ಆರೋಪಿ ಬೆಂಗಳೂರಿನಲ್ಲಿಸೆರೆ
ಸುಗಂಧ ದ್ರವ್ಯತಜ್ಞೆಮೋನಿಕಾ ಗುರ್ಡೆ ಹತ್ಯೆಪ್ರಕರಣ
ಬೆಂಗಳೂರು, ಅ. 9: ಗೋವಾದ ಪಣಜಿ ಸಮೀಪ ಸುಗಂಧ ದ್ರವ್ಯ ತಜ್ಞೆ ಮೋನಿಕಾ ಗುರ್ಡೆ ಹತ್ಯೆ ಪ್ರಕರಣ ಸಂಬಂಧ ಆರೋಪಿಯೊಬ್ಬನನ್ನು ಇಲ್ಲಿನ ಬಸವನಗುಡಿ ಠಾಣಾ ಪೊಲೀಸರ ಸಹಾಯದಿಂದ ಗೋವಾ ಪೊಲೀಸರು ರವಿವಾರ ಬಂಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂತ ಆರೋಪಿಯನ್ನು ಸುಗಂಧ ದ್ರವ್ಯ ತಜ್ಞೆ ಮೋನಿಕಾ ಗುರ್ಡೆ ಮನೆಯ ಭದ್ರತಾ ಸಿಬ್ಬಂದಿ ರಾಜಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಗೋವಾದ ಪಣಜಿಯಿಂದ 10 ಕಿ.ಮೀ ದೂರದಲ್ಲಿರುವ ಸಂಗೋಲ್ಡದ ಎಂಬಲ್ಲಿ ಸುಗಂಧ ದ್ರವ್ಯ ತಜ್ಞೆ ಮೋನಿಕಾ ಗುರ್ಡೆ(39) ನಿವಾಸದಲ್ಲಿಯೇ ದುಷ್ಕರ್ಮಿಗಳು ಅ.5ರ ಬೆಳಗ್ಗೆ 11ಗಂಟೆ ಸುಮಾರಿಗೆ ಆಕೆಯ ಕೈಕಾಲು ಕಟ್ಟಿ, ಉಸಿರುಗಟ್ಟಿಸಿ ಬರ್ಬರವಾಗಿ ಕೊಲೆಗೈದಿದ್ದರು. ಅಲ್ಲದೆ, ದುಷ್ಕರ್ಮಿಗಳು ಆಕೆಯ ಎಟಿಎಂ ಕಾರ್ಡ್, ನಗದು ದೋಚಿ ಪರಾರಿಯಾಗಿದ್ದರು. ಸಂಬಂಧ ಗೋವಾದ ಪೊಲೀಸರ ವಿಶೇಷ ತಂಡ ದುಷ್ಕರ್ಮಿಗಳ ಪತ್ತೆಗಾಗಿ ತನಿಖೆ ಕೈಗೊಂಡಿತ್ತು. ಆರೋಪಿ ರಾಜಕುಮಾರ್ ಸಿಂಗ್ ಮೋನಿಕಾ ಗುರ್ಡೆ ನಿವಾಸದ ಭದ್ರತಾ ಸಿಬ್ಬಂದಿಯಾಗಿದ್ದು, ಅ.5 ಹತ್ಯೆ ಪ್ರಕರಣದ ನಂತರ ತಲೆಮರೆಸಿಕೊಂಡಿದ್ದ ಎಂದು ಪೊಲೀಸ್ ಅಕಾರಿಯೊಬ್ಬರು ತಿಳಿಸಿದ್ದಾರೆ.
ಸಿಕ್ಕಿದ್ದು ಹೇಗೆ: ಆರೋಪಿ ರಾಜಕುಮಾರ್ ಸಿಂಗ್ ಅ.6ರ ತಡರಾತ್ರಿ ಮೋನಿಕಾ ಗುರ್ಡೆಯ ಎರಡು ಎಟಿಎಂ ಕಾರ್ಡ್, 40 ಸಾವಿರ ನಗದು ದೋಚಿದ್ದ ಎಂದು ಗೊತ್ತಾಗಿದೆ. ಬಳಿಕ ಗೋವಾದ ಪಣಜಿ ನಗರದ ಎಟಿಎಂಯೊಂದರಲ್ಲಿ ಹಣ ತೆಗೆದಿದ್ದ. ಆನಂತರ ಎರಡನೆ ಬಾರಿ ಬೆಂಗಳೂರಿನ ಬಟ್ಟೆ ಅಂಗಡಿಯೊಂದರಲ್ಲಿ ಹಣ ತೆಗೆದುಕೊಂಡಿರುವುದು ಬೆಳಕಿಗೆ ಬಂದಿತ್ತು.ಸಂಬಂಧ ಗೋವಾ ಪೊಲೀಸರ ವಿಶೇಷ ತಂಡ ನಗರ ಪೊಲೀಸರ ಸಹಾಯ ಪಡೆದು, ರಾಜಕುಮಾರ್ ಸಿಂಗ್ ಹಣ ತೆಗೆದಿದ್ದ ಬಟ್ಟೆ ಅಂಗಡಿಯ ಸಿಸಿ ಟಿವಿಯಲ್ಲಿದ್ದ ಚಿತ್ರಗಳನ್ನು ಸಂಗ್ರಹಿಸಿದ್ದರು. ಬಳಿಕ ಇಲ್ಲಿನ ಬಸವನಗುಡಿ ಪೊಲೀಸರು ಶೋಧಕಾರ್ಯ ಆರಂಭಿಸಿ, ಕಾಟನ್‌ಪೇಟೆಯ ಲಾಡ್ಜ್‌ವೊಂದರಲ್ಲಿ ವಾಸ್ತವ್ಯವಿದ್ದ ಆರೋಪಿ ರಾಜಕುಮಾರನನ್ನು ಬಂಸಿದ್ದಾರೆ. ಪ್ರಕರಣ ಸಂಬಂಧ ಆರೋಪಿ ರಾಜಕುಮಾರ್ ಸಿಂಗ್ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.





