ಸ್ವಾತಂತ್ರ್ಯ ಹೋರಾಟಗಾರ ಕರುಣಾಕರ್ ಅವರಿಗೆ ಅಂತಿಮ ನಮನ
ಉಳ್ಳಾಲ,ಅ.11: ಸ್ವಾತಂತ್ರ್ಯ ಹೋರಾಟಗಾರ ಕರುಣಾಕರ್ ಅವರ ಮೃತದೇಹವನ್ನು ಉಚ್ಚಿಲದ ಮನೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು.ಜಿಲ್ಲಾ ಕಾಂಗ್ರೆಸ್ ಸೇವಾದಳದ ಕಾರ್ಯಕರ್ತರು ಮೃತದೇಹಕ್ಕೆ ಚರಕದ ತ್ರಿವರ್ಣ ಧ್ವಜವನ್ನು ಹಾಕಿ ಗೌರವ ಸಲ್ಲಿಸಿದರು.ಸಚಿವ ಯು.ಟಿ ಖಾದರ್,ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಅಶ್ರಫ್,ಇನ್ಸ್‌ಪೆಕ್ಟರ್ ಶಿವಪ್ರಕಾಶ್,ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್,ಮುಖಂಡರಾದ ಸುರೇಶ್ ಭಟ್ನಗರ್ ಮೊದಲಾದ ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.
Next Story





.jpg.jpg)

