Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಕಲಾತ್ಮಕತೆಯಲ್ಲಿ ಗೆದ್ದ ದಸರಾ...

ಕಲಾತ್ಮಕತೆಯಲ್ಲಿ ಗೆದ್ದ ದಸರಾ ಸ್ತಬ್ಧಚಿತ್ರಗಳು

ಜಂಬೂಸವಾರಿಯಲ್ಲಿ ಕರುನಾಡಿನ ವೈಶಿಷ್ಟಸಾರಿದ ಮೂಕ ಚಿತ್ರಗಳು

ಕೆ.ದೀಪಕ್, ಮೈಸೂರು,ಕೆ.ದೀಪಕ್, ಮೈಸೂರು,11 Oct 2016 11:39 PM IST
share
ಕಲಾತ್ಮಕತೆಯಲ್ಲಿ ಗೆದ್ದ ದಸರಾ ಸ್ತಬ್ಧಚಿತ್ರಗಳು

ಮೈಸೂರು, ಅ.11: ವಿಜಯದಶಮಿ ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳ ವೈಶಿಷ್ಟ ಎಲ್ಲರ ಮನ ಸೂರೆಗೊಳಿಸಿದೆ. 30 ಜಿಲ್ಲೆಗಳು ಒಳಗೊಂಡ 42 ಸ್ತಬ್ಧಚಿತ್ರಗಳು ಒಂದಕ್ಕೊಂದು ಭಿನ್ನವಾಗಿದ್ದವು. ಎಲ್ಲ ಸ್ತಬ್ಧಚಿತ್ರಗಳಲ್ಲಿ ಕಲಾವಿದರ ಕೈಚಳಕ, ಗುಣಮಟ್ಟ, ಉತ್ತಮ ಸಂದೇಶ ರವಾನೆಯಾಯಿತು. ಮೈಸೂರಿನ ಮಹಾರಾಣಿಯರ ಸಾಧನೆ ಬಿಂಬಿಸುವ ಸ್ತಬ್ಧಚಿತ್ರ ಮಹಿಳೆಗೆ ವಿಶೇಷ ಗೌರವ ತಂದುಕೊಟ್ಟರೆ, ಕರುನಾಡಿನ ವೈಶಿಷ್ಟ ಸಾರಿದವು ಈ ಮೂಕ ಚಿತ್ರಗಳು.

ಇಂದು ಜರಗಿದ ವಿಜಯದಶಮಿ ಮೆರವಣಿಗೆಯಲ್ಲಿ ಅಗ್ರ ಪಂಕ್ತಿಯಲ್ಲಿ ಸಾಗಿದ್ದು ಉಡುಪಿ ಜಿಲ್ಲಾ ಪಂಚಾಯತ್‌ನ ಸಂತ ಮೇರಿಸ್ ದ್ವೀಪದ ಸ್ತಬ್ಧಚಿತ್ರ. ಮಲ್ಪೆಬೀಚ್ ಸಮೀಪ 27 ಎಕರೆ ಪ್ರದೇಶದಲ್ಲಿ ಪ್ರಾಕೃತಿಕವಾಗಿ ರಚನೆಗೊಂಡ ದ್ವೀಪದ ಮಹತ್ವವನ್ನು ಈ ಸ್ತಬ್ಧಚಿತ್ರ ಸಾರಿತು. ಆನಂತರ ಉತ್ತರ ಕನ್ನಡ ಜಿಲ್ಲೆಯ ಮಾರಿಕಾಂಬ ದೇವಸ್ಥಾನ ಸ್ತಬ್ಧಚಿತ್ರ ಹಿಂಬಾಲಿಸಿದರೆ, ಇವುಗಳ ನಡುವೆ ಬಿಳಿಗೆರೆ ಹುಂಡಿ ತಂಡದ ನಾದಸ್ವರ ಪ್ರದರ್ಶನಗೊಂಡಿತು. ಲಬುರಗಿ ಜಿಲ್ಲೆಯ ಪರಮೇಶ್ವರಿ ದೇವಸ್ಥಾನ ಮತ್ತು ಸ್ತೂಪ, ಕೊಡಗು ಜಿಲ್ಲಾ ಪಂಚಾಯತ್‌ನ ಬುಡಕಟ್ಟು ಸಮುದಾಯದ ಬಂಧು, ಕೊಪ್ಪಳ ಜಿಲ್ಲಾ ಪಂಚಾಯತ್‌ನ ಸ್ವಚ್ಛ ಭಾರತ ಅಭಿಯಾನದ ಘನತಾಜ್ಯ ವಿಲೇವಾರಿ ಘಟಕ, ಕೋಲಾರ ಜಿಲ್ಲೆಯ ಸೋಮೇಶ್ವರ ದೇವಸ್ಥಾನದ ಸ್ತಬ್ಧಚಿತ್ರ ವಿಶೇಷವಾಗಿ ರಚನೆಗೊಂಡಿತ್ತು. ಇವುಗಳ ನಡುವೆ ಹಾಲಕ್ಕಿ ಸುಗ್ಗಿ ಕುಣಿತ, ಗಾರುಡಿ ಗೊಂಬೆ, ಕೀಲು ಕುದುರೆ ಪ್ರೇಕ್ಷಕರನ್ನು ರಂಜಿಸಿತು. ದಗ ಜಿಲ್ಲಾ ಪಂಚಾಯತ್ ವತಿಯಿಂದ ‘ಸಂಗೀತ ಕಲಾ ದಿಗ್ಗಜರು’ ಶೀರ್ಷಿಕೆಯಡಿ ಪಂ.ಪಂಚಾಕ್ಷರಿ ಗವಾಯಿ, ಪುಟ್ಟರಾಜ ಕವಾಯಿ, ಪಂ. ಭೀಮಸೇನಾ ಜೋಷಿ ಅವರ ಸಂಗೀತ ಸಾಧನೆ ಸಾರಲಾಯಿತು. ಚಾಮರಾಜನಗರ ಜಿಲ್ಲೆಯ ವತಿಯಿಂದ ‘ಸಮಾನತೆಗಾಗಿ ಸರಕಾರದ ಸಪ್ತ ಹೆಜ್ಜೆ’ ತಲೆ ಬರಹದಡಿ ಸರಕಾರ ಮಹಿಳೆಯರ ಕಲ್ಯಾಣಕ್ಕೆ ತಂದ ಏಳು ಯೋಜನೆಗಳಿಗೆ ಏಳು ದೇವತೆಯರ ರೂಪ ನೀಡಲಾಗಿತ್ತು. ಈ ಸ್ತಬ್ಧಚಿತ್ರದ ಬೆನ್ನ ಹಿಂದೆ ಗಾರುಡಿ ಗೊಂಬೆ, ದಾಲಪಟ, ಕತ್ತಿವರಸೆ, ಮುಳ್ಳಿನಚಕ್ರ ಕಲಾ ತಂಡ ಸಾಗಿತು. ್ಕ ಬಳ್ಳಾಪುರದ ಕೈವಾರ, ಏಕಚಕ್ರ ನಗರ, ಪ್ರವಾಸೋದ್ಯಮ ಇಲಾಖೆಯ ‘ನಾಡು ಉಳಿಸಿ’ ಜಾಗೃತಿಯ ರಾಷ್ಟ್ರೀಯ ಉದ್ಯಾನವನಗಳ ಪ್ರತಿಬಿಂಬ, ಹುಲಿ ರಕ್ಷಣೆಯ ಜಾಗೃತಿ ಚಿತ್ರ, ಚಿಕ್ಕಮಗಳೂರಿನ ವಿದ್ಯಾಶಂಕರ ದೇವಾಲಯ, ಚಿತ್ರದುರ್ಗ ಜಿಲ್ಲೆಯ ಶೌರಶಕ್ತಿ ಕೇಂದ್ರದ ಚಿತ್ರ ಅಭಿವೃದ್ಧಿಗಾಗಿ ಶೌರಶಕ್ತಿ ಎಂಬ ಸಂದೇಶ ಸಾರಿತು. ತುಮಕೂರು ಜಿಲ್ಲಾ ಪಂಚಾಯತ್‌ನ ‘ಸಿರಿಧಾನ್ಯ ಬೆಳೆಗಳ’ ಬಗ್ಗೆ ಜನರಿಗೆ ಅರಿವು ಮೂಡಿಸುವ ಸ್ತಬ್ಧಚಿತ್ರ ಉತ್ತಮವಾಗಿ ಮೂಡಿ ಬಂದಿತ್ತು. ವಾರ್ತಾ ಇಲಾಖೆಯ ಸರಕಾರದ ಸಾಧನೆ ಬಿಂಬಿಸುವ ಕ್ಷೀರಭಾಗ್ಯ, ಅನ್ನಭಾಗ್ಯ, ವಿದ್ಯಾಸಿರಿ, ನಮ್ಮ ಮೆಟ್ರೋ ಸ್ತಬ್ಧಚಿತ್ರ, ದಕ್ಷಿಣಕನ್ನಡ ಜಿಲ್ಲೆಯ ರಾಣಿ ಅಬ್ಬಕ್ಕ ದೇವಿಯ ಶೌರ್ಯ, ದಾವಣಗೆರೆಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಧಾರವಾಡ ಜಿಲ್ಲೆಯ ಹುತಾತ್ಮ ಯೋಧ ಲ್ಯಾನ್ಸ್ ನಾಯಕ್ ಹನುಮಂತಪ್ಪರ ಸಾಧನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ಸ್ತಬ್ಧಚಿತ್ರಗಳ ನಡು-ನಡುವೆ ಗೊಂಬೆ, ಕಥಕ್ಕಳಿ, ಕಂಗಿಲು ನೃತ್ಯ, ಬೀಸು ಕಂಸಾಳೆ, ಕೋಲಾಟ, ಕೊರಗರ ಬುಡಕಟ್ಟು ನೃತ್ಯ ಪ್ರದರ್ಶನವಿತ್ತು.ನ್ನು ಬಳ್ಳಾರಿ ಜಿಲ್ಲೆಯ ಉಗ್ರನರಿಸಂಹ ಸ್ವಾಮಿ ದೇವಸ್ಥಾನ, ಆರೋಗ್ಯ ಇಲಾಖೆಯಿಂದ ಎಲ್ಲರಿಗೂ ಆರೋಗ್ಯ ಸಾರುವ ಸ್ತಬ್ಧಚಿತ್ರ ಉಪಯುಕ್ತ ಮಾಹಿತಿಯನ್ನು ಒಳಗೊಂಡಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಗುಂಡ್ಲುಪೇಟೆ ಮಾದರಿ ಸರಕಾರಿ ಶಾಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಶಿವಗಂಗೆ ಬೆಟ್ಟ, ದೇವನಹಳ್ಳಿ ಕೋಟೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಿಂಬಿತಗೊಂಡರೆ, ಮೈಸೂರು ಜಿಲ್ಲಾ ಪಂಚಾಯತ್‌ನಿಂದ ಮೈಸೂರು ಸಂಸ್ಥಾನದ ಮಹಾರಾಣಿಯರ ಕೊಡುಗೆಗಳನ್ನು ಬಿಂಬಿಸಲಾಯಿತು. ಲಕ್ಷ್ಮಮ್ಮಣ್ಣಿ ಅವರಿಂದ ಹಿಡಿದು ವಾಣಿ ವಿಲಾಸ ಸನ್ನಿಧಿವರೆಗಿನ ಸಾಧನೆ ದಾಖಲಿಸುವಂತ್ತದ್ದು. ಮಂಡ್ಯ ಜಿಲ್ಲೆಯ ಶಿವಪುರ ಸತ್ಯಾಗ್ರಹ, ಯಾದಗಿರಿಯ ಚಿಂತನಹಳ್ಳಿ ಗವಿಸಿದ್ದೇಶ್ವರ ಸ್ವಾಮಿ ದೇವಸ್ಥಾನ, ಯಾದಗಿರಿ ಕೋಟೆ, ರಾಮನಗರದ ಆಲೆ ಮನೆ, ಆಟದ ಗೊಂಬೆಗಳು, ಸ್ತಬ್ಧಚಿತ್ರ ಉಪ ಸಮಿತಿಯ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಅರ್.ಅಂಬೇಡ್ಕರ್ ಜೀವನ ಮತ್ತು ಸಾಧನೆ ಬಿಂಬಿಸುವ ಸ್ತಬ್ಧಚಿತ್ರ, ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ, ಶಿವಮೊಗ್ಗದ ಇಕ್ಕೇರಿ ದೇವಾಲಯ, ಜೋಗ್ ಜಲಪಾತ, ಹಾಸನದ ಹೊಯ್ಸಳ ರಾಜರು, ಏಕಶಿಲೆಯ ಗೊಮ್ಮಟೇಶ್ವರ, 12 ವರ್ಷಕೊಮ್ಮೆ ಜರಗುವ ಮಹಾ ಮಸ್ತಕಾಭಿಷೇಕ ಬಿಂಬಿಸಲಾಯಿತು. ಪುರಾತತ್ವ ಇಲಾಖೆಯಿಂದ ಬೆಂಗಳೂರು ವಸ್ತು ಸಂಗ್ರಹಾಲಯ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ವತಿಯಿಂದ ಸ್ತಬ್ಧಚಿತ್ರ, ಕಾವೇರಿ ನೀರಾವರಿ ನಿಗಮದ ಮಳೆ ಕೊಯ್ಲು, ನೀರಿನ ಸಂರಕ್ಷಣೆ, ಜಲ ಜಾಗೃತಿ, ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಯಿಂದ ಪರಿಸರ ಸ್ನೇಹಿ ಇಂಧನ ಜಾಗೃತಿ, ಕಾರ್ಮಿಕ ಇಲಾಖೆಯ ವತಿಯಿಂದ ಕಾರ್ಮಿಕರ ಹಕ್ಕು ಮತ್ತು ರಕ್ಷಣೆ , ವಿಶೇಷವಾಗಿ ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಜಾಗೃತಿ ಮೂಡಿಸುವ ಅಮೋಘ ಸ್ತಬ್ಧಚಿತ್ರ ಎಲ್ಲರ ಹೃದಯ ಗೆದ್ದಿತು. ್ಟಾರೆ, ಒಂದಕ್ಕಿಂತ ಒಂದು ಭಿನ್ನವಾಗಿ ವಿಶಿಷ್ಟವಾಗಿ ಸ್ತಬ್ಧಚಿತ್ರಗಳು ಮೂಡಿಬಂದರೆ, ಇವುಗಳಿಗೆ ಪೈಪೋಟಿ ನೀಡುವಂತೆ ಜಾನಪದ ಕಲಾಮೇಳ ಮೆರವಣಿಗೆಗೆ ಮೆರುಗು ತಂದುಕೊಟ್ಟಿತು.

share
ಕೆ.ದೀಪಕ್, ಮೈಸೂರು,
ಕೆ.ದೀಪಕ್, ಮೈಸೂರು,
Next Story
X