ಬೈಕ್ - ಟಿಪ್ಪರ್ ಢಿಕ್ಕಿ: ಮಹಿಳೆ ಮೃತ್ಯು
ಹೆಬ್ರಿ, ಅ.11: ಹೆಬ್ರಿ ಕನ್ಯಾನ ಶಾಲೆಯ ಬಳಿ ಅ.10ರಂದು ಅಪರಾಹ್ನ 2ಗಂಟೆ ಸುಮಾರಿಗೆ ಮಿನಿ ಟಿಪ್ಪರೊಂದು ಬೈಕ್ಗೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಬೈಕಿನ ಹಿಂಬದಿಯಲ್ಲಿದ್ದ ಉಡುಪಿ ಕೊಡವೂರು ಮಧ್ವನಗರ ನಿವಾಸಿ ಶ್ಯಾಮಜಯಪ್ರಕಾಶ್(49) ಎಂಬವರ ಪತ್ನಿ ಪ್ರಸಿಲ್ಲಾ ಪುಪ್ಪಲತಾ (33) ಎಂದು ಗುರುತಿಸಲಾಗಿದೆ. ಬೈಕ್ ಸವಾರ ಶ್ಯಾಮ ಜಯಪ್ರಕಾಶ್ ಹಾಗೂ ಅವರ ಮಗ ವಿವಿಯೋನ್ ಶೈನ್(5) ಎಂಬವರು ಗಾಯಗೊಂಡಿ ದ್ದಾರೆ. ಇವರು ಬೈಕಿನಲ್ಲಿ ಹೆಬ್ರಿ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿರುವಾಗ ಹಿಂಬದಿಯಲ್ಲಿ ಬಂದ ಟಿಪ್ಪರ್ ಢಿಕ್ಕಿ ಹೊಡೆಯಿತು.
ಇದರಿಂದ ಇವರು ಮೂವರು ಬೈಕ್ ಸಮೇತ ರಸ್ತೆ ಬಿದಿದ್ದು, ಆಗ ಪ್ರಸಿಲ್ಲಾ ಅವರ ತಲೆಯ ಮೇಲೆ ಟಿಪ್ಪರ್ ಚಕ್ರ ಹಾದು ಹೊಡೆಯಿತು. ಇದರ ಪರಿ ಣಾಮ ಗಂಭೀರ ಗಾಯಗೊಂಡ ಪ್ರಸಿಲ್ಲಾ ಸ್ಥಳದಲ್ಲೇ ಮೃತಪಟ್ಟರು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story