ನಕಲಿ ಪತ್ರಕರ್ತರ ಬಂಧನ
ಬೆದರಿಕೆ ಪ್ರಕರಣ
ಬೆಂಗಳೂರು, ಅ.9: ಚಿನ್ನಾಭರಣ ವ್ಯಾಪಾರಿಯೊಬ್ಬರನ್ನು ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಪ್ರಕರಣ ಸಂಬಂಧ ಇಲ್ಲಿನ ತಲಘಟ್ಟಪುರ ಠಾಣಾ ಪೊಲೀಸರು ಇಬ್ಬರು ನಕಲಿ ಪತ್ರಕರ್ತರನ್ನು ಬಂಸಿದ್ದಾರೆ. ಬಂತ ನಕಲಿ ಪತ್ರಕರ್ತರನ್ನು ಮೂಲತಃ ಚಿತ್ರದುರ್ಗ ಜಿಲ್ಲೆಯ ಐಡಿಪಿಎಲ್ ಲೇಔಟ್‌ನ ನಿವಾಸಿ ರುದ್ರಜಿತ್(26), ಆನೇಕಲ್ ತಾಲೂಕಿನ ಹರಪನಹಳ್ಳಿ ನಿವಾಸಿ ಸೋಮಶೇಖರ್ (23) ಎಂದು ಪೊಲೀಸರು ಗುರುತಿಸಿದ್ದಾರೆ.
ಪ್ರಕರಣದ ಹಿನ್ನಲೆ: ಸೆ.23ರಂದು ಇಲ್ಲಿನ ಕನಕಪುರ ಮುಖ್ಯರಸ್ತೆ ವಾಜರಹಳ್ಳಿಯಲ್ಲಿರುವ ಮಾತಾಜಿ ಜ್ಯುವೆಲ್ಸ್ ಮತ್ತು ಮಹಾಲಕ್ಷ್ಮೀ ಜ್ಯುವೆಲರ್ಸ್ ಅಂಗಡಿಗೆ ಆರೋಪಿಗಳಿಬ್ಬರು ಭೇಟಿ ನೀಡಿ, ಎರಡು ಚಿನ್ನದ ಉಂಗುರಗಳನ್ನು ಖರೀದಿಸಿ, ತದನಂತರ ಮಲ್ಲೇಶ್ವರಂನಲ್ಲಿರುವ ಅಯೋಧ್ಯಾ ಗೋಲ್ಡ್ ಚೆಕಿಂಗ್ ಸೆಂಟರ್‌ನಲ್ಲಿ ಈ ಉಂಗುರಗಳನ್ನು ಪರಿಶೀಲಿಸಿದ್ದಾರೆ.
ಬಳಿಕ ಚಿನ್ನಾಭರಣಗಳು ಶೇ.75ರಷ್ಟು ಶುದ್ಧತೆ ಹೊಂದಿರುವ ಬಗ್ಗೆ ಜೆರಾಕ್ಸ್ ರಸೀದಿ ಚೀಟಿ ತೆಗೆದುಕೊಂಡು ಪುನಃ ಅ.3ರಂದು ಮತ್ತು ಅ.8ರಂದು ಅಂಗಡಿಗೆ ಬಂದ ರುದ್ರಜಿತ್ ಮತ್ತು ಸೋಮಶೇಖರ್ ನಾವು ಖಾಸಗಿ ವಾಹಿನಿ ಯೊಂದರ ಪತ್ರಕರ್ತರೆಂದು ಅಂಗಡಿ ಮಾಲಕ ಮಾಣಿಕ್‌ಚಂದ್‌ರನ್ನು ಪರಿಚಯಿಸಿಕೊಂಡು, ನಿಮ್ಮ ಅಂಗಡಿಗಳಲ್ಲಿ ಖರೀದಿಸಿರುವ ಚಿನ್ನಾಭರಣದ ಗುಣಮಟ್ಟ ಕಡಿಮೆಯಿದೆ. ಂತಹ ಚಿನ್ನಾಭರಣಗಳನ್ನು ಮಾರಾಟ ಮಾಡಿ ಜನರಿಗೆ ಮೋಸ ಮಾಡುತ್ತಿದ್ದೀರಿ. ನೀವು 50 ಸಾವಿರ ರೂ. ಕೊಡದಿದ್ದರೆ ಈ ವಂಚನೆ ಬಗ್ಗೆ ಮಾಧ್ಯಮದಲ್ಲಿ ಪ್ರಸಾರ ಮಾಡುತ್ತೇವೆ ಎಂದು ಬೆದರಿಸಿದ್ದಾರೆ.
ಆರೋಪಿಗಳ ವರ್ತನೆ ಬಗ್ಗೆ ಅನುಮಾನಗೊಂಡ ಅಂಗಡಿ ಮಾಲಕ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ತನಿಖೆ ನಡೆಸಿ, ಇಬ್ಬರು ನಕಲಿ ಪತ್ರಕರ್ತರನ್ನು ಬಂಸಿದ್ದಾರೆ.





