ಅಂಕೋಲಾ: ಮಳೆಗೆ ಅಪಾರ ಹಾನಿ
320 ಮಂದಿ ಗಂಜಿ ಕೇಂದ್ರಕ್ಕೆ ದಾಖಲು

ಅಂಕೋಲಾ, ಅ.11: ಸೋಮವಾರ ರಾತ್ರಿ ಸತತವಾಗಿ ಸುರಿದ ಮಳೆಗೆ ಅಪಾರ ಹಾನಿಯಾಗಿದ್ದು, ಕುಮಟಾ ಉಪ ವಿಭಾಗಾಧಿಕಾರಿ ರಮೇಶ ಕಳಸದ ಅವರ ಮಾರ್ಗದರ್ಶನದಲ್ಲಿ ಸುಮಾರು 320ಕ್ಕೂ ಹೆಚ್ಚು ಗ್ರಾಮಸ್ಥರು ಗಂಜಿ ಕೇಂದ್ರದಲ್ಲಿ ವಾಸ್ತವ್ಯ ಹೂಡಿದ್ದಾರೆ.
ಪಟ್ಟಣದ ಕಸಬಾಕೇಣಿ, ಬೊಬ್ರು ವಾಡ ಹಾಗೂ ಬೇಲೆಕೇರಿಯ ಬೊಗ್ರಿಗದ್ದೆ, ಕೇಣಿ ಪ್ರದೇಶದ ಗಾಂವ್ಕರ್ ವಾಡದ ಜೀವನ ನುನ್ನಾ ಗಾಂವ್ಕರ್, ಶಾಂತಾರಾಮ ಎನ್. ಗಾಂವ್ಕರ್, ಯಾದು ನಾರಾಯಣ ಗಾಂವ್ಕರ್ ಎಂಬವರ ಮನೆಗಳಿಗೆ ನೀರು ನುಗ್ಗಿದ್ದು, ಮನೆಯ ಗೋಡೆ, ದನದ ಕೊಟ್ಟಿಗೆ ಕುಸಿದು ಬಿದ್ದಿವೆ. ಅಲ್ಲದೆ, ಕೆಲವು ದನಕರುಗಳು ನೀರು ಪಾಲಾಗಿವೆ.
ಪಟ್ಟಣದ ಹಲವು ಬಾವಿಗಳಿಗೆ ಚರಂಡಿಯ ನೀರು ಪ್ರವೇಶಿಸಿದ್ದು, ಪುರಸಭೆ ಸದಸ್ಯ ಸಂದೀಪ್ ಬಂಟ ನೇತೃತ್ವದಲ್ಲಿ ಜಲಾವೃತ್ತ ಗೊಂಡ ಪ್ರದೇಶದ ಗ್ರಾಮಸ್ಥರಿಗೆ ಪುರಸಭೆಯ ವತಿಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಜಲಾವೃತಗೊಂಡ ಎಲ್ಲಾ ಪ್ರದೇಶಗಳಿಗೆ ತಹಶೀಲ್ದಾರ್ ವಿ.ಜಿ. ಲಾಂಜೇಕರ್, ಕಂದಾಯ ನಿರೀಕ್ಷಕರಾದ ಸುರೇಶ ಹರಿಕಂತ್ರ, ಅಮರ ನಾಯ್ಕ, ಗ್ರಾಮಲೆಕ್ಕಿಗ ಪ್ರಜ್ಞೇಶ ಬಂಟರನ್ನೊಳಗೊಂಡ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜನರ ರಕ್ಷಣೆಗೆ ಅಗ್ನಿಶಾಮಕ ತಂಡ ಮತ್ತು ಪಿಎಸ್ಸೈ ಎಚ್.ಓಂಕಾರಪ್ಪನವರ ನಿರ್ದೇಶನದಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸಿದರು.
ಕಾವೇರಿ ಜಲಮೂಲ ಸಂರಕ್ಷಣೆ







