ಮಾನಸಿಕ ರೋಗಿಗಳಿಗೂ ಮಾನವ ಹಕ್ಕುಗಳಿವೆ

ಉಡುಪಿ, ಅ.11: ಮಾನಸಿಕ ರೋಗಿಗಳಿಗೂ ಮಾನವ ಹಕ್ಕುಗಳಿವೆ. ಕಾನೂನು ಎಲ್ಲರನ್ನು ಸಮಾನವಾಗಿ ಕಾಣುತ್ತದೆ. ಮಾನಸಿಕ ರೋಗಿಗಳನ್ನು ಬಾಧಿತರಂತೆ ಕಾಣದೆ, ಎಲ್ಲರಂತೆ ಗೌರವಯುತವಾಗಿ ಕಾಣಬೇಕು ಎಂದು ಉಡುಪಿ ಹಿರಿಯ ಸಿವಿಲ್ ನ್ಯಾಯಾಧೀಶೆ ಲತಾ ಹೇಳಿದ್ದಾರೆ.
ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಸ್ಪತ್ರೆ, ವಕೀಲರ ಸಂಘಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಬಾಳಿಗಾ ಆಸ್ಪತ್ರೆಯಲ್ಲಿ ಆಯೋಜಿಸಲಾದ ‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾಸ್ಪತ್ರೆಯ ಮಾನಸಿಕ ತಜ್ಞ ಡಾ.ವಾಸುದೇವ್ ಎಸ್. ಮಾತನಾಡಿದರು. ಮನೋತಜ್ಞ ಡಾ.ಪಿ.ವಿ.ಭಂಡಾರಿ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭ ಮಾನಸಿಕ ಅನಾರೋಗ್ಯದಿಂದ ಪುನಶ್ಚೇತಗೊಂಡವರು ರಚಿಸಿದ ಚಿತ್ರಕಲೆಯ ಪ್ರದರ್ಶನವನ್ನು ‘ಕಾವಿ’ ಚಿತ್ರ ಕಲಾವಿದೆ ವೀಣಾ ಶ್ರೀನಿವಾಸ್ ಉದ್ಘಾಟಿಸಿದರು.
ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯಾ ಕೆ. ಶೆಟ್ಟಿ ಸ್ವಾಗತಿಸಿದರು. ಮನಃಶಾಸ್ತ್ರಜ್ಞ ನಾಗರಾಜ್‌ಮೂರ್ತಿ ವಂದಿಸಿದರು. ವಿದ್ಯಾಶ್ರೀ ಮತ್ತು ಲೋಹಿತ್ ಕಾರ್ಯಕ್ರಮವನ್ನು ನಿರೂಪಿಸಿದರು. ‘ಬ್ಯಾರಿ ಭಾಷಾ ಕಾರ್ಯಕ್ರಮಗಳು ನಿರಂತರವಾಗಲಿ’





