ಚೀನಾ ಓಪನ್: ರಾಂಡ್ವಾಂಸ್ಕಾ ಮಹಿಳಾ ಚಾಂಪಿಯನ್

ಬೀಜಿಂಗ್, ಅ.9: ಪೊಲೆಂಡ್‌ನ ಅಗ್ನೆಸ್ಕಾ ರಾಂಡ್ವಾಂಸ್ಕಾ ಚೀನಾ ಓಪನ್‌ನಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ರವಿವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಾಂಡ್ವಾಂಸ್ಕಾ ಅವರು ಅಮೆರಿಕದ ಜೊಹನ್ನಾ ಕಾಂಟಾರನ್ನು 6-4, 6-2 ನೇರ ಸೆಟ್‌ಗಳಿಂದ ಮಣಿಸಿದರು. ಈ ಮೂಲಕ ವೃತ್ತಿಜೀವನದಲ್ಲಿ 20ನೆ ಹಾಗೂ ಬೀಜಿಂಗ್‌ನಲ್ಲಿ 2ನೆ ಪ್ರಶಸ್ತಿ ಮುಡಿಗೇರಿಸಿಕೊಂಡರು.
ವರ್ಷಾಂತ್ಯದಲ್ಲಿ ಸಿಂಗಾಪುರದಲ್ಲಿ ನಡೆಯಲಿರುವ ಡಬ್ಲುಟಿಎ ಫೈನಲ್ಸ್ ಟೂರ್ನಿಗೆ ಈಗಾಗಲೇ ಅರ್ಹತೆ ಪಡೆದಿರುವ ರಾಂಡ್ವಾಂಸ್ಕಾ ಆ ಟೂರ್ನಿಯಲ್ಲಿ ಕಾಂಟಾರನ್ನು ಮತ್ತೊಮ್ಮೆ ಎದುರಿಸುವ ಸಾಧ್ಯತೆಯಿದೆ.
ಮರ್ರೆಗೆ ಪುರುಷರ ಸಿಂಗಲ್ಸ್ ಪ್ರಶಸ್ತಿ
ಬೀಜಿಂಗ್, ಅ.9: ಬ್ರಿಟನ್‌ನ ಆ್ಯಂಡಿ ಮರ್ರೆ ಚೀನಾ ಓಪನ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಜಯಿಸಿದರು. ರವಿವಾರ ಇಲ್ಲಿ ನಡೆದ ಫೈನಲ್‌ನಲ್ಲಿ ಅವರು ಗ್ರಿಗೊರ್ ಡಿಮಿಟ್ರಿ ಅವರನ್ನು 6-4, 7-6(7-2) ನೇರ ಸೆಟ್‌ಗಳ ಅಂತರದಿಂದ ಮಣಿಸಿದರು.
ಈ ಗೆಲುವಿನೊಂದಿಗೆ ಒಟ್ಟು 1000 ಅಂಕ ಗಳಿಸಿರುವ ವಿಶ್ವ ರ್ಯಾಂಕಿಂಗ್‌ನಲ್ಲಿ ನಂ.2ನೆ ಸ್ಥಾನದಲ್ಲಿರುವ ಮರ್ರೆ ಅಗ್ರ ಸ್ಥಾನದತ್ತ ಹೆಜ್ಜೆೆ ಇಟ್ಟಿದ್ದಾರೆ.





