ತಮಿಳುನಾಡಿನಲ್ಲಿ ಆಡಳಿತ ಸ್ಥಗಿತ: ಕರುಣಾನಿಧಿ

ಚೆನ್ನೈ, ಅಕ್ಟೋಬರ್ 11: ತಮಿಳ್ನಾಡಿನಲ್ಲಿ ಸಂಪೂರ್ಣ ಆಡಳಿತ ಸ್ಥಗಿತಗೊಂಡಿದೆ ಎಂದು ಡಿಎಂಕೆ ನಾಯಕ ಕರುಣಾ ನಿಧಿ ಹೇಳಿದ್ದಾರೆ. ರಾಜ್ಯದ ಆಡಳಿತ ಸುಸೂತ್ರಗೊಳಿಸಲು ಮಧ್ಯಂತರ ವ್ಯವಸ್ಥೆ ಮಾಡಬೇಕಾಗಿದೆ ಎಂದು ಕೇಂದ್ರಸರಕಾರ ಮತ್ತು ರಾಜ್ಯಪಾಲರಿಗೆ ಪತ್ರಬರೆದು ಅವರು ವಿನಂತಿಸಿದರೆಂದು ವರದಿಯಾಗಿದೆ.
ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಈಗ ಹೇಗೆ ಕೆಲಸಮಾಡುತ್ತಿದೆ ಎಂದು ಗೊತ್ತಾಗುತ್ತಿಲ್ಲ. ಮುಖ್ಯಮಂತ್ರಿ ಜಯಲಲಿತಾಆಸ್ಪತ್ರೆಯಲ್ಲಿರುವುದರಿಂದ ಸಚಿವರೆಲ್ಲ ಜವಾಬ್ದಾರಿಕೆ ಮರೆತು ಆಸ್ಪತ್ರೆಯಲ್ಲಿಯೇ ಇದ್ದಾರೆ. ಮುಖ್ಯಮಂತ್ರಿ ಸಹಿತ ಹಲವು ಖಾತೆಗಳ ಫೈಲುಗಳು ಹಾಗೆಯೇ ಬಿದ್ದುಕೊಂಡಿದೆ. ಇವೆಲ್ಲವೂ ವಿಲೇವಾರಿ ಹೇಗೆ ನಡೆಯುತ್ತಿದೆ ಹಾಗೂ ರಾಜ್ಯದ ಆಡಳಿತ ಸ್ಥಿತಿಯನ್ನು ಅರಿಯುವ ಹಕ್ಕುಗಳು ಜನರಿಗೆ ಇದೆ ಎಂದು ಕರುಣಾನಿಧಿ ಪತ್ರದಲ್ಲಿ ತಿಳಿಸಿದ್ದಾರೆಂದು ವರದಿ ವಿವರಿಸಿದೆ.
Next Story





