Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಬದಲಾವಣೆಯ ಹಾದಿಯಲ್ಲಿ ನೊಬೆಲ್

ಬದಲಾವಣೆಯ ಹಾದಿಯಲ್ಲಿ ನೊಬೆಲ್

ವಿಸ್ಮಯವಿಸ್ಮಯ10 Oct 2016 3:22 PM IST
share
ಬದಲಾವಣೆಯ ಹಾದಿಯಲ್ಲಿ  ನೊಬೆಲ್

ಪ್ರತಿಷ್ಠಿತ ನೊಬೆಲ್ ಪುರಸ್ಕಾರದ ಈ ವರ್ಷದ ಕಾರ್ಯಕ್ರಮ ಆರಂಭಗೊಂಡಿದ್ದು ಈ ಬಾರಿಯ ವಿಶೇಷವೆಂದರೆ- ಕೇವಲ ಪ್ರಶಸ್ತಿ ಪ್ರದಾನ ಸಮಾರಂಭ ಮಾತ್ರವಲ್ಲ, ಮುಂದಿನ ಮೂರು ತಿಂಗಳಲ್ಲಿ ಯುವಜನರನ್ನು ಆಕರ್ಷಿಸಲು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು. ಡಿ.11ರಂದು ಯುವಜನರನ್ನು ದೃಷ್ಠಿಯಲ್ಲಿರಿಸಿಕೊಂಡು ‘ಪೀಸ್ ಪ್ರೈಸ್’ ಸಂಗೀತಗೋಷ್ಠಿ ಹಮ್ಮಿಕೊಳ್ಳಲಾಗಿದ್ದು 500 ಮಿಲಿಯನ್ ವೀಕ್ಷಕರನ್ನು ತಲುಪುವ ಉದ್ದೇಶದೊಂದಿಗೆ 100ಕ್ಕೂ ಹೆಚ್ಚಿನ ನಗರಗಳಲ್ಲಿ ಇದು ಪ್ರಸಾರವಾಗಲಿದೆ.

ಈ ಹಿಂದೆ ನೋಬೆಲ್ ಪುರಸ್ಕಾರಕ್ಕೆ ‘ಇಮೇಜ್’ ಸಮಸ್ಯೆ ಕಾಡುತ್ತಿತ್ತು. ಸಾಂಪ್ರದಾಯಿಕವಾಗಿ ಈ ಪ್ರಶಸ್ತಿಗಳು ಹೆಚ್ಚಾಗಿ ಬಿಳಿಯ ಜನಾಂಗದ ಹಿರಿಯರಿಗೆ ಮೀಸಲಾಗಿರುತ್ತಿದ್ದವು. ಕೆಲವರಿಗೆ ಮಾತ್ರ ಮೀಸಲಾಗಿದ್ದ ಈ ಪ್ರಶಸ್ತಿ ಪ್ರದಾನ ಸಮಾರಂಭ ತುಂಬಾ ಬೋರ್ ಹೊಡೆಸುವಂತಿತ್ತು. ಈ ಹಿನ್ನೆಲೆಯಲ್ಲಿ ನೊಬೆಲ್ ಪುರಸ್ಕಾರಕ್ಕೆ ಆಧುನಿಕ ಸ್ಪರ್ಶ ನೀಡಲು ನೊಬೆಲ್ ಸಂಸ್ಥೆ ಮುಂದಾಗಿದೆ. ನೊಬೆಲ್ ಪುರಸ್ಕಾರದ ವೆಬ್‌ಸೈಟ್‌ನಲ್ಲಿ ‘ಸ್ಪೀಡ್‌ರೀಡ್’ ಎಂಬ ಶಿರೋನಾಮೆಯಡಿ ಮತ್ತು ನೊಬೆಲ್ ಸಪ್ತಾಹ ಸಂವಾದ ಕಾರ್ಯಕ್ರಮದಡಿ ಸಾಮಾನ್ಯ ವೀಕ್ಷಕರನ್ನು ಗುರಿಯಾಗಿರಿಸಿಕೊಂಡು ತಜ್ಞರಿಂದ ಚರ್ಚೆ ಮತ್ತು ಇದನ್ನು ಅಂತರ್ಜಾಲದಲ್ಲಿ ನೇರಪ್ರಸಾರ ಮಾಡುವುದು. ಅಲ್ಲದೆ ಸ್ಟಾಕ್‌ಹೋಂನಲ್ಲಿ ಅತ್ಯಾಧುನಿಕ ನೊಬೆಲ್ ಕೇಂದ್ರವನ್ನು ಆರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಆದರೆ ನೊಬೆಲ್ ಸಂಸ್ಥೆಯ ಪ್ರಯತ್ನಗಳಿಗೆ ಟೀಕೆಯೂ ಎದುರಾಗಿದೆ. ನಾರ್ವೆಯ ವಕೀಲ ಮತ್ತು ಶಾಂತಿ ಕಾರ್ಯಕರ್ತ ಫ್ರೆಡ್ರಿಕ್ ಹೆಫರ್‌ಮಲ್ ಅವರು ಈ ಪ್ರಕ್ರಿಯೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ನೂತನ ಉಪಕ್ರಮವು ನೋಬೆಲ್ ಪುರಸ್ಕಾರದ ಇತಿಹಾಸ, ಸಮಗ್ರತೆ ಮತ್ತು ಸ್ವಾತಂತ್ರವನ್ನು ಕುಗ್ಗಿಸುತ್ತದೆ ಎಂದು ಟೀಕಿಸಿದ್ದಾರೆ.

ಈ ಎಲ್ಲಾ ಟೀಕೆಗಳಿಗೆ ನೊಬೆಲ್ ಸಂಸ್ಥೆ ಎದೆಗುಂದಿಲ್ಲ. ತಮ್ಮ ಕಾರ್ಯಕ್ರಮಗಳನ್ನು ಯುವಜನ ಕೇಂದ್ರಿತವನ್ನಾಗಿಸಿದ್ದು ಮನರಂಜನಾ ಅಂಶಗಳನ್ನು ಸೇರಿಸಿಕೊಂಡಿದೆ. ‘ಶಾಂತಿಯೇ ಪ್ರಧಾನ’ ಎಂಬ ಧ್ಯೇಯವಾಕ್ಯದಡಿ ಕಳೆದ ಬಾರಿ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಾದ ಅಮೆರಿಕಾದ ಜೇಸನ್ ಡೆರುಲೊ, ಸಿಂಗಾಪುರ ಮೂಲದ ನಾರ್ವೆ ದೇಶದ ಕಲಾವಿದ ಕಿಗೊ ಮುಂತಾದವರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಬಾರಿಯ ನೊಬೆಲ್ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ನಾರ್ವೆಯ ಇಂಡೀ ಬ್ಯಾಂಡ್ ಮತ್ತು ಅಮೆರಿಕಾದ ಗಾಯಕ ಹ್ಯಾಸ್ಲೆ ಅವರ ಕಾರ್ಯಕ್ರಮ ಈಗಾಗಲೇ ನಿಗದಿಯಾಗಿದೆ. ಅಲ್ಲದೆ ಪುರಸ್ಕಾರ ಪ್ರದಾನ ಸಮಾರಂಭ ನಡೆಯಲಿರುವ ಟೆಲಿನೋರ್ ಅರೆನಾದಲ್ಲಿ ಸಭಿಕರಿಗೆ ಸ್ಥಳಾವಕಾಶವನ್ನು 10 ಸಾವಿರಕ್ಕೆ ಹೆಚ್ಚಿಸುವ ಮತ್ತು ಯುವಜನರಿಗಾಗಿ ವಿಶೇಷ ದರದ ಟಿಕೆಟುಗಳ ವ್ಯವಸ್ಥೆ ಮಾಡಲಾಗುತ್ತದೆ. ಈ ಎಲ್ಲಾ ವ್ಯವಸ್ಥೆಗಳಿಗೆ ಹೊರಗಿನ ಸಂಘ ಸಂಸ್ಥೆಗಳ ಪ್ರಾಯೋಜಕತ್ವದ ಅಗತ್ಯವಿದ್ದು ಇದರಲ್ಲಿ ಹೆಚ್ಚಿನವು ಕಾರ್ಪೊರೇಟ್ ಸಂಸ್ಥೆಗಳಾಗಿವೆ ಎಂಬುದು ಫ್ರೆಡ್ರಿಕ್ ಹೆಫರ್‌ಮಲ್ ಅವರ ಅಭಿಮತ. ಇದು ನೋಬೆಲ್ ಪುರಸ್ಕಾರದ ಸ್ಥಾಪಕ ಆಲ್ಫ್ರೆಡ್ ನೊಬೆಲ್ ಅವರ ಆಶಯಕ್ಕೆ ವಿರುದ್ಧವಾಗಿದೆ. 1895ರಲ್ಲಿ ಅವರು ಸಹಿ ಹಾಕಿದ ಉಯಿಲು ಪತ್ರದಲ್ಲಿ ನೊಬೆಲ್ ಸಂಸ್ಥೆಯು ನಡೆದುಕೊಳ್ಳಬೇಕಾದ ರೀತಿಯನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.

ಆದರೆ ಇದೀಗ ಸಂಸ್ಥೆ ಹಮ್ಮಿಕೊಂಡಿರುವ ನೂತನ ಕಾರ್ಯಕ್ರಮಗಳಿಗೆ 3ಎಂ, ಎರಿಕ್ಸನ್, ವೋಲ್ವೋ ಮುಂತಾದ ಕಂಪೆನಿಗಳ ಪ್ರಾಯೋಜಕತ್ವದ ನೆರವು ಪಡೆಯುವುದು ಅನಿವಾರ್ಯವಾಗಿದೆ.

ಇಂತಹ ಪ್ರಾಯೋಜಕರನ್ನು ಅವಲಂಬಿಸುವುದು ನೊಬೆಲ್ ಸಂಸ್ಥೆಯ ಸ್ವಾತಂತ್ರವನ್ನು ಕುಗ್ಗಿಸುತ್ತದೆ. ಪೀಸ್ ಪ್ರೈಸ್ ಕಾರ್ಯಕ್ರಮ ವಾಣಿಜ್ಯ ಚಿಂತನೆಯ ಒಂದು ವಿನಾಶಕ ವ್ಯವಹಾರವಾಗಿದೆ ಎಂದು ಟೀಕಿಸಿದ್ದಾರೆ ಹೆಫರ್‌ಮಲ್. ನೊಬೆಲ್ ಪುರಸ್ಕಾರದ ಪ್ರಾಧಾನ್ಯತೆಯನ್ನು ಪೀಸ್ ಪ್ರೈಸ್ ಸಂಗೀತಗೋಷ್ಠಿ ನಗಣ್ಯವಾಗಿಸುತ್ತದೆ ಎಂಬುದು ನಾರ್ವೆಯ ಇತರ ಟೀಕಾಕಾರರ ಅಭಿಮತ. ಬದಲಾವಣೆಗೆ ಒಳಗಾದ ಇನ್ನೊಂದು ವಿಭಾಗವೆಂದರೆ ವಾರ್ಷಿಕ ನೋಬೆಲ್ ಔತಣಕೂಟ. ಈ ಹಿಂದೆ ವೈವಿಧ್ಯಮಯ ತಿನಿಸುಗಳ ಸಾಂಪ್ರದಾಯಿಕ ಭೋಜನಕೂಟ ಭಾಷಣ ಮತ್ತು ಪಾನಕೂಟದೊಂದಿಗೆ ಸಮಾಪನಗೊಳ್ಳುತ್ತಿತ್ತು. ಇದೀಗ ಬ್ಯಾಲೆ ನೃತ್ಯ, ಸಂಗೀತ ಪ್ರಧಾನ ನಾಟಕಗಳು ಸೇರ್ಪಡೆಯಾಗಿವೆ. ಕಳೆದ ವರ್ಷ ಸ್ವೀಡನ್ -ಗ್ಯಾಂಬ್ರಿಯನ್ ಪಾಪ್ ಗಾಯಕ ಸಿನಾಬೊ ಸೆ ಮತ್ತು ಸ್ವೀಡನ್‌ನ ಆ್ಯನಾ ಟೆಮ್‌ಹಿಮ್ ಅವರ ಪಾಪ್ ಗಾಯನ ಭೋಜನ ಕೂಟದ ಕಾರ್ಯಕ್ರಮಕ್ಕೆ ಸೇರ್ಪಡೆಗೊಂಡಿತ್ತು. ನೊಬೆಲ್ ಸಂಸ್ಥೆಯವರು ಇದೀಗ ಬದಲಾವಣೆಯ ಹಾದಿಯಲ್ಲಿದ್ದಾರೆ. ನೊಬೆಲ್ ಪುರಸ್ಕಾರದ ಬಗ್ಗೆ ಮತ್ತು ಅದನ್ನು ಪಡೆದವರ ಬಗ್ಗೆ ವಿವರಣೆಯನ್ನು ಪ್ರಸಾರ ಮಾಡುವುದಕ್ಕೇ ಸೀಮಿತವಾಗಿರದೆ, ಸಭಿಕರಿಗೆ, ಅದರಲ್ಲೂ ವಿಶೇಷವಾಗಿ ಯುವಜನತೆಗೆ ಸ್ಪೂರ್ತಿ ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ವಿವಾದ ಮತ್ತು ಸವಾಲು:

ಆದರೆ ನೊಬೆಲ್ ಪುರಸ್ಕಾರದ ಮಹತ್ವತೆ ಮತ್ತು ಜನಪ್ರಿಯ ಕಾರ್ಯಕ್ರಮ ಇವೆರಡರ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಕಠಿಣ ಕಾರ್ಯವಾಗಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಆರ್ಥಿಕ ವಿಜ್ಞಾನ, ಶರೀರ ವಿಜ್ಞಾನ ಅಥವಾ ವೈದ್ಯಶಾಸ್ತ್ರ- ಈ ಆರು ವಿಭಾಗಗಳಲ್ಲಿ ನೊಬೆಲ್ ಪುರಸ್ಕಾರ ನೀಡಲಾಗುತ್ತದೆ. ಈ ಸಾಧಕರ ಸಾಧನೆಯನ್ನು ಸರಳವಾಗಿ ವಿವರಿಸಲು ಅಸಾಧ್ಯವಾಗಿದೆ. ನೊಬೆಲ್ ಪದಕ ಮತ್ತು ಅದನ್ನು ಪಡೆದವರನ್ನು ನೋಡಬಹುದು. ಆದರೆ ನೊಬೆಲ್ ಪದಕದ ಜೊತೆಗೆ ಸಿಗುವ ಪ್ರಶಸ್ತಿಯ ವಾಸ್ತವಿಕ ಮೊತ್ತದ ವಿವರ ನೀಡುವುದಿಲ್ಲ. (ಪ್ರಸ್ತುತ ಈ ಮೊತ್ತ 8 ಮಿಲಿಯನ್ ಸ್ವೀಡಿಶ್ ಡಾಲರ್‌ಗಳಾಗಿವೆ).

ಡೈನಮೈಟ್‌ನ ಸಂಶೋಧಕ, ಸ್ವೀಡನ್‌ನ ಉದ್ಯಮಿ ಆಲ್ಫ್ರೆಡ್ ನೊಬೆಲ್ ಅವರು ನೊಬೆಲ್ ಪುರಸ್ಕಾರವನ್ನು ಸ್ಥಾಪಿಸಿದಾಗ ಮಾನವ ಕುಲಕ್ಕೆ ಅತ್ಯುನ್ನತ ಕೊಡುಗೆ ನೀಡಿದವರಿಗೆ ಈ ಪುರಸ್ಕಾರ ಸಲ್ಲಬೇಕು ಎಂಬ ಆಶಯವನ್ನು ಹೊಂದಿದ್ದರು. 115 ವರ್ಷಗಳ ಇತಿಹಾಸ ಹೊಂದಿರುವ ಈ ಪುರಸ್ಕಾರದ ವೈಶಿಷ್ಟವನ್ನು ಕಾಪಾಡುವ ಅಗತ್ಯವಿದೆ. 2019ರಲ್ಲಿ ಸ್ಟಾಕ್‌ಹೋಮ್‌ನಲ್ಲಿ ಉದ್ಘಾಟನೆಯಾಗುವುದೆಂದು ನಿರೀಕ್ಷಿಸಲಾಗಿರುವ ನೊಬೆಲ್ ಕೇಂದ್ರ ಈಗ ಹೆಚ್ಚು ಚರ್ಚಿತ ವಿಷಯವಾಗಿದೆ. ವಸ್ತು ಪ್ರದರ್ಶನಕ್ಕೆ ಸ್ಥಳಾವಕಾಶ, ಉಪನ್ಯಾಸಗಳು, ಕಲಾ ಪ್ರದರ್ಶನದ ಜೊತೆಗೆ ಪ್ರತಿಷ್ಠಿತ ಪುರಸ್ಕಾರ ಪ್ರದಾನ ಸಮಾರಂಭವನ್ನೂ ಇಲ್ಲೇ ಹಮ್ಮಿಕೊಳ್ಳಲಾಗುತ್ತದೆ.

ಆದರೆ 130 ಮಿಲಿಯನ್ ಡಾಲರ್ ವೆಚ್ಚದ ಈ ಯೋಜನೆಗೂ ಟೀಕೆಯ ಬಿಸಿ ತಟ್ಟಿದೆ. ಕೆಲ ಟೀಕಾಕಾರರು ಕೇಂದ್ರದ ಕಟ್ಟಡವನ್ನು ‘ಹಿತ್ತಾಳೆ ವರ್ಣದ ಅಣುಸ್ಥಾವರ’ ಎಂದು ಟೀಕಿಸಿದರೆ, ಸ್ವೀಡನ್‌ನ ದೊರೆ 16ನೇ ಕಾರ್ಲ್ ಅವರು ಕಟ್ಟಡದ ದೈತ್ಯ ಗಾತ್ರವನ್ನು ಟೀಕಿಸಿದ್ದು ಇದನ್ನು ಸ್ಥಾಪಿಸಲಾಗುತ್ತಿರುವ ಸ್ಥಳ ಸರಿಯಿಲ್ಲ ಎಂದಿದ್ದಾರೆ. ಪುರಸ್ಕಾರವು ಲಿಂಗ ಅಸಮತೋಲನದ ವಿಷಯದಲ್ಲೂ ಸಾಕಷ್ಟು ಟೀಕೆಗೆ ಒಳಗಾಗಿದೆ. 1901ರಿಂದ ಕಳೆದ ವರ್ಷದವರೆಗೆ 49 ಮಹಿಳೆಯರು ನೊಬೆಲ್ ಪುರಸ್ಕಾರ ಪಡೆದಿದ್ದರೆ, ಪುರುಷರ ಸಂಖ್ಯೆ 825. ಸಂಘ ಸಂಸ್ಥೆಗಳು 26 ಬಾರಿ ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಈ ಪುರಸ್ಕಾರ ಪಡೆದವರಲ್ಲಿ ಹೆಚ್ಚಿನವರು ಬಿಳಿ ಜನಾಂಗದ ವಯಸ್ಕರು. ಅಲ್ಲದೆ ಆರು ಪ್ರಶಸ್ತಿಗಳಲ್ಲಿ ಐದನ್ನು ಸ್ವೀಡನ್‌ನ ದೊರೆ (ಮತ್ತೊಬ್ಬ ಬಿಳಿಜನಾಂಗದ ವಯಸ್ಕ) ಪ್ರದಾನ ಮಾಡುತ್ತಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ, ನೊಬೆಲ್ ಸಂಸ್ಥೆಯವರು ಟೀಕಾಕಾರರು ಎತ್ತಿರುವ ಕೆಲ ವಿವಾದಾತ್ಮಕ ವಿಷಯಗಳಿಗೆ ಪರಿಹಾರ ಕಂಡುಕೊಳ್ಳಬಹುದೇ ಮತ್ತು ಮನೋರಂಜನೆ ಹಾಗೂ ವ್ಯವಹಾರ ಇವೆರಡರ ನಡುವಿನ ಸಮತೋಲನೆ ಕಾಯ್ದುಕೊಳ್ಳಬಲ್ಲರೇ ಎಂಬುದನ್ನು ಕಾದು ನೋಡಬೇಕಾಗಿದೆ. ಯಾವುದಕ್ಕೂ ಆಟ ಆರಂಭವಾಗಲಿ.

ಈ ಹಿಂದೆ ನೊಬೆಲ್ ಪುರಸ್ಕಾರಕ್ಕೆ ‘ಇಮೇಜ್’ ಸಮಸ್ಯೆ ಕಾಡುತ್ತಿತ್ತು. ಸಾಂಪ್ರದಾಯಿಕವಾಗಿ ಈ ಪ್ರಶಸ್ತಿಗಳು ಹೆಚ್ಚಾಗಿ ಬಿಳಿಯ ಜನಾಂಗದ ಹಿರಿಯರಿಗೆ ಮೀಸಲಾಗಿರುತ್ತಿದ್ದವು. ಕೆಲವರಿಗೆ ಮಾತ್ರ ಮೀಸಲಾಗಿದ್ದ ಈ ಪ್ರಶಸ್ತಿ ಪ್ರದಾನ ಸಮಾರಂಭ ತುಂಬಾ ಬೋರ್ ಹೊಡೆಸುವಂತಿತ್ತು. ಈ ಹಿನ್ನೆಲೆಯಲ್ಲಿ ನೊಬೆಲ್ ಪುರಸ್ಕಾರಕ್ಕೆ ಆಧುನಿಕ ಸ್ಪರ್ಶ ನೀಡಲು ನೊಬೆಲ್ ಸಂಸ್ಥೆ ಮುಂದಾಗಿದೆ

130 ಮಿಲಿಯನ್ ಡಾಲರ್ ವೆಚ್ಚದ ‘ನೊಬೆಲ್ ಕೇಂದ್ರ’ ಯೋಜನೆಗೂ ಟೀಕೆಯ ಬಿಸಿ ತಟ್ಟಿದೆ. ಕೆಲ ಟೀಕಾಕಾರರು ಕೇಂದ್ರದ ಕಟ್ಟಡವನ್ನು ‘ಹಿತ್ತಾಳೆ ವರ್ಣದ ಅಣುಸ್ಥಾವರ’ ಎಂದು ಟೀಕಿಸಿದರೆ, ಸ್ವೀಡನ್‌ನ ದೊರೆ 16ನೆ ಕಾರ್ಲ್ ಅವರು ಕಟ್ಟಡದ ದೈತ್ಯ ಗಾತ್ರವನ್ನು ಟೀಕಿಸಿದ್ದು ಇದನ್ನು ಸ್ಥಾಪಿಸಲಾಗುತ್ತಿರುವ ಸ್ಥಳ ಸರಿಯಿಲ್ಲ ಎಂದಿದ್ದಾರೆ.

ವಿಸ್ಮಯ
ವಿಸ್ಮಯ
Next Story
X