Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಜಿಲ್ಲೆಯಲ್ಲಿ ಜನರಿಕ್ ಮೆಡಿಸಿನ್...

ಜಿಲ್ಲೆಯಲ್ಲಿ ಜನರಿಕ್ ಮೆಡಿಸಿನ್ ಮಳಿಗೆಗಳಲ್ಲಿ ಔಷಧದ ಕೊರತೆ :ಗ್ರಾಹಕರ ದೂರು

ವಾರ್ತಾಭಾರತಿವಾರ್ತಾಭಾರತಿ11 Oct 2016 9:19 PM IST
share
ಜಿಲ್ಲೆಯಲ್ಲಿ ಜನರಿಕ್ ಮೆಡಿಸಿನ್ ಮಳಿಗೆಗಳಲ್ಲಿ ಔಷಧದ ಕೊರತೆ :ಗ್ರಾಹಕರ ದೂರು

ಮಂಗಳೂರು,ಅ.11:ಜಿಲ್ಲೆಯ ಜನರ ಬಹುದಿನದ ಬೇಡಿಕೆಯಾದ ಜನಸಂಜೀವಿನಿ ಜನರಿಕ್ ಮೆಡಿಸಿನ್‌ನ ಎರಡು ಮಳಿಗೆಗಳು ಜಿಲ್ಲೆಯ ಕೇಂದ್ರ ವಾದ ವೆನ್‌ಲಾಕ್ ಹಾಗೂ ಲೇಡಿ ಗೋಶನ್ ಬಳಿ ಆರಂಭವಾಗಿದೆ.ಜೀವರಕ್ಷಕ ಔಷಧಿ ಕಡಿಮೆ ದರದಲ್ಲಿ ದೊರೆಯುತ್ತದೆ ಎನ್ನುವ ಪ್ರಚಾರದ ಹಿನ್ನೆಲೆಯಲ್ಲಿ ಈ ಮಳಿಗೆಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಔಷಧಿಗಾಗಿ ಬರಲಾರಂಭಿಸಿದ್ದಾರೆ. ಆದರೆ ಪ್ರಸಕ್ತ ಜನರಿಗೆ ಬೇಕಾದ ಎಲ್ಲಾ ಔಷಧಿಗಳು ಈ ಮಳಿಗೆಯಲ್ಲಿ ಇಲ್ಲ ಎನ್ನುವ ಅಭಿಪ್ರಾಯ ಮಳಿಗೆಗೆ ಭೇಟಿ ನೀಡಿದ ಗ್ರಾಹಕರು ವ್ಯಕ್ತಪಡಿಸುತ್ತಿದ್ದಾರೆ.

                   ಆದರೆ ಜನರಿಕ್ ಮೆಡಿಸಿನ್ ಮಳಿಗೆಯ ಫಾರ್ಮಸಿಸ್ಟ್ ಅವರ ಬಳಿ ಈ ಬಗ್ಗೆ ವಿಚಾರಿಸಿದಾಗ ‘‘ಜನರಿಕ್ ಮೆಡಿಸಿನ್ ಮಳಿಗೆ ಜಿಲ್ಲೆಯಲ್ಲಿ ಆರಂಭವಾಗಿ ಒಂದು ತಿಂಗಳಾಗಿದೆ.ಒಂದು ತಿಂಗಳಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರೀಯೆ ದೊರೆತಿದೆ.ಸಾಕಷ್ಟು ಜೀವರಕ್ಷಕ ಮೆಡಿಸಿನ್‌ಗಳು ನಮ್ಮ ಮಳಿಗೆಯಲ್ಲಿವೆ.ಆದರೆ ಕೆಲವು ಗ್ರಾಹಕರು ಬ್ರಾಂಡೆಡ್ ಕಂಪೆನಿಗಳ ಮೆಡಿಸಿನ್ ಬೇಕು ಎಂದು ಕೇಳುತ್ತಾರೆ.ಅದಕ್ಕೆ ಪರ್ಯಾಯವಾದ ಔಷಧವನ್ನು ನೀಡಿದರೆ ಒಪ್ಪುವುದಿಲ್ಲ.ಅಂತಹ ಗ್ರಾಹಕರಿಗೆ ಸಾಕಷ್ಟು ಮನವರಿಕೆ ಮಾಡುವ ಕೆಲಸ ಮಾಡುತ್ತಿದ್ದೇವೆ.ಕೆಲವು ಔಷಧಿಗಳು ನಮ್ಮಲ್ಲಿ ಇಲ್ಲಿನ ಮಳಿಗೆಗೆ ತರಿಸಿಟ್ಟಿಲ್ಲ, ಜನರ ಬೇಡಿಕೆಗೆ ಪೂರಕವಾಗಿ ಅವರು ಇಚ್ಚಿಸಿದ್ದರೆ ಬೆಂಗಳೂರಿನಿಂದ ತರಿಸಿ ಕೊಡ್ತೇವೆ.ಆರಂಭದ ದಿನಗಳಿಂದ ಈಗ ಹೆಚ್ಚಿನ ಔಷಧ ಈಗ ನಮ್ಮ ಮಳಿಗೆ ಗೆ ಬರುತ್ತಿದೆ.ಮುಂದಿನ ದಿನಗಳಲ್ಲಿ ಇನ್ನಷ್ಟು ಔಷಧ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ತರಿಸಿಟ್ಟುಕೊಂಡು ಔಷಧಿಯ ಬೇಡಿಕೆಯನ್ನು ಈಡೇರಿಸುವ ಮೂಲಕ ಸಮಸ್ಯೆ ಸರಿಪಡಿಸುತ್ತೇವೆ ’’ ಎಂದು ಜನರಿಕ್ ಮೆಡಿಸಿನ್ ಮಳಿಗೆಯ ಪ್ರಧಾನ ಫಾರ್ಮಸಿಸ್ಟ್ ಪತ್ರಿಕೆಗೆ ತಿಳಿಸಿದ್ದಾರೆ.

         ಶೇ 10ರಿಂದ 50ರವರೆಗೆ ರಿಯಾಯಿತಿ ದರದಲ್ಲಿ ಔಷಧಿ:-ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 17 ಜನಸಂಜೀವಿನಿ ಜನರಿಕ್ ಮೆಡಿಸಿನ್ ಮಳಿಗೆಗಳಿಗೆ ಸರಕಾರದ ಜೊತೆ ಒಡಂಬಡಿಕೆ ಮಾಡಿಕೊಂಡ ದೊಡ್ಡ ಕಂಪೆನಿಗಳ ಮೂಲಕ ಜೀವರಕ್ಷಕ ಔಷಧ ಸರಬರಾಜಾಗುತ್ತದೆ.ಇಂತಹ ಔಷಧಗಳನ್ನು ಜನರಿಕ್ ಮೆಡಿಸಿನ್ ಮಳಿಗೆಗಳಲ್ಲಿ ಶೇ 50ರ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.ಕೆಲವು ಬ್ರಾಂಡೆಡ್ ಕಂಪೆನಿಗಳ ಔಷಧವನ್ನೇ ಕೇಳುವ ಗ್ರಾಹಕರಿಗೆ ಎಂಆರ್‌ಪಿ ದರದ ಪ್ರಕಾರ ಶೇ 10ರ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.ಸರ್ಜಿಕಲ್ ವಿಭಾಗದ ಔಷಧವನ್ನು ಶೇ 25ರ ರಿಯಾಯಿತಿ ದರದಲ್ಲಿ ಈ ಮಳಿಗೆಗಳಲ್ಲಿ ನೀಡಲಾಗುತ್ತಿದೆ ಎಂದು ಎಚ್‌ಎಲ್‌ಎಲ್‌ನ ಪ್ರತಿನಿಧಿಗಳು ಪತ್ರಿಕೆಗೆ ತಿಳಿಸಿದ್ದಾರೆ.

ಜನರಿಕ್ ಮೆಡಿಸಿನ್‌ಗೆ ಔಷಧಿ ಸರಬರಾಜು:ರಾಜ್ಯದ ಬಹುತೇಕ ಜಿಲ್ಲಾ ಆಸ್ಪತ್ರೆಗಳ ಬಳಿ ಜನರಿಕ್ ಮೆಡಿಸಿನ್ ಮಳಿಗೆಗಳು ಆರಂಭಗೊಂಡಿವೆ.ದ.ಕ ಜಿಲ್ಲೆಯಲ್ಲಿಯೂ ಪ್ರಸಕ್ತ ಎರಡು ಜನರಿಕ್‌ಮೆಡಿಸಿನ್ ಮಳಿಗೆಗಳು ಜಿಲ್ಲಾ ಆಸ್ಪತ್ರೆಯ ವಠಾರದಲ್ಲಿ ಒಂದು ತಿಂಗಳ ಹಿಂದೆ ಆರಂಭಗೊಂಡಿದೆ.ಹೆಲ್ತ್‌ಕೇರ್ ಲಿಮಿಟೆಡ್ ಕಂಪೆನಿಯೊಂದಿಗೆ ಸರಕಾರ ಒಡಂಬಡಿಕೆ ಮಾಡಿಕೊಂಡ ಪ್ರಕಾರ ಈ ಮಳಿಗೆಗಳನ್ನು ಹೆಚ್‌ಎಲ್‌ಎಲ್ ಸಂಸ್ಥೆ ನಡೆಸಿಕೊಂಡು ಬರುತ್ತಿದೆ.ಜಿಲ್ಲೆಯ ಮಳಿಗೆಗಳಿಗೆ ಬೆಂಗಳೂರಿನಲ್ಲಿರುವ ಈ ಸಂಸ್ಥೆಯ ಕೇಂದ್ರ ಕಚೇರಿಯಿಂದ ಔಷಧ ಸರಬರಾಜಾಗುತ್ತಿದೆ.ಈ ಸಂಸ್ಥೆಗೆ ಫಾರ್ಮ್‌ಸಿಸ್ಟ್‌ಗಳನ್ನು ಆಯ್ಕೆ ಪರೀಕ್ಷೆ ನಡೆಸಿ ನೇಮಿಸುತ್ತಾರೆ.ಬಿ.ಫಾರ್ಮಾ ಪದವಿಧರರನ್ನು ಆರಿಸಲಾಗುತ್ತದೆ.‘‘ಮಂಗಳೂರಿನ ವೆನ್‌ಲಾಕ್ ಮತ್ತು ಲೇಡಿ ಗೊಶನ್ ಜನರಿಕ್ ಮಳಿಗೆಗಳಲ್ಲಿಯೂ ಇದೇ ರೀತಿಯ ಅರ್ಹತೆಹೊಂದಿರುವ ಫಾರ್ಮಾಸಿಸ್ಟ್‌ಗಳು ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಔಷಧಗಳ ವೈದ್ಯಕೀಯ ಮಾಹಿತಿ ಹೊಂದಿರುವ ಮಳಿಗೆ ಮತ್ತು ಗುಣಮಟ್ಟದ ಔಷಧವನ್ನು ಸರಕಾರದ ಒಡಂಬಡಿಕೆಯ ಮೂಲಕ ಗ್ರಾಹಕರಿಗೆ ನೀಡುವ ಸೌಕರ್ಯವನ್ನು ಎಚ್‌ಎಲ್‌ಎಲ್ ಸಂಸ್ಥೆ ಹೊಂದಿರುವುದು ವಿಶೇಷತೆಯಾಗಿದೆ.ಇದರಿಂದ ಗ್ರಾಹಕರಿಗೆ ಉತ್ತಮ ಗುಣ ಮಟ್ಟದ ಔಷಧ ನೀಡಲು ನಮಗೆ ಸಾಧ್ಯವಾಗುತ್ತಿದೆ,ಪ್ರಸಕ್ತ ಜಿಲ್ಲೆಯ ಗ್ರಾಹಕರಿಗೆ ಬೇಕಾಗುವ ಎಲ್ಲಾ ಔಷಧಗಳನ್ನು ಆರಂಭದಲ್ಲಿ ಇಲ್ಲಿನ ಎರಡು ಮಳಿಗೆಗಳಲ್ಲಿ ಗ್ರಾಹಕರಿಗೆ ದೊರೆಯದೆ ಇದ್ದ ಕಾರಣ ಗ್ರಾಹಕರು ಔಷಧದ ಕೊರತೆ ಬಗ್ಗೆ ತಿಳಿಸಿರಬಹುದು.ಆದರೆ ರಾಜ್ಯದ ವಿವಿಧ ಕಡೆ ಕಾರ್ಯನಿರ್ವಹಿಸುತ್ತಿರುವ ಜನರಿಕ್ ಮೆಡಿಸಿನ್ ಮಳಿಗೆಗಳಲ್ಲಿ ಜೀವರಕ್ಷಕ ಔಷಧದ ಕೊರತೆ ಇಲ್ಲ.ಇಲ್ಲಿಯೂ ಮುಂದಿನ ದಿನಗಳಲ್ಲಿ ಗ್ರಾಹಕರ ಅವಷ್ಯಕತೆಯ ಇನ್ನೂ ಹಲವು ಔಷಧಗಳನ್ನು ಸೇರ್ಪಡೆಗೊಳಿಸುವ ಮೂಲಕ ತಾತ್ಕಲಿಕವಾಗಿರು ಈ ಸಮಸ್ಯೆಪರಿಹಾರವಾಗಲಿದೆ ಎಂದು ಕೇಂದ್ರದ ಫಾರ್ಮಸಿಸ್ಟ್‌ಗಳು ಅಭಿಪ್ರಾಯ ಪಡುತ್ತಾರೆ.

                     ಪ್ರಸಕ್ತ ಜಿಲ್ಲಾ ಕೇಂದ್ರದ ಬಳಿ ಆರಂಭಗೊಂಡ ಜನರಿಕ್ ಮಳಿಗೆ ಬೆಳಗ್ಗೆ 8ರಿಂದ ರಾತ್ರಿ9ರವರೆಗೆ ಕಾರ್ಯನಿರ್ವಹಿಸುತ್ತಿದೆ.ಈ ಅವಧಿಯನ್ನು ಕೆಲವು ಗಂಟೆಗಳ ಕಾಲ ಹೆಚ್ಚಿಸಬೇಕು.ಹೆಚ್ಚಿನ ಪ್ರಮಾಣದ ಔಷಧಗಳ ಸಂಗ್ರಹ ಈ ಮಳಿಗೆಯಲ್ಲಿರಬೇಕು .ನಗರದಲ್ಲಿ ಸಾಕಷ್ಟು ಮೆಡಿಕಲ್ ಶಾಪ್‌ಗಳಿದ್ದರೂ ಎಲ್ಲಾ ಔಷಧದಗಳು ಒಂದೇ ಕಡೆ ಗ್ರಾಹಕರಿಗೆ ದೊರೆಯುವ ಮಳಿಗೆಗಳು ಕೇವಲ ಬೆರಳೆಣಿಕೆಯಷ್ಟಿವೆ. ಗ್ರಾಹಕರಿಗೆ ಗರಿಷ್ಟ ಪ್ರಮಾಣದ ಎಲ್ಲಾ ರೀತಿಯ ಔಷಧಿಗಳು ಜನರಿಕ್ ಮಳಿಗೆಗಳಲ್ಲಿ ದೊರೆತಾಗ ಅದರಿಂದ ಹೆಚ್ಚಿನ ಪ್ರಯೋಜನವಾಗಬಹುದು.ಜನರಿಕ್ ಮೆಡಿಸಿನ್ ಬಳಿ ಕೆಲವು ಔಷಧ ಪಡೆದು ,ಉಳಿದ ಔಷಧ ಪಡೆಯಲು ಇತರ ಅಂಗಡಿಗಳಿಗೆ ತೆರಳುವ ಸಂದರ್ಭದಲ್ಲಾಗುವ ಮುಜುಗರವನ್ನು ತಪ್ಪಿಸಿದಂತಾಗುತ್ತದೆ .ಜಿಲ್ಲೆಯ ವಿವಿಧ ಕಡೆಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಳಿಗೆಗಳನ್ನು ತೆರೆದರೆ ಉತ್ತಮ ಎನ್ನುವುದು ಜನರಿಕ್ ಮೆಡಿಸಿನ್ ಅಂಗಡಿಗೆ ಭೇಟಿ ನೀಡಿದ ಗ್ರಾಹಕರ ಅಭಿಪ್ರಾಯ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X