ಕಾರಂತ ಹುಟ್ಟುಹಬ್ಬ
ಮಂಗಳೂರು, ಅ.11: ಕಲ್ಕೂರ ಪ್ರತಿಷ್ಠಾನದ ವತಿಯಿಂದ ಅ.13ರಂದು ಸಂಜೆ 5ಕ್ಕೆ ನಗರದ ಡಾನ್‌ಬಾಸ್ಕೋ ಸಭಾಂಗಣದಲ್ಲಿ ಡಾ.ಶಿವರಾಮ ಕಾರಂತ ಹುಟ್ಟಹಬ್ಬ ಸಮಾರಂಭ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ಮುಕ್ತ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ನ್ಯಾಯವಾದಿ ಆಶಾಲತಾ ಕಾಮತ್ ಕೊಡಿಯಾಲ್‌ಬೈಲ್, ದ್ವಿತೀಯ -ಪ್ರಿಯಾ ಜಿ. ಶೆಣೈ ಅಶೋಕ ನಗರ, ತೃತೀಯ-ಅಹಲ್ಯಾ ಪೈ, ಪರ್ಕಳ ಪಡೆದಿದ್ದಾರೆ.
ಕಾಲೇಜು ವಿಭಾಗದಲ್ಲಿ ಪ್ರಥಮ ಸ್ಥಾನ ಸಾಶೀರಾ ಪಿ.ಸಂತ ಫಿಲೊಮಿನಾ ಕಾಲೇಜು, ಪುತ್ತೂರು., ಅಕ್ಷತಾ ಜಿ. ಐಐಐ ಬಿ.ಎಸ್.ಸಿ ಕಾವೂರು ದ್ವಿತೀಯ ಹಾಗೂ ಆಶಿತಾ, ಇಂಜಿನಿಯರಿಂಗ್ ಕಾಲೇಜು ಸಹ್ಯಾದ್ರಿ, ತೃತೀಯ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ. ಪ್ರೌಢಶಾಲಾ ವಿಭಾಗದಲ್ಲಿ ಸಿಂಚನಾ ಕೆ. ಬಿಕರ್ನಕಟ್ಟೆ ಪ್ರಥಮ, ಫಾತಿಮಾತ್ ಪಾಯಿಝ ಮುಲ್ಕಿ ದ್ವಿತೀಯ, ಹಾಗೂ ಸ್ವಾತಿ ಎಸ್. ಭಟ್ ಪುತ್ತೂರು ತೃತೀಯ ಬಹುಮಾನಕ್ಕೆ ಆಯ್ಕೆಯಾಗಿರುವರು.
ಅಂಚೆ ಕಾರ್ಡ್‌ನಲ್ಲಿ ಕಾರಂತರ ಚಿತ್ರ ಬಿಡಿಸುವ ಸ್ಪರ್ಧೆಯ ಪ್ರೌಢಶಾಲಾವರೆಗಿನ ವಿಭಾಗದಲ್ಲಿ ರಚನಾ ಪಾರಂಪಳ್ಳಿ ಸಾಲಿಗ್ರಾಮ ಪ್ರಥಮ, ಚಿಂತನ್ ಎಂ. ಬೆಟ್ಟಂಪಾಡಿ ದ್ವಿತೀಯ ಹಾಗೂ ಶ್ರೇಯಸ್ ಮೂಲ್ಯ ಪೆರ್ಡೂರು ತೃತೀಯ ಸ್ಥಾನ ಪಡೆದಿದ್ದಾರೆ.
ಮುಕ್ತ ವಿಭಾಗದಲ್ಲಿ ಸತ್ಯಶಂಕರ ರಾವ್ ಜೆ. ಬಡಗಬೆಟ್ಟು ಪ್ರಥಮ, ನಿಖಿಟಗ್ರೇಸ್ ಜೋಶ್ವ ಚಿಟ್ಟಾಡಿ ದ್ವಿತೀಯ ಹಾಗೂ ಚಿದಾನಂದ ಅಜ್ಜಿಬೆಟ್ಟು ತೃತೀಯ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.
ವಿಜೇತರಿಗೆ ಕಾರಂತ ಹುಟ್ಟು ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





