ಭಾರತದ ವ್ಯಕ್ತಿ ಶಾರ್ಜಾದಲ್ಲಿ ನಿಧನ

ಶಾರ್ಜ, ಅಕ್ಟೋಬರ್ 11: ಕೇರಳ ನಾದಾಪುರಂ ಕಕ್ಕಾವಳ್ಳಿಯ ರಫೀಕ್(41) ಎಂಬವರು ಶಾರ್ಜದಲ್ಲಿ ನಿಧನರಾಗಿದ್ದಾರೆ. ಸ್ನಾನದಕೋಣೆಯಲ್ಲಿ ಕುಸಿದು ಬಿದ್ದಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾದರೂ ಅವರು ಕೊನೆಯುಸಿರೆಳೆದರು ಎಂದು ವರದಿಯಾಗಿದೆ.
ಹೃತಯಾಘಾತದಿಂದ ಅವರು ಮೃತರಾಗಿದ್ದಾರೆಂದು ಪ್ರಾಥಮಿಕ ಅಂದಾಜು. ಮೃತದೇಹವನ್ನು ಊರಿಗೆ ಕೊಂಡೊಯ್ಯುವುದಕ್ಕೆ ಅಗತ್ಯ ಕ್ರಮಗಳು ನಡೆಯುತ್ತಿವೆ. ಅರಂಟೆಕ್ ಕಂಪೆನಿಯ ಉದ್ಯೋಗಿಯಾದ ರಫೀಕ್ ಕುಟುಂಬ ಸಮೇತ ಶಾರ್ಜದಲ್ಲಿ ವಾಸಿಸುತ್ತಿದ್ದಾರೆ. ಕಳೆದ ತಿಂಗಳಷ್ಟೇ ಅವರು ಕುಟುಂಬವನ್ನು ಊರಿನಿಂದ ಕರೆದು ಕೊಂಡು ಬಂದಿದ್ದರು.
Next Story





