ಜೋಕಟ್ಟೆಯ ಅಂಜುಮನ್ ವಿದ್ಯಾ ಸಂಸ್ಥೆಯಲ್ಲಿ ಮಾರ್ಗದರ್ಶನ ಶಿಬಿರ

ಮಂಗಳೂರು, ಅ.11: ಜೋಕಟ್ಟೆಯ ಅಂಜುಮನ್ ವಿದ್ಯಾ ಸಂಸ್ಥೆಯಲ್ಲಿ ಮಾರ್ಗದರ್ಶನ ಶಿಬಿರವು ಇತ್ತೀಚಿಗೆ ನಡೆಯಿತು.
ಶಿಬಿರವನ್ನು ದ.ಕ.ಜಿಲ್ಲಾ ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿ ಮುಹಮ್ಮದ್ ಸಫ್ವಾನ್ ರವರು ಉದ್ಘಾಟಿಸಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಜುಮನ್ ಖುವ್ವತುಲ್ ಇಸ್ಲಾಮ್(ರಿ) ಅಧ್ಯಕ್ಷರಾದ ಹಾಜಿ ಬಿ.ಎ.ರಶೀದ್ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಾಟಿಪಳ್ಳ ನೂರುಲ್ ಹುದಾ ವಿದ್ಯಾ ಸಂಸ್ಥೆಯ ಚೆರ್‌ಮೆನ್ ಹಾಜಿ ಬದ್ರುದ್ದೀನ್,ಸೂರಿಂಜೆ ಹಿದಾಯ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಟಿ.ಇಸ್ಮಾಯಿಲ್ ಅಂಜುಮನ್ ವಿದ್ಯಾ ಸಂಸ್ಥೆಯ ಪ್ರಾಂಶುಪಾಲೆ ಶಾಂತಿ ವಿಜಯ್,ಸಹ ಸಂಚಾಲಕ ಅಮಿರುದ್ದೀನ್,ಸಲಹೆಗಾರರಾದ ಎಂ.ಪಿ.ಇಸ್ಮಾಯಿಲ್,ಹಾಜಿ ಟಿ.ಎ.ಆಲಿಯಬ್ಬ,ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶೆರೀಫ್,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಶೀದ್,ಸ್ಥಳೀಯ ಮಸೀದಿಯ ಅಧ್ಯಕ್ಷರಾದ ಒ.ಎಂ.ಅಬ್ದುಲ್ ಖಾದರ್,ಸಂಶುದ್ದೀನ್ ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ನಂತರ ನಡೆದ ಒಂದು ದಿವಸದ ವಿಶೇಷ ಮಾರ್ಗದರ್ಶನ ಶಿಬಿರದಲ್ಲಿ ಜೇಸಿಸ್ ರಾಷ್ಟೀಯ ತರಬೇತುದಾರ ರಾಜೇಂದ್ರ ಭಟ್ ಕಾರ್ಯ ನಿರ್ವಹಿಸಿದರೆ ಕಾಟಿಪಳ್ಳ ನೂರುಲ್ ಹುದಾ, ಸೂರಿಂಜೆ ಹಿದಾಯ, ಮತ್ತು ಜೋಕಟ್ಟೆಯ ಅಂಜುಮನ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಸೂರಿಂಜೆ ಹಿದಾಯ ವಿದ್ಯಾ ಸಂಸ್ಥೆಯ ಸಂಚಾಲಕ ಟಿ.ಅಬ್ದುಲ್ಲಾ,ಉಪಾಧ್ಯಕ್ಷರಾದ ಸಯ್ಯದ್,ನೂರುಲ್ ಹುದಾ ಸಂಚಾಲಕರಾದ ಇಲ್ಯಾಸ್,ಅಂಜುಮನ್‌ಅನಾಥಾಲಯದ ಸಂಚಾಲಕರಾದ ಅಬ್ದುಲ್ ಖಾದರ್ ಗೋವಾ,ಉಪಸ್ಥಿತರಿದ್ದರು.
ಅಂಜುಮನ್ ವಿದ್ಯಾ ಸಂಸ್ಥೆಯ ಸಂಚಾಲಕ ಹಾಜಿ ಮೂಸಬ್ಬ ಪ್ರಾಸ್ತಾವಿಕವಾಗಿ ಮಾತನಾಡಿದರು,ಸಹ ಸಂಚಾಲಕ ಎ.ಎಂ.ಅಥಾವುಲ್ಲಾ ವಂದಿಸಿದರು.
ಶಾಲಾ ಪ್ರಾಧ್ಯಾಪಕರಾದ ವಿನಯ್ ಮತ್ತು ಅನನ್ಯ ಕಾರ್ಯಕ್ರಮ ನಿರೂಪಿಸಿದರು.







