ಆಯುಧ ಪೂಜೆ: ಹೂವಿನ ದರದಲ್ಲಿಮೂರು ಪಟ್ಟು ಹೆಚ್ಚಳ

ಬೆಂಗಳೂರು, ಅ.9: ಸೋಮವಾರ ಆಯುಧ ಪೂಜೆ ಇರುವ ಹಿನ್ನೆಲೆಯಲ್ಲಿ ನಗರದ ವಿವಿಧ ಮಾರುಕಟ್ಟೆಗಳಲ್ಲಿ ವ್ಯಾಪಾರ ಎರಡು ದಿನಗಳಿಂದ ಜೋರಾಗಿಯೇ ನಡೆದಿದೆ. ಕೆ.ಆರ್.ಮಾರುಕಟ್ಟೆ, ಯಶವಂತಪುರ, ಮಡಿವಾಳ, ಗಾಂಬಝಾರ್, ಕಾಮಾಕ್ಷಿಪಾಳ್ಯ, ಮಡಿವಾಳ ಸೇರಿದಂತೆ ಹಲವೆಡೆ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ.
ಎರಡು ದಿನಗಳಿಂದಲೂ ಹೂವು, ಕುಂಬಳಕಾಯಿ, ಬಾಳೆ ಕಂದುಗಳ ಮಾರಾಟ ಆರಂಭವಾಗಿದೆ. ಶನಿವಾರ ಹಾಗೂ ರವಿವಾರ ವ್ಯಾಪಾರ ಜೋರಾಗಿಯೇ ನಡೆದಿದ್ದು, ಸೋಮವಾರದ ಆಯುಧ ಪೂಜೆಗೆ ಜನ ಸಾಕಷ್ಟು ಸಿದ್ಧತೆ ನಡೆಸುತ್ತಿದ್ದಾರೆ. ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಸಾಕಷ್ಟು ಮಂದಿ ಪ್ರವಾಸ ಹಾಗೂ ಹುಟ್ಟೂರಿಗೆ ತೆರಳಿದ್ದರಿಂದ ಕೊಂಚ ವ್ಯಾಪಾರ ಮಂಕಾಗಿದೆ. ಬರದಿಂದಾಗಿ ಬಾಳೆ ಕಂದು, ಹೂವು, ಹಣ್ಣು, ಕುಂಬಳ ಕಾಯಿ ದರ ಎಲ್ಲೆಡೆ ಹೆಚ್ಚಾಗಿದೆ. ಆದರೂ ಹಬ್ಬದ ಖರೀದಿ ಮುಖ್ಯ ಎಂದು ಪರಿಗಣಿಸಿರುವ ನಗರದ ನಾಗರಿಕರು ಬೆಲೆ ಹೆಚ್ಚಳದ ಬಗ್ಗೆ ತಲೆಕೆಡಿಸಿಕೊಂಡಿಲ್ಲ.ರಿಕೆ-ಇಳಿಕೆ: ಮಾರುಕಟ್ಟೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಹೂವು, ಹಣ್ಣು, ಕುಂಬಳಕಾಯಿ ಬೆಲೆ ಹೆಚ್ಚಾಗಿದೆ. ಹೆಚ್ಚಿನ ರೈತರು ಬಾಳೆ ಕಂದನ್ನು ಮಾರುಕಟ್ಟೆಗೆ ತಂದಿರುವುದರಿಂದ ಸ್ಪರ್ಧೆಗೆ ಒಳಗಾಗಿ ಬಾಳೆ ಕಂದಿನ ಬೆಲೆ ಕೊಂಚ ಕಡಿಮೆ ಇದೆ.ುಂಬಳಕಾಯಿ ಬೆಲೆಯಲ್ಲಿ ಕೆಜಿಗೆ 10 ರೂ. ಹೆಚ್ಚಾಗಿದೆ. ಕಳೆದ ವರ್ಷ 15-20 ರೂ. ಪ್ರತಿ ಕೆ.ಜಿ. ಇದ್ದ ಕುಂಬಳಕಾಯಿ ಈ ವರ್ಷ 25ರಿಂದ 30 ರೂ. ಆಗಿದೆ. ಇನ್ನು, ಬಾಳೆ ಕಂದು ಕಳೆದ ವರ್ಷಕ್ಕೆ ಹೋಲಿಸಿದರೆ ಕೊಂಚ ಅಗ್ಗವಾಗಿದೆ. ಕಳೆದ ವರ್ಷ ಜೋಡಿಗೆ 80ರೂ. ಇತ್ತು. ಈ ವರ್ಷ 50ರಿಂದ 60 ರೂ.ಗೆ ಬಂದಿದೆ. ಹೂವಿನ ರೇಟು ಮೂರು ಪಟ್ಟು: ಕಳೆದ ವರ್ಷಕ್ಕೆ ಹೋಲಿಸಿದರೆ ಎಲ್ಲ ವಿಧದ ಹೂವಿನ ದರ ಬೆಂಗಳೂರಿ ನೆಲ್ಲೆಡೆ ಮೂರು ಪಟ್ಟು ಹೆಚ್ಚಳವಾಗಿದೆ. ಇಂದಿನ ದರದ ಪ್ರಕಾರ ಕನಕಾಂಬರ ಹೂವು ಪ್ರತಿ ಕೆ.ಜಿ.ಗೆ 800 ರಿಂದ 1,000 ರೂ., ಕಾಕಡಾ ಮಲ್ಲಿಗೆ 600 ರಿಂದ 800 ರೂ., ದುಂಡು ಮಲ್ಲಿಗೆ 600 ರಿಂದ 800ರೂ. ರುದ್ರಾಕ್ಷಿ 80 ರಿಂದ 100 ರೂ., ಸೇವಂತಿಗೆ 150 ರಿಂದ 200 ರೂ., ಗುಲಾಬಿ 200 ರಿಂದ 300 ರೂ., ಚೆಂಡು ಹೂವು 20 ರಿಂದ 60 ರೂ. ಸುಗಂಧರಾಜ 350ರಿಂದ 400 ರೂ. ಆಗಿವೆ.





