ಪೋಲೀಸರ ಕಿರುಕುಳದಿಂದ ಸಾಕು ದನಗಳನ್ನು ದಾನ ನೀಡಲು ಮುಂದಾದ ಗೋರಕ್ಷಕ ಸತ್ತಾರ್ ಶೇಖ್

►90 ವರ್ಷಗಳ ಕುಟುಂಬದ ಪರಂಪರೆ ಅಂತ್ಯ
►ಸಾವಿರಾರು ರೂ. ದಂಡ ಕಟ್ಟಿ ದನ ಸಾಕುತ್ತಿದ್ದರು
►ಶೇಖ್ ರ ವಿರುದ್ಧ ಪ್ರಕರಣ, ವಾಹನ ಜಪ್ತಿ
►ದನ ಬಿಡಿಸಲು ನ್ಯಾಯಾಲಯಕ್ಕೆ ಮೊರೆ
ಪುಣೆ,ಅ.10: ಜಾನುವಾರುಗಳನ್ನು ಅಪಾಯಕಾರಿಯಾದ ರೀತಿಯಲ್ಲಿ ಸಾಗಣಿಕೆ ಮಾಡಿದ ಆರೋಪದಲ್ಲಿ ಪೊಲೀಸರು ತನ್ನ ವಿರುದ್ಧ ಪ್ರಕರಣವನ್ನು ದಾಖಲಿಸಿದ ಹಿನ್ನೆಲೆಯಲ್ಲಿ ಇಲ್ಲಿನ ನ್ಯೂ ನಾನಾ ಪೇಟ್ ಬಡಾವಣೆಯ ನಿವಾಸಿ ಸತ್ತಾರ್ ಮುರ್ತಾಝಾಸ ಶೇಖ್ ಅವರು ಮನೆಯಲ್ಲಿ ದನಗಳನ್ನು ಸಾಕುವ 90 ವರ್ಷಗಳ ಹಳೆಯ ಪರಂಪರೆಗೆ ಅಂತ್ಯಹಾಡಲು ನಿರ್ಧರಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಅಂತಿಮ ತೀಪನ್ನು ನೀಡಿದ ಬಳಿಕ ಸತ್ತಾರ್ ಅವರು ತನ್ನಲ್ಲಿರುವ ದನಗಳನ್ನು ಸಂಘಟನೆಯೊಂದಕ್ಕೆ ದಾನ ಮಾಡಲು ನಿರ್ಧರಿಸಿದ್ದಾರೆ. ಶೇಖ್ ಮುರ್ತಾಝಾ ಅವರು ಹಾಲಿಗಾಗಿ ಎರಡು ದನಗಳನ್ನು ಹಾಗೂ ಒಂದು ಕರುವನ್ನು ಸಾಕುತ್ತಿದ್ದರು.ಅವರು ನ್ಯೂನಾನಾ ಪೇಟ್‌ನಲ್ಲಿರುವ ಸಣ್ಣ ಮನೆಯೊಂದರಲ್ಲಿ ವಾಸವಾಗಿದ್ದರು. ಮನೆಯಲ್ಲಿ ಕಟ್ಟಿಹಾಕಲು ಸ್ಥಳವಕಾಶವಿಲ್ಲದಿದ್ದುದರಿಂದ ಅವರು ತನ್ನ ದನಗಳನ್ನು ಮತ್ತು ಕರುವನ್ನು ರಸ್ತೆಗಳಲ್ಲಿ ಅಡ್ಡಾಡಲು ಬಿಡುತ್ತಿದ್ದರು.
ರಸ್ತೆಗಳಲ್ಲಿ ಅಲೆದಾಡುತ್ತಿದ್ದ ಈ ಜಾನುವಾರುಗಳನ್ನು ಪೌರಾಡಳಿತದ ಸಿಬ್ಬಂದಿ ಆಗಾಗ್ಗೆ ವಶಕ್ಕೆ ತೆಗೆದುಕೊಳ್ಳುತ್ತಿದ್ದರು. ಪ್ರತಿ ಸಲವೂ ಶೇಖ್ ಅವುಗಳನ್ನು ಬಿಡಿಸಿಕೊಳ್ಳುತ್ತಿದ್ದರು. ಕರುವಿಗೆ 600 ರೂ. ಹಾಗೂ ದನಕ್ಕೆ 1200 ರೂ. ದಂಡ ಪಾವತಿಸಬೇಕಾಗುತ್ತಿತ್ತು. ಹೀಗೆ ಈವರೆಗೆ ತಾನು 50 ಸಾವಿರ ರೂ.ವರೆಗೂ ದಂಡ ಪಾವತಿಸಿದ್ದೇನೆ ಎಂದವರು ಹೇಳುತ್ತಾರೆ. ‘‘ನಾನು ಈ ಎರಡು ದನಗಳನ್ನು ಹಾಗೂ ಕರುವನ್ನು ಕೇವಲ ಮಮತೆಯಿಂದ ಸಾಕುತ್ತಿದ್ದೇನೆ. ಇದು ನನ್ನ ಹವ್ಯಾಸವಲ್ಲ ಅಥವಾ ಅವುಗಳನ್ನು ಮಾರಾಟ ಮಾಡುವ ವ್ಯವಹಾರದಲ್ಲೂ ಇಲ್ಲ. ಅವುಗಳನ್ನು ಕಸಾಯಿಖಾನೆಗೆ ಸಾಗಿಸಲು ಎಂದೂ ಬಿಟ್ಟಿಲ್ಲ ಮತ್ತು ನನ್ನೊಂದಿಗೆ ಉಳಿಸಿಕೊಳ್ಳಲು ಬಯಸಿದ್ದೇ ಎಂದು ಶೇಖ್‌ಅವರು ತನ್ನ ಮುದಿಕರುವಿನೆಡೆಗೆ ನೋಡುತ್ತಾ ಹೇಳುತ್ತಾರೆ.
ಗೋವುಗಳ ಬಗ್ಗೆ ಶೇಖ್‌ಕುಟುಂಬದ ಪ್ರೀತಿ, 50 ವರ್ಷಗಳ ಹಿಂದೆಯೇ ಆರಂಭಗೊಂಡಿತ್ತು. ತನ್ನ ಮುತ್ತಜ್ಜ ಕರ್ನಾಟಕದಿಂದ ಪುಣೆಗೆ ವಲಸೆ ಬಂದಿದ್ದರು.ಅವರು ತನ್ನ ಕುಟುಂಬಕ್ಕೆ ಬೇಕಾದ ಹಾಲಿಗಾಗಿ ದನವೊಂದನ್ನು ಖರೀದಿಸಿದ್ದರು. ಆವಾಗ್ಗಿನಿಂದ ನಾವು ಮನೆಯಲ್ಲಿಯೇ ನಗಳನ್ನು ಸಾಕುತ್ತಿದ್ದೇವೆ ಎಂದವರು ಹೇಳುತ್ತಾರೆ.
ಆದರೆ ಕಳೆದ ತಿಂಗಳು ಪರಿಸ್ಥಿತಿ ವಿಷಮಸ್ಥಿತಿಗೆ ತಲುಪಿತು. ಸಾರಿಗೆ ಕಂಪೆನಿಯೊಂದನ್ನು ನಡೆಸುತ್ತಿರುವ ಶೇಖ್, ಬೀದಿಗಳಲ್ಲಿ ಅಲೆದಾಡುತ್ತಿದ್ದವೆಂಬ ಕಾರಣಕ್ಕೆ ಸ್ಥಳೀಯಾಡಳಿತದ ಸಿಬ್ಬಂದಿ ಹಿಡಿದಿದ್ದ ತನ್ನ ದನಗಳನ್ನು ದಂಡ ತೆತ್ತು, ಬಿಡಿಸಿಕೊಂಡು ವಾಹನದಲ್ಲಿ ತರುತ್ತಿದ್ದಾಗ, ಪೊಲೀಸರು ಹಾಗೂ ಸ್ಥಳೀಯ ‘ಗೋರಕ್ಷಕರು’ ಅವರನ್ನು ತಡೆದು ನಿಲ್ಲಿಸಿದ್ದರು.
‘‘ ನಾನು ಕಸಾಯಿಖಾನೆಗೆ ದನಗಳನ್ನು ಸಾಗಿಸುತ್ತಿದ್ದೇನೆಂದು ಗೋರಕ್ಷಕರು ನನ್ನ ವಿರುದ್ಧ ಆರೋಪ ಹೊರಿಸಿದ್ದರು. ನಾನು ಪೊಲೀಸರಿಗೆ ಸತ್ಯಸಂಗತಿಯನ್ನು ವಿವರಿಸಿದರೂ, ಅವರದಕ್ಕೆ ಕಿವಿಗೊಡಲಿಲ್ಲ. ಅಂತಿಮವಾಗಿ ದನ ಹಾಗೂ ಕರುವನ್ನು ಮತ್ತೆ ದೊಡ್ಡಿಗೆ ಕಳುಹಿಸಿದರು ಹಾಗೂ ನನ್ನ ವಿರುದ್ಧ ಮೊಕದ್ದಮೆ ದಾಖಲಿಸಿದರು’’ ಶೇಖ್ ಹೇಳುತ್ತಾರೆ.
ಆದರೆ ಈ ಬಗ್ಗೆ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಜಿ.ಮಿಶಾಲ್ ಸ್ಪಷ್ಟೀಕರ ನೀಡಿದ್ದು, ಶೇಖ್ ವಿರುದ್ಧ ಜಾನುವಾರುಗಳ ಅಪಾಯಕಾರಿ ಸಾಗಣೆಯ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆಯೇ ಹೊರತು ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದರೆಂಬ ಆರೋಪದಲ್ಲಿ ಅಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ತನ್ನ ದನ ಹಾಗೂ ಕರುವನ್ನು ತನಗೆ ಹಸ್ತಾಂತರಿಸಬೇಕೆಂದು ಕೋರಿ ಶೇಖ್ ನಗರ ನ್ಯಾಯಾಲಯದ ಮೆಟ್ಟಲೇರಿದರು. ಪ್ರಕರಣವನ್ನು ಆಲಿಸಿದ ನ್ಯಾಯಾಲಯವು ಕೊನೆಗೂ ಜಾನುವಾರುಗಳ ಬಿಡುಗಡೆಗೆ ಆದೇಶಿಸಿತು. ಆದರೆ ಅವುಗಳನ್ನು ಮಾರಾಟ ಮಾಡದಂತೆ ಅಥವಾ ಉಡುಗೊರೆಯಾಗಿ ನೀಡದಂತೆಯೂ ಆದೇಶಿಸಿತು. 3 ಲಕ್ಷ ರೂ. ಬಾಂಡ್‌ನೊಂದಿಗೆ ಅವರ ವಾಹನವನ್ನು ಬಿಡುಗಡೆಗೊಳಿಸಲಾಯಿತು.







