ಕಾಸರಗೋಡು: ಕಾರ್ಮಿಕ ನಿಗೂಢ ಸಾವು

ಕಾಸರಗೋಡು,ಅ.11 : ರಬ್ಬರ್ ತೋಟದ ಕಾರ್ಮಿಕನೋರ್ವ ವಾಸ ಸ್ಥಳದಲ್ಲಿ ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮುಳ್ಳೇರಿಯಾ ದಲ್ಲಿ ನಡೆದಿದೆ.
ಕೋಝಿಕ್ಕೋಡು ತಿರುವಂಬಾಡಿಯ ದೇವಸ್ಯ ( 52) ಮೃತಪಟ್ಟವರು. ಇವರು ಮುಳ್ಳೇರಿಯಾ ಸಮೀಪದ ಗಾಡಿಗುಡ್ಡೆಯ ವಾಸವಿದ್ದ ಶೆಡ್ ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಾಲ್ಕು ತಿಂಗಳ ಹಿಂದೆ ಗಾಡಿಗುಡ್ಡೆಯ ಮಾರ್ಟಿನ್ ಎಂಬವರ ರಬ್ಬರ್ ತೋಟದ ಕೆಲಸಕ್ಕೆಂದು ಬಂದಿದ್ದರು. ಕೆಲಸಕ್ಕೆ ಬಾರದ ಹಿನ್ನೆಲೆ ಮೊಬೈಲ್ ಗೆ ಕರೆ ಮಾಡಿದರೂ ಸ್ಪಂದಿಸದ ಕಾರಣ ಸಹೋದ್ಯೋಗಿಗಳು ಸ್ಥಳಕ್ಕೆ ಬಂದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
Next Story





