ರಕ್ಷಣೆಗೆ ಕೇಂದ್ರ ಮಹತ್ವದ ಕಾಯ್ದೆ ಜಾರಿ
ಹೊರ ರಾಜ್ಯದ ಮೀನುಗಾರರಿಗೆ ಗುರುತಿನ ಚೀಟಿ ಕಡ್ಡಾಯ

ಕಾರವಾರ, ಅ.11: ಸಮುದ್ರದ ಮೂಲಕ ದೇಶದೊಳಗೆ ನುಸುಳಬಹುದಾದ ಸಮಾಜ ಘಾತುಕ ಶಕ್ತಿಗಳನ್ನು ತಡೆಯಲು ಕೇಂದ್ರ ಸರಕಾರ ನೂತನ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಮುದ್ರದಲ್ಲಿ ಮೀನುಗಾರಿಕಾ ದೋಣಿಗಳಲ್ಲಿ ಕಾರ್ಯನಿರ್ವಹಿಸುವ ಹೊರ ರಾಜ್ಯದ ಕಾರ್ಮಿಕರು ಗುರುತಿನ ಚೀಟಿ ಹೊಂದುವುದು ಕಡ್ಡಾಯವಾಗಲಿದೆ.
ಕೇಂದ್ರ ಸರಕಾರ ಈ ಕ್ರಮವನ್ನು ಕೈಗೊಂಡಿದ್ದು ಜಿಲ್ಲೆಯ ಕರಾವಳಿಯ ಬೋಟ್ ಮಾಲಕರ ಬೋಟಿನಲ್ಲಿ ದುಡಿಯುವ ಹೊರ ಜಿಲ್ಲೆಯ, ರಾಜ್ಯದ ಕಾರ್ಮಿಕರಿಗೆ ಬೋಟಿನಲ್ಲಿ ಕಾರ್ಯನಿರ್ವಹಿಸಬೇಕಾದರೆ ಮೀನುಗಾರಿಕಾ ಇಲಾಖೆ ನೀಡುವ ಗುರುತಿನ ಚೀಟಿ ಅತ್ಯವಶ್ಯಕ.ವಾಗಿದೆ.
ಸ್ಥಳೀಯ ಮೀನುಗಾರರು ಈಗಾಗಲೇ ಬಯೋಮೆಟ್ರಿಕ್ಾರ್ಡ್‌ಗಳನ್ನು ಹೊಂದಿದ್ದಾರೆ. ಅದರೆ ದೂರದ ಓಡಿಶಾ, ಜಾರ್ಖಂಡ್ ಹಾಗೂ ಇನ್ನಿತರ ಹೊರ ರಾಜ್ಯಗಳಿಂದ ಬಂದಿರುವ ಕಾರ್ಮಿಕರ ಬಳಿ ಯಾವುದೇ ಗುರುತಿನ ಚೀಟಿ ಲಭ್ಯ ಇಲ್ಲದೆ ಇರುವುದನ್ನು ಗಮನಿಸಿ ಈ ಕ್ರಮಕೈಗೊಳ್ಳಲಾಗುತ್ತಿದೆ. ಈ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್ ಹೊಂದಿರುವವರಿಗೆ ಮಾತ್ರ ನೀಡಲಾಗುವುದು. ತಾತ್ಕಾಲಿಕ ಗುರುತಿನ ಚೀಟಿ ಪಡೆಯಲು ಮೀನುಗಾರಿಕಾ ಉಪನಿರ್ದೇಶಕರು ಗುರುತಿನ ಚೀಟಿ ನೀಡುವ ಅಧಿಕೃತ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಹಿಂದೆ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಇಲ್ಲಿನ ಪೊಲೀಸ್ ಇಲಾಖೆಯ ನಿರ್ದೇಶನದಂತೆ ಕಾರವಾರದ ಬೃತಹ್ ಯೋಜನೆಗಳಾದ ಸೀಬರ್ಡ್, ಕೈಗಾ ಇನ್ನಿತರ ಯೋಜನೆಗಳ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಹೊರ ರಾಜ್ಯದ ಮೀನುಗಾರಿಕಾ ಕಾರ್ಮಿಕರ ಮಾಹಿತಿ ಸಂಗ್ರಹ ಅಗತ್ಯವಾಗಿತ್ತು.
ಈಗಾಗಲೇ ಅನೇಕ ಬಾರಿ ಕರಾವಳಿ ರಕ್ಷಣಾಪಡೆಯ ಅಧಿಕಾರಿಗಳು ಸಮುದ್ರದಲ್ಲಿ ಗಸ್ತು ನಡೆಸುವಾಗ ಬೋಟ್‌ನಲ್ಲಿ ಯಾವುದೇ ಗುರುತಿನ ಚೀಟಿ ಹೊಂದಿರದ ಬೋಟುಗಳನ್ನು ವಶಕ್ಕೆ ತೆಗೆದುಕೊಂಡಿದ್ದರು.
ತಾತ್ಕಾಲಿಕ ಗುರುತಿನ ಚೀಟಿ ಪಡೆಯಬೇಕಾದರೂ ಬೋಟ್‌ನ ಮಾಲಕರು, ತಮ್ಮ ಬೋಟ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಹೊರ ರಾಜ್ಯದ ಕಾರ್ಮಿಕರ ಸಂಪೂರ್ಣ ಮಾಹಿತಿಯನ್ನು ನಿಗದಿತ ಅರ್ಜಿಯಲ್ಲಿ ಫೋಟೊ ಸಹಿತ ಪಡೆದು ಕರಾವಳಿ ಕಾವಲು ಪಡೆಗೆ ನೀಡಬೇಕು. ಬಳಿಕ ಪೊಲೀಸರ ಸಹಕಾರದಿಂದ ದಾಖಲೆಗಳ ಪರಿಶೀಲನೆ ನಡೆಸಿ, ಜಿಲ್ಲಾ ಮೀನುಗಾರಿಕಾ ನಿರ್ದೇಶಕರ ಮೂಲಕ ಆಯಾ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಲಾಗುವುದು ಎಂದು ಕರಾವಳಿ ಕಾವಲು ಪಡೆಯ ಮೂಲಗಳು ಮಾಹಿತಿ ನೀಡಿವೆ.
ಕರಾವಳಿಯಲ್ಲಿ ಒಟ್ಟು 9,432 ಬೋಟುಗಳು
ಜಿ
ಲ್ಲೆಯ ಕರಾವಳಿಯಲ್ಲಿ ಅಧಿಕೃತವಾಗಿ 9,432 ವಿವಿಧ ಮಾದರಿಯ ಬೋಟುಗಳು ಮೀನುಗಾರಿಕಾ ಇಲಾಖೆಯಲ್ಲಿ ನೋಂದಣಿ ಯಾಗಿವೆ. ಅವುಗಳನ್ನು ಟ್ರಾಲ್ ಬೋಟುಗಳು 2,222, ಔಟ್ ಬೋರ್ಡ್ ಇಂಜಿನ್‌ನ 1,088 ಬೋಟುಗಳು ಹಾಗೂ 6,122 ನಾಡದೋಣಿಗಳು ಸೇರಿವೆ. ಅಕ್ರಮ ನಡೆದರೆ ಮಾಲಕರೇ ಜವಾಬ್ದಾರರು
ತಾತ್ಕಾಲಿಕ ಗುರುತಿನ ಚೀಟಿ ಪಡೆಯುವ ಸಂದರ್ಭದಲ್ಲಿ ಬೋಟ್ ಮಾಲಕರು ಇಲಾಖೆಗೆ ತಮ್ಮ ಬೋಟುಗಳು ಯಾವುದೇ ಅಹಿತಕರ ಚಟುವಟಿಕೆಯಲ್ಲಿ ತೊಡಗಿಕೊಂಡಿಲ್ಲ. ಬೋಟ್ ಮೂಲಕ ದುಡಿಯುವ ಕಾರ್ಮಿಕರು ಅಕ್ರಮ ನಡೆಸಿದರೆ ಬೋಟ್ ಮಾಲಕರೇ ಜವಾಬ್ದಾರರು ಎನ್ನುವ ಮುಚ್ಚಳಿಕೆ ಪತ್ರನ್ನು ಬರೆದುಕೊಡಬೇಕಾಗಿದೆ. ಇದು ಬೋಟ್ ಮಾಲಕರಿಗೆ ತಲೆ ನೋವಾಗಿ ಪರಿಣಮಿಸಿದೆ ಎನ್ನಲಾಗಿದೆ.
ಹೊರ ರಾಜ್ಯದ ಮೀನುಗಾರರಿಗೆ ಕೇಂದ್ರ ಸರಕಾರ ನೀಡಲು ಉದ್ದೇಶಿಸಿರುವ ತಾತ್ಕಾಲಿಕ ಗುರುತಿನ ಚೀಟಿ ಹೊಂದಿದ್ದರೆ ಮೀನುಗಾರಿಕೆ ನಡೆಸಲು ಯಾವುದೇ ಅಭ್ಯಂತರ ಇಲ್ಲ. ಇದರಿಂದ ಸಮುದ್ರದಲ್ಲಿ ಗಸ್ತು ನಡೆಸುವ ಕೋಸ್ಟ್‌ಗಾರ್ಡ್ ಹಾಗೂ ಕರಾವಳಿ ಕಾವಲು ಪಡೆಯವರ ವಿಚಾರಣೆ ವೇಳೆ ಆವಶ್ಯಕ. ಸಮುದ್ರ ಮಾರ್ಗದ ಮೂಲಕ ನಡೆಯಬಹುದಾದ ಅಕ್ರಮ, ಸಮಾಜಘಾತುಕ ಚಟುವಟಿಕೆಗಳನ್ನು ತಡೆಯಲು ಗುರುತಿನ ಚೀಟಿ ಅಗತ್ಯ. ಈ ತಾತ್ಕಾಲಿಕ ಗುರುತಿನ ಚೀಟಿ ಜಿಲ್ಲೆಗೆ ಮಾತ್ರ ಸೀಮಿತವಾಗಿರುತ್ತದೆ. ಅದು ಬೇರೆ ಜಿಲ್ಲೆ ಅಥವಾ ರಾಜ್ಯಗಳಲ್ಲಿ ಮಾನ್ಯತೆ ಹೊಂದಿರುವುದಿಲ್ಲ.







