ಉಪ್ಪಿನಂಗಡಿ: ಶ್ರೀ ಲಕ್ಷ್ಮೀವೆಂಕಟ್ರಮಣ ದೇವಾಲಯದಲ್ಲಿ ನವರಾತ್ರಿ ಉತ್ಸವ
.jpg)
ಉಪ್ಪಿನಂಗಡಿ,ಅ.11: ಇಲ್ಲಿನ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಾಲಯದಲ್ಲಿ ನವರಾತ್ರಿ ದಿನಗಳಲ್ಲಿ ಆರಾಧನೆಗೊಳ್ಳುವ ಶ್ರೀ ಮಕರ ದೇವಿಗೆ ಪೂಜೆ ನಡೆಸಲಾಯಿತು. ಅರ್ಚಕ ಸುಬ್ರಹ್ಮಣ್ಯ ಭಟ್ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಈ ದೇವಿಯ ಆರಾಧನೆ ಗೋವಾ ರಾಜ್ಯದ ಶ್ರೀ ಮಹಾಲಸ ನಾರಾಯಣೀ ದೇವಸ್ಥಾನದ ಸೇರಿದಂತೆ ಇತರೆ ದೇವಸ್ಥಾನಗಳಲ್ಲಿ ಬಿಟ್ಟರೆ ಕರ್ನಾಟಕದಲ್ಲಿ ಆರಾಧನೆ ನಡಯುವುದು ಉಪ್ಪಿನಂಗಡಿಯ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಾಲಯದಲ್ಲಿ ಮಾತ್ರ. ಮಕರ ದೇವಿಗೆ ನವರಾತ್ರಿ ದಿನಗಳಲ್ಲಿ ಮಾತ್ರ ಪೂಜೆ ಸಲ್ಲಿಕೆಯಾಗುವುದು ವಿಶೇಷ. ನೂರಾರು ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿದ ಭಕ್ತರು ಮಕರ ದೇವಿಗೆ ವಿಶೇಷ ಸೇವೆಯಾದ ತೂಗುಯ್ಯೆಲೆ (ತೊಟ್ಟಿಲು ಸೇವೆ) ಸಮರ್ಪಿಸಿದರು.
Next Story





