ಆರೋಪಿಗಳಿಗೆ ಕಠಿಣ ಶಿಕ್ಷೆವಿಸಲು ದಸಂಸ ಆಗ್ರಹ
ಉತ್ತರಾಖಂಡ ದಲಿತನ ಶಿರಚ್ಛೇಧ ಪ್ರಕರಣ
ಬೆಂಗಳೂರು, ಅ.9: ಉತ್ತರಾಖಂಡದ ಗ್ರಾಮವೊಂದರಲ್ಲಿ ಹಿಟ್ಟಿನ ಗಿರಣಿ ಪ್ರವೇಶಿಸಿದ್ದ ದಲಿತನ ಶೀರಚ್ಛೇಧವನ್ನು ಖಂಡಿಸಿ ರವಿವಾರ ನಗರದ ಪುರಭವನದ ಮುಂಭಾಗ ರಾಜ್ಯ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶಕ್ಕೆ ಸ್ವಾತಂತ್ರ ಬಂದು ಎಪ್ಪತ್ತು ವರ್ಷಗಳೇ ಕಳೆದರೂ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ. ದಿನ ಬೆಳಗಾದರೆ ದೇಶಕ್ಕೆ ಪ್ರೇಮ ಪಾಠ ಹೇಳುವ ಸರಕಾರಗಳು, ಜನಪ್ರತಿನಿಗಳು ಮತ್ತು ಮಠಾಪತಿಗಳು ಅಸ್ಪಶ್ಯತೆಯನ್ನು ಹೋಗಲಾಡಿಸಲು ವಿಲರಾಗಿದ್ದಾರೆ. ದೇಶದಲ್ಲಿ ದಲಿತರ ಮೇಲೆ ಸರಣಿ ದೌರ್ಜನ್ಯಗಳು ನಡೆಯುತ್ತಿದ್ದರೂ ಕೇಂದ್ರ ಸರಕಾರ ಕಣ್ಣ್ಮುಚ್ಚಿ ಕುಳಿತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.ತ್ತರಖಾಂಡದ ನೈನಿತಾಲ್, ಕುಮಾಂವ್ ಹಿಲ್ಸ್ ಬಾಗೇಶ್ವರ ದಲ್ಲಿ ಹಿಟ್ಟಿನ ಗಿರಣಿಗೆ ದಲಿತ ಸೋಹನ್ ರಾಮ್‌ಪ್ರವೇಶದಿಂದ ಅಪವಿತ್ರವಾಗಿದೆ ಎಂದು ಗುರಿಯಾಗಿಸಿ ಶಿರಚ್ಛೇಧ ಮಾಡಿರುವುದು ಅತ್ಯಂತ ಘೋರ, ಅಮಾನವೀಯ ಘಟನೆ. ದಲಿತನ ಶೀರಚ್ಛೇಧ ಮಾಡಿರುವ ಆರೋಪಿಗೆ ಕಠಿಣ ಶಿಕ್ಷೆ ವಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಕೈಗೊಳ್ಳಬೇಕು ಂದು ಸಮಿತಿಯ ಸಂಘಟನಾ ಸಂಚಾಲಕ ಎಚ್.ಇಂದ್ರಯ್ಯ ಆಗ್ರಹಿಸಿದರು.
ದೇಶದಲ್ಲಿ ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಹಾಕುವಲ್ಲಿ ಸರಕಾರಗಳು ವಿಲವಾಗಿವೆ. ಸಂಘ ಪರಿವಾರಗಳು ದಲಿತರನ್ನು ಗುರಿಯಾಗಿಸಿ ದೌರ್ಜನ್ಯ ಎಸುಗುತಿದೆ. ದನದ ಮಾಂಸದ ಹೆಸರಿನಲ್ಲಿ ದೇಶದಲ್ಲಿ ಅಶಾಂತಿಯನ್ನು ಕದಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ದಲಿತರಿಗೆ ಸಮಾನತೆ, ಸುರಕ್ಷತೆಯನ್ನು ಕಲ್ಪಿಸಲು ಸರಕಾರಗಳಿಗೆ ಸಾಧ್ಯವಾಗದಿದ್ದರೆ ಕೂಡಲೆ ದಲಿತರಿಗೆ ಪ್ರತ್ಯೇಕ ರಾಷ್ಟ್ರ ಕಲ್ಪಿಸಬೇಕು ಎಂದು ಒತ್ತಾಯಿಸಿದ ಅವರು, ಕೂಡಲೇ ದಲಿತರ ಮೇಲಿನ ದೌರ್ಜನ್ಯಗಳಿಗೆ ಕಡಿವಾಣ ಹಾಕದಿದ್ದಲ್ಲಿ ಕೇಂದ್ರ ಸರಕಾರದ ವಿರುದ್ಧ ನಿರಂತರವಾಗಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಮುನಿರಾಜು ಮತ್ತಿತರರು ಪಾಲ್ಗೊಂಡಿದ್ದರು.







