ದೇವಸ್ಥಾನಗಳು ತುಳುನಾಡ ಸಂಸ್ಕೃತಿ ಉಳಿವಿಗೆ ಮೂಲ : ಅಭಯಚಂದ್ರ ಜೈನ್

ಮುಲ್ಕಿ, ಅ.11: ದೇವಸ್ಥಾನಗಳು ತುಳುನಾಡ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಪ್ರಸ್ತುತ ಕಾಲದಲ್ಲಿ ಮಹತ್ತರ ಪಾತ್ರವಹಿಸಿವೆ. ಧಾರ್ಮಿಕ ಕ್ಷೇತಗಳಿಂದ ಸಮಾಜದ ಉನ್ನತಿ ಸುಲಭಸಾಧ್ಯ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಅವರು ಉಳೆಪಾಡಿ ಶ್ರೀದುರ್ಗಾಪರಮೇಶ್ವರೀ ಮಹಾಮ್ಮಯಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಂಗಳೂರು ಉದ್ಯಮಿ ಶ್ರೀಮತಿ ಮತ್ತು ಸುಧಾಕರ ಆಳ್ವ ದೀಪ ಬೇಳಗಿಸಿ ಸಮಾರಂಭವನ್ನು ಉದ್ಘಾಟಿಸಿದರು. ಈ ಸಂದರ್ಭ ದೇವಳದ ಧರ್ಮದರ್ಶಿ ಮೋಹನ್ ದಾಸ್ ಸುರತ್ಕಲ್ ಅವರ ಯುಗಪುರುಷ ಪ್ರಕಟನಾಲಯದ ಪ್ರಕಟಿತ 522 ಕೃತಿಗಳ ‘ಕನ್ನಡ ಪ್ರಶ್ನೋಪನಿಷತ್’ನ್ನು ಕಟೀಲು ದೇವಳದ ಪ್ರಧಾನ ಅರ್ಚಕ ಕಮಲಾದೇವಿ ಪ್ರಸಾದ್ ಆಸ್ರಣ್ಣ ಬಿಡುಗಡೆಗೊಳಿಸಿ ಕೃತಿಯ ಬಗ್ಗೆ ಮಾತನಾಡಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ವಿದೂಷಿ ಕು. ಅನ್ನಪೂರ್ಣ ಸಿ. ಶೆಟ್ಟಿ ಬಳ್ಕುಂಜೆಯವರನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಉದ್ಯಮಿ ವಿರಾರ್ ಶಂಕರ್ ಶೆಟ್ಟಿ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಸುರತ್ಕಲ್ ಮಹಮ್ಮಾಯಿ ದೇವಸ್ಥಾನದ ಕಸ್ತೂರಿ ಅರುಣ ಪೈ, ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಪುರೂಹಿತ ದೇಂದಡ್ಕ ಸುಬ್ರಮಣ್ಯ ಭಟ್, ಮುಂಬೈ ಉದ್ಯಮಿ ಆರ್. ಪುರುಶೋತ್ತಮ ಪೂಜಾರಿ ಮತ್ತಿತರರಿದ್ದರು.





