ...

ಮುಸ್ಲಿಂ ಮಹಿಳೆಯರು ತಮ್ಮ ಕಾಲ ಮೇಲೆ ನಿಲ್ಲಲು ನೆರವಾಗುತ್ತಿರುವ ಉದ್ಯೋಗದಾತೆ ಶಾಝಿಯಾ ಖಾನ್

ಅಮಿತ್ ಕುಮಾರ್ಅಮಿತ್ ಕುಮಾರ್9 Oct 2016 10:23 PM IST
share
ಮುಸ್ಲಿಂ ಮಹಿಳೆಯರು ತಮ್ಮ ಕಾಲ ಮೇಲೆ ನಿಲ್ಲಲು ನೆರವಾಗುತ್ತಿರುವ ಉದ್ಯೋಗದಾತೆ ಶಾಝಿಯಾ ಖಾನ್

ಶಾಝಿಯಾ ಖಾನ್‌ಗೆ ಯಶಸ್ಸಿನ ದಾರಿ ಎಂದೂ ನೇರವಾಗಿರಲಿಲ್ಲ. ಬಿಹಾರದಲ್ಲಿ ಬೆಳೆದ ಈ ಮುಸ್ಲಿಂ ಹುಡುಗಿ ದುಮ್ಕಾದಲ್ಲಿ (ಈಗ ಜಾರ್ಖಂಡ್‌ನಲ್ಲಿದೆ) ತನ್ನ ಅಜ್ಜಿಮನೆಯಲ್ಲಿರುವಾಗ ಪ್ರಾಥಮಿಕ ಶಿಕ್ಷಣಕ್ಕೆ ಸೇರಿದ ಸಮಯದಿಂದಲೇ ತನ್ನ ಪಾಲಿನ ದುಡಿಮೆ ಮಾಡುತ್ತಾ ಬಂದಿದ್ದಾರೆ. ನಂತರ ಆಕೆ ತನ್ನ ಹುಟ್ಟೂರಾದ ಬಗಲ್ಪುರ್‌ಗೆವಾಪಸ್ ಆಗಿ ಅಲ್ಲಿ ಪ್ರೌಢಶಿಕ್ಷಣ ಮುಗಿಸಿದರು. ಈಗ ಹಿಂದೆ ನೋಡುವಾಗ, ತನ್ನ ಈ ಯಶಸ್ಸಿಗೆ ಅತ್ಯಂತ ದೊಡ್ಡ ಒಂದು ಕಾರಣವೆಂದರೆ, ಅದೇನೇ ಬರಲಿ ತನ್ನ ಮಗಳ ಶಿಕ್ಷಣವನ್ನು ತಾನು ನಿಲ್ಲಿಸುವುದಿಲ್ಲ ಎಂಬ ತನ್ನ ತಂದೆಯ ದೃಢ ನಿರ್ಧಾರ ಎಂದಾಕೆಗನಿಸುತ್ತದೆ. ಅದಕ್ಕೆ ತಕ್ಕುದಾಗಿ ಖಾನ್ ಇಂದು ಪಾಟ್ನಾದ ಮೊಟ್ಟಮೊದಲ ಶೂ ಲಾಂಡ್ರಿ ಕ್ಲಿನಿಕ್ ಎಂಬ ಅಂಗಡಿಯನ್ನು ಆರಂಭಿಸಿ ಓರ್ವ ಉದ್ಯೋಗಪತಿಯಾಗಿ ಬೆಳೆದಿದ್ದಾರೆ. ಆದರೆ ಇದು ಕೂಡಾ ನೇರವಾಗಿ ಸಾಸಿದ್ದಲ್ಲ, ಹಲವು ವರ್ಷಗಳ ಕಾಲ ತಾಳ್ಮೆ ಮತ್ತು ಕಠಿಣ ಪರಿಶ್ರಮದ ಲವಾಗಿ ಆಕೆ ಇಂದು ಈ ಹಂತಕ್ಕೆ ತಲುಪಿದ್ದಾರೆ. 2000 ಇಸವಿಯಲ್ಲಿ 17ರ ಹರೆಯದ ಖಾನ್ ಪಾಟ್ನಾದಲ್ಲಿ ನಾಲ್ಕು ವರ್ಷಗಳ ಫಿಸಿಯೋಥೆರಪಿ ಪದವಿಗೆ ಅರ್ಜಿ ಹಾಕಿದ್ದರು. ಒಂದು ವರ್ಷ ಕಲಿಕೆಯ ನಂತರ ಆಕೆಗೆ ವಿವಾಹವಾಯಿತು.

ಆದರೆ ಅದು ಕೂಡಾ ಆಕೆಯ ವಿದ್ಯಾಭ್ಯಾಸವನ್ನು ನಿಲ್ಲಿಸಲಿಲ್ಲ. ನಾನು ಯಾವುದೇ ಕಾರಣಕ್ಕೂ ವರದಕ್ಷಿಣೆ ನೀಡುವುದಿಲ್ಲ, ಅದರ ಬದಲು ಆ ಹಣವನ್ನು ನನ್ನ ಮಗಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತೇನೆ ಎಂದು ನನ್ನ ತಂದೆ ನನಗೆ ಮತ್ತು ನನ್ನ ಗಂಡನ ಮನೆಯವರಲ್ಲಿ ಹೇಳಿದ್ದರು. ನನ್ನ ವಿವಾಹದ ನಂತರವೂ ನಾನು ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದೆ ಮತ್ತು ನನ್ನ ತಂದೆಯೇ ಅದರ ಸಂಪೂರ್ಣ ವೆಚ್ಚವನ್ನು ಭರಿಸಿದರು. ಅವರ ಬೆಂಬಲವಿರದಿದ್ದರೆ ಬಹುಶಃ ನಾನು ಇಂದು ನನ್ನ ಯೋಜನೆಯ ಕುರಿತು ನಿಮ್ಮ ಜೊತೆ ಮಾತನಾಡುತ್ತಿರಲಿಲ್ಲ ಎಂದಾಕೆ ಹೇಳುತ್ತಾರೆ. ಶಿಕ್ಷಣ ಮುಗಿಸಿದ ನಂತರ ಕಡ್ಡಾಯ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು 2007ರಲ್ಲಿ ಖಾನ್ ಪದವಿಯನ್ನು ಪಡೆದುಕೊಂಡರು. ಪದವಿ ಮುಗಿಸಿದ ತಕ್ಷಣ ಖಾನ್ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಬಗಲ್ಪುರ್‌ನಲ್ಲಿ ಪೋಲಿಯೊ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಸೇರಿಕೊಂಡರು ಮತ್ತು ಸಂಸ್ಥೆಗಾಗಿ ಆರು ತಿಂಗಳ ಕಾಲ ದುಡಿದರು. ನಂತರ ಆಕೆ ಯುನಿಸ್ೆ ಜೊತೆ ಪೋಲಿಯೊ ಮೇಲ್ವಿಚಾರಕಿಯಾಗಿಯೂ ಕಾರ್ಯನಿರ್ವಹಿಸಿದರು. ಆದರೆ ಮಗು ಹುಟ್ಟಿದ ನಂತರ ಆಕೆ ಅದರ ಮೇಲೆ ಹೆಚ್ಚು ಗಮನಹರಿಸಲು ಬಯಸಿದರು ಆದರೆ ತನ್ನ ವಿದ್ಯಾಭ್ಯಾಸವೂ ಮುಂದುವರಿಯುವಂತೆ ನೋಡಿಕೊಂಡ ಆಕೆ ಆಸ್ಪತ್ರೆ ಆಡಳಿತ (ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್)ದಲ್ಲಿ ಮುಂದಿನ ಶಿಕ್ಷಣಕ್ಕೆ ಅರ್ಜಿ ಹಾಕಿದರು.

ಆಕೆಯ ಪತಿ ಕೂಡಾ ಬೆಗುಸರಾಯ್‌ನ ಆಸ್ಪತ್ರೆಯಲ್ಲಿ ವ್ಯವಸ್ಥಾಪಕರಾಗಿ ದುಡಿಯುತ್ತಿದ್ದ ಕಾರಣ ಖಾನ್ ಈ ಪದವಿಗೆ ಸೇರಲು ಬಯಸಿದರು. ಆದರೆ ಆಕೆಯ ವಿ ಮಾತ್ರ ಬೇರೆಯದ್ದನ್ನೇ ಆಕೆಗಾಗಿ ಬಚ್ಚಿಟ್ಟಿತ್ತು. 2006ರಲ್ಲಿ ಔಟ್‌ಲುಕ್ ಪತ್ರಿಕೆಯಲ್ಲಿ ಸಂದೀಪ್ ಗಜಕಾಸ್ ಎಂಬ ಮುಂಬೈ ನಿವಾಸಿ ಭಾರತದ ಮೊಟ್ಟಮೊದಲ ಶೂ ಲಾಂಡ್ರಿಯನ್ನು ಆರಂಭಿಸಿದ ಬಗ್ಗೆ ಲೇಖನವನ್ನು ಓದಿದ್ದೆ. ಅಂದಿನಿಂದ ನಾನು ಕೂಡಾ ಇಂಥದ್ದೇ ಏನನ್ನಾದರೂ ಮಾಡಬೇಕೆಂದು ಬಯಸಿದ್ದೆ. ಕನಿಷ್ಠ ಪಕ್ಷ ಬಿಹಾರದಲ್ಲಿ ಯಾರು ಕೂಡಾ ಶೂ ಸ್ವಚ್ಛಗೊಳಿಸುವ ಅಂಗಡಿಯನ್ನು ತೆರೆದಿರಲಿಲ್ಲ. ನಾವು ತೊಡುವ ಬಟ್ಟೆಗಳಿಗಾಗಿ ಬಹಳಷ್ಟು ಖರ್ಚು ಮಾಡುತ್ತೇವೆ. ಆದರೆ ನಮ್ಮ ಪಾದರಕ್ಷೆಗಳ ಬಗ್ಗೆ ಕಡಿಮೆ ಗಮನಹರಿಸುತ್ತೇವೆ. ಈ ಅವಕಾಶವನ್ನು ನಾನು ಉಪಯೋಗಿಸಿಕೊಳ್ಳಲು ಮುಂದಾದೆ ಎಂದು ಹೇಳುತ್ತಾರೆ ಎರಡು ಮಕ್ಕಳ ತಾಯಿ ಖಾನ್. ಆದರೆ ಒಂದು ವ್ಯವಹಾರವನ್ನು ಆರಂಭಿಸುವುದು ಮಾತಿನಲ್ಲಿ ಹೇಳಿದಷ್ಟು ಸುಲಭವಲ್ಲ. ಮುಂದಿನ ಆರು ವರ್ಷ ಆಕೆ ತನ್ನ ಬಿಡುವಿನ ಸಮಯದಲ್ಲಿ ಯಾವ ರೀತಿ ಉದ್ದಿಮೆಯನ್ನು ಸ್ಥಾಪಿಸುವುದು ಎಂಬ ಬಗ್ಗೆ ಯೋಚಿಸುತ್ತಿದ್ದರು. ವ್ಯವಹಾರ ನಡೆಸುವ ಬಗ್ಗೆ ಯಾವುದೇ ತರಬೇತಿ ಅಥವಾ ಅನುಭವ ಇಲ್ಲದ ಕಾರಣದಿಂದ ಆಕೆ ಅಪರಿಚಿತ ದಾರಿಯಲ್ಲಿ ಎಚ್ಚರಿಕೆಯಿಂದ ಮುಂದಡಿಯಿಡಲು ಆರಂಭಿಸಿದರು.

ನಾನು ಯಾವಾಗ ಜನರನ್ನು ಭೇಟಿಯಾದರೂ, ನೀವು ನಿಮ್ಮ ಶೂಗಳನ್ನು ಸರಿಪಡಿಸಲು ಮತ್ತು ಸ್ವಚ್ಛಗೊಳಿಸಲು ಒಂದು ವ್ಯವಸ್ಥಿತ ಅಂಗಡಿಗೆ ಕೊಂಡೊಯ್ಯುತ್ತೀರಾ ಎಂದು ನಾನವರಲ್ಲಿ ಕೇಳುತ್ತಿದ್ದೆ. ಬಹಳಷ್ಟು ಉತ್ತರಗಳು ಸಕಾರಾತ್ಮಕವಾಗಿಯೇ ಇರುತ್ತಿದ್ದವು ಎಂದಾಕೆ ಹೇಳುತ್ತಾರೆ. ಅದರೂ ದೊಡ್ಡ ಹೆಜ್ಜೆಯಿಡುವ ಮುನ್ನ ಶೂಗಳ ಬಗ್ಗೆ ಆದಷ್ಟು ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎಂಬುದನ್ನು ಆಕೆ ಅರಿತಿದ್ದರು. ಈ ಕ್ಷೇತ್ರದಲ್ಲಿ ಅನುಭವ ಪಡೆಯುವ ಸಲುವಾಗಿ ಖಾನ್ 2010-2012ರ ಸಮಯದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಕೆಲವು ತಿಂಗಳ ಕಾಲ ಆಕೆ ಚೆನ್ನೆಯಲ್ಲಿರುವ ಶೂ ತಯಾರಿಕಾ ಸಂಸ್ಥೆಯಲ್ಲಿ ತರಬೇತಿಗಾಗಿ ತೆರಳಿದರು ಮತ್ತು ನಂತರ ಭೂತಾನ್‌ನಲ್ಲಿರುವ ಶೂ ಲಾಂಡ್ರಿ ಕ್ಲಿನಿಕ್‌ನಲ್ಲಿ ಕೆಲಸಕ್ಕೆ ಸೇರಿದರು. ಡಿಸೆಂಬರ್‌ನಲ್ಲಿ ಆಕೆ ಐದು ಲಕ್ಷ ರೂ. ಬಂಡವಾಳ ಹೂಡಿ ಪಾಟ್ನಾದ ಅಲ್ಪ್ನಾದಲ್ಲಿ ರಿವೈವಲ್ ಶೂ ಲಾಂಡ್ರಿಯನ್ನು ಆರಂಭಿಸಿದರು.

ವ್ಯವಹಾರವನ್ನು ಆರಂಭಿಸುವುದು ನನ್ನ ಪ್ರಕಾರ ಬಹಳ ಕಷ್ಟದ ಕೆಲಸ. ನಾನು ಆರಂಭಿಸಲಿದ್ದ ಉದ್ದಿಮೆ ನನ್ನ ಫಿಸಿಯೋಥೆರಪಿ ಕಲಿಕೆಗೆ ಸಂಬಂಧಪಟ್ಟಿದ್ದಲ್ಲವಾದ್ದರಿಂದ ನನ್ನನ್ನು ಪ್ರತೀ ಹಂತದಲ್ಲೂ ಪ್ರೋತ್ಸಾಹಿಸುತ್ತಿದ್ದ ನನ್ನ ತಂದೆ ಕೂಡಾ ಆರಂಭದಲ್ಲಿ ನನ್ನ ನಿರ್ಧಾರದ ಬಗ್ಗೆ ಸಂಶಯ ಹೊಂದಿದ್ದರು. ಆದರೆ ನನಗೆ ವಿಶ್ವಾಸವಿತ್ತು ಮತ್ತು ಒಂದು ವಿಶಿಷ್ಟ ಪರಿಕಲ್ಪನೆಯನ್ನು ಮೊದಲ ಬಾರಿಗೆ ನಗರದಲ್ಲಿ ಪರಿಚಯಿಸಿದ ಲಾಭವೂ ಇತ್ತು ಎಂದಾಕೆ ಹೇಳುತ್ತಾರೆ. ಬಹಳ ಬೇಗನೆ ಗ್ರಾಹಕರು ಬರಲು ಆರಂಭಿಸಿದರು, ಆದರೆ ಆರಂಭದಲ್ಲಿ ಅವರು ನಮ್ಮದು ಶೂ ಮಾರಾಟ ಮಳಿಗೆ ಎಂದುಕೊಂಡಿದ್ದರು. ನಾವು ಏನು ಮಾಡುತ್ತೇವೆ ಎಂಬುದನ್ನು ಗ್ರಾಹಕರಿಗೆ ತಿಳಿಸಲು ಕೆಲವು ತಿಂಗಳುಗಳೇ ಬೇಕಾಯಿತು. ಹಾಗಾಗಿ ನಂತರ ಅವರು ತಮ್ಮ ಅತ್ಯಂತ ಕೊಳಕು ಮತ್ತು ಬಹುತೇಕ ಕೆಟ್ಟು ಹೋಗಿದ್ದ ಶೂಗಳನ್ನು ತಂದು ಅದನ್ನು ಏನಾದರೂ ಮಾಡಬಹುದೇ ಎಂದು ಕೇಳುತ್ತಿದ್ದರು ಎಂದು ಖಾನ್ ನಗುತ್ತಲೇ ವಿವರಿಸುತ್ತಾರೆ. ಮುಂದಿನ ಮೂರು ವರ್ಷ ಖಾನ್ ಸಂಪೂರ್ಣವಾಗಿ ತನ್ನ ಕೆಲಸದಲ್ಲಿ ಮುಳುಗಿ ಹೋದರು ಮತ್ತು ಆ ಉದ್ದಿಮೆಯಿಂದ ಲಾಭ ಗಳಿಸುವ ಬಗ್ಗೆ ಚಿಂತಿಸಿದರು.

ಈಗ ಆಕೆಯ ಮಳಿಗೆಯಲ್ಲಿ ಇಬ್ಬರು ಮಹಿಳೆಯರು ಮತ್ತು ಮೂವರು ಪುರುಷರು ದುಡಿಯುತ್ತಿದ್ದಾರೆ. ಆದರೆ ಆಕೆ ದಲಿತ ಮತ್ತು ಮುಸ್ಲಿಂ ಮಹಿಳೆಯರ ಜೊತೆ ಕೆಲಸ ಮಾಡುವ ಸವಿತಾ ಅಲಿಯನ್ನು ಭೇಟಿಯಾದ ನಂತರ ಆಕೆಯ ಜೀವನಕ್ಕೆ ಹೊಸ ಗುರಿಯೊಂದನ್ನು ಸೇರಿಸಿಕೊಂಡರು. ತಾನು ಯಶಸ್ವಿಯಾದೆ ಎಂದ ಮಾತ್ರಕ್ಕೆ ಎಲ್ಲಾ ಮುಸ್ಲಿಂ ಮಹಿಳೆಯರ ಜೀವನ ಹಸನಾಯಿತು ಎಂದು ಅರ್ಥವಲ್ಲ ಎಂಬುದನ್ನು ಆಕೆ ಅರಿತುಕೊಂಡರು. ನಮ್ಮ ಮುಸ್ಲಿಂ ಸಮುದಾಯದಲ್ಲಿ ಅತ್ಯಂತ ಸಣ್ಣ ವಿಷಯಗಳನ್ನು ಕೂಡಾ ದೊಡ್ಡ ಸಾಧನೆಯೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಒಬ್ಬ ಹೆಣ್ಣು ಪದವಿ ಶಿಕ್ಷಣ ಮುಗಿಸಿದರೆ ಅದೊಂದು ದೊಡ್ಡ ಸಾಧನೆಯಂತೆ ಕಾಣಲಾಗುತ್ತದೆ. ನಮ್ಮ ಸಮುದಾಯ ಈ ಕಲ್ಪನೆಯ ಆಚೆಗೆ ಸಾಗಬೇಕು ಮತ್ತು ಮುಸ್ಲಿಂ ಹಾಗೂ ದಲಿತ ಮಹಿಳೆಯರು ಕೆಲಸ ಮಾಡಲು ಮತ್ತು ಸ್ವಂತ ಕಾಲ ಮೇಲೆ ನಿಂತುಕೊಳ್ಳಬೇಕೆಂಬುದು ನನ್ನ ಬಯಕೆ ಎಂದು ಖಾನ್ ಹೇಳುತ್ತಾರೆ. ಈ ಅಭಿಯಾನದ ಅಂಗವಾಗಿ ಅಲಿ ಮತ್ತು ಖಾನ್ ದಲಿತ ಮುಸ್ಲಿಂ ಮಹಿಳಾ ಮಂಚ್ ಎಂಬ ವೇದಿಕೆಯನ್ನು ಆರಂಭಿಸಿದ್ದಾರೆ.

ಈ ಎರಡು ಸಮುದಾಯಗಳ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಈ ವೇದಿಕೆಯು ಗಮನಹರಿಸಲಿದೆ. ಅಲಿ ಮಹಿಳೆಯರನ್ನು ಬಾಸುವ ಕಾನೂನಾತ್ಮಕ ವಿಷಯಗಳನ್ನು ನಿಭಾಯಿಸಿದರೆ, ಸ್ವಂತ ಉದ್ದಿಮೆ ಸ್ಥಾಪಿಸಲು ಬಯಸುವ, ಸ್ವಸಹಾಯ ಗುಂಪುಗಳನ್ನು ಸ್ಥಾಪಿಸುವ ಅಥವಾ ಹೊಸ ಕೌಶಲ್ಯಗಳನ್ನು ಪಡೆಯಲು ಬಯಸುವ ಮಹಿಳೆಯರಿಗೆ ಖಾನ್ ಮಾರ್ಗದರ್ಶನ ನೀಡಲಿದ್ದಾರೆ. ನನ್ನ ಬಳಿಯೀಗ ದೇವರ ದಯೆಯಿಂದ ಯಶಸ್ವಿ ಉದ್ದಿಮೆಯಿದೆ, ಹಾಗಾಗಿ ಸಂಸ್ಥೆಗೆ ಬಂಡವಾಳ ಮತ್ತು ಮಾರ್ಗದರ್ಶನ ನೀಡುವ ಮೂಲಕ ನಾನು ಸಹಾಯ ಮಾಡಬಲ್ಲೆ ಎಂದು ನಂಬಿದ್ದೇನೆ. ಮುಸ್ಲಿಂ ಮಹಿಳೆಯರಲ್ಲಿ ಸಾಮರ್ಥ್ಯವಿದೆ, ಆದರೆ ನಾವು ಕೇವಲ ಜಾಗೃತಿಯನ್ನು ಮೂಡಿಸುವುದಷ್ಟೇ ಅಲ್ಲ ಸಮಸ್ಯೆಗಳನ್ನು ಎದುರಿಸಲೂ ಮತ್ತು ಕೆಟ್ಟವುಗಳ ಜೊತೆ ಹೋರಾಡಲೂ ಅವರಿಗೆ ಉತ್ತೇಜನ ನೀಡಬೇಕಿದೆ. ಸರಕಾರ ಮಹಿಳೆಯರಿಗಾಗಿ ರೂಪಿಸಿರುವ ಹಲವು ಯೋಜನೆಗಳಿವೆ, ಈ ಯೋಜನೆಗಳು ಮಹಿಳೆಯರನ್ನು ತಲುಪುತ್ತಿವೆಯೇ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕಿದೆ ಎಂದು ಖಾನ್ ಸೇರಿಸುತ್ತಾರೆ. ತನ್ನ ಕುಟುಂಬ, ತನ್ನ ಉದ್ದಿಮೆ ಹಾಗೂ ಸಾಮಾಜಿಕ ಕೆಲಸಗಳ ಮಧ್ಯೆ ಖಾನ್‌ಗೆ ಇತರ ಕೆಲಸಗಳಿಗೆ ಸಮಯವೇ ಇಲ್ಲವಾಗಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ವ್ಯಸ್ತವಾಗಿರುವುದೇ ನನಗೆ ಖುಷಿ. ನನ್ನ ಬಳಿ ಮಾಡಲು ಅಷ್ಟೊಂದು ಕೆಲಸವಿದೆ ಎಂಬುದೇ ನನಗೆ ಸಂತೋಷದ ವಿಷಯ ಹಾಗಾಗಿ ಇನ್ನೇನನ್ನೂ ನಾನು ಬಯಸುವುದಿಲ್ಲ ಎನ್ನುತ್ತಾರೆ ಆಕೆ. ಪಾಟ್ನಾದಲ್ಲಿ ಇನ್ನಷ್ಟು ಅಂಗಡಿಗಳನ್ನು ತೆರೆಯಬೇಕೆಂಬುದು ಮತ್ತು ಈಶಾನ್ಯ ರಾಜ್ಯಗಳಿಗೆ ತನ್ನ ಉದ್ದಿಮೆಯನ್ನು ವಿಸ್ತರಿಸಬೇಕೆಂಬುದು ಆಕೆಯ ಬಯಕೆ. ಆದರೆ ಆಕೆ ಈ ಬಗ್ಗೆ ಆತುರ ಹೊಂದಿಲ್ಲ. ನಾನು ನಿಧಾನವಾಗಿ ಮುಂದುವರಿಯುತ್ತೇನೆ.. ಯಾಕೆಂದರೆ ನನ್ನ ಮೇಲೆ ಬೇರೆ ಜವಾಬ್ದಾರಿಯೂ ಇದೆ ಎಂಬುದನ್ನು ನಾನು ಮರೆಯುವಂತಿಲ್ಲ ಎನ್ನುತ್ತಾರೆ ಖಾನ್.

share
ಅಮಿತ್ ಕುಮಾರ್
ಅಮಿತ್ ಕುಮಾರ್
Next Story
X