ರಾಜ್ಯದ ಜನತೆಗೆ ಮುಖ್ಯಮಂತ್ರಿಶುಭಾಶಯ
ಆಯುಧಪೂಜೆ -ವಿಜಯ ದಶಮಿ

ಬೆಂಗಳೂರು, ಅ. 9: ಆಯುಧ ಪೂಜೆ ಹಾಗೂ ವಿಜಯದಶಮಿ ರಾಜ್ಯವನ್ನು ಅಭಿವೃದ್ಧಿಯತ್ತ ಹಾಗೂ ರಾಜ್ಯದ ಜನತೆ ಯನ್ನು ಸಮೃದ್ಧಿಯತ್ತ ಕೊಂಡೊ ಯ್ಯಲಿ ಎಂದು ಸಿದ್ದರಾಮಯ್ಯ ರಾಜ್ಯದ ಜನತೆಗೆ ಶುಭ ಹಾರೈಸಿದ್ದಾರೆ.
ದಸರಾ ಸಂಭ್ರಮದ ವಿಶೇಷ ಆಚರಣೆ ಹಾಗೂ ವಿಶಿಷ್ಟ ಆಕರ್ಷಣೆಯ ಆಯುಧ ಪೂಜೆಯ ದಿನ ನಾಡ ರಕ್ಷಣೆಗೆ ಅಗತ್ಯವಿರುವ ಎಲ್ಲ್ಲ ಆಯುಧಗಳನ್ನು ಪೂಜಿಸುವ ಸಂಪ್ರದಾಯವು, ಅವುಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಅನುವು ಮಾಡಿಕೊಡುತ್ತದೆ. ಆದರೆ, ಇದೀಗ ಈ ಸಂಪ್ರದಾ ಯವು ಹೊಸ ರೂಪ ಪಡೆದುಕೊಂಡಿದೆ. ನ್ನದಾತ ತನ್ನ ದುಡಿಮೆಗೆ ನೆರವು ನೀಡುವ ನೇಗಿಲನ್ನು ಪೂಜಿಸುತ್ತಾನೆ. ಜನರು ತಮ್ಮ ಬದುಕಿಗೆ ನೆರವಾಗುವ, ತಮಗೆ ಬದುಕು ಕಟ್ಟಿಕೊಡುವ ಎಲ್ಲ ಉಪಕರಣಗಳನ್ನು-ವಸ್ತುಗಳನ್ನು-ಸಲಕರಣೆಗಳನ್ನು ಹಾಗೂ ವಾಹನಗಳನ್ನು ಪೂಜಿಸುತ್ತಾರೆ.
ನೆಲದ ಮೇಲೆ ಸಾಗುವ ಎತ್ತಿನ ಬಂಡಿ ಹಾಗೂ ಆಗಸದಲ್ಲಿ ಹಾರುವ ವಿಮಾನ ಎಲ್ಲವೂ ಶುಭ್ರಗೊಂಡು ನಳನಳಿಸಿ, ಪೂಜಿಸಲ್ಪಡುತ್ತವೆ. ಎಲ್ಲೆಡೆ ಹೊಸತನ ಮನೆ ಮಾಡುತ್ತದೆ. ವಿಜಯ ದಶಮಿಯ ದಿನ ತಾವು ಕೈಗೊಳ್ಳುವ ಎಲ್ಲ್ಲ ಕಾರ್ಯಗಳೂ ಯಶಸ್ಸಿಯಾಗುತ್ತವೆ ಎಂಬುದು ಬಹುಜನರ ನಂಬಿಕೆ.್ಷರಾಭ್ಯಾಸ ಪ್ರಾರಂಭಿಸುವುದರಿಂದ ವಿದ್ಯಾಭ್ಯಾಸ ಮುಂದುವರಿಸುವ ಬಗ್ಗೆ ಮಕ್ಕಳ ಭವಿಷ್ಯ ರೂಪಿಸುವ ಲ್ಲ ಕಾರ್ಯಚಟುವಟಿಕೆಗಳೂ ವಿಜಯದಶಮಿ
ಯಂದೇ ನಡೆಯುತ್ತವೆ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.







