Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಗೋವುಗಳಿಗೆ ಮುಳುವಾಗಿರುವ ಗೋರಕ್ಷಕರ ವೇಷದ...

ಗೋವುಗಳಿಗೆ ಮುಳುವಾಗಿರುವ ಗೋರಕ್ಷಕರ ವೇಷದ ರೌಡಿಗಳು!

ವಾರ್ತಾಭಾರತಿವಾರ್ತಾಭಾರತಿ11 Oct 2016 11:49 PM IST
share
ಗೋವುಗಳಿಗೆ ಮುಳುವಾಗಿರುವ ಗೋರಕ್ಷಕರ ವೇಷದ ರೌಡಿಗಳು!

ಸಮಾಜದಲ್ಲಿ ಮಾನ, ಮರ್ಯಾದೆ ಹೋದರೆ ಸರ್ವವೂ ಹೋಯಿತು ಎಂದು ಭಾವಿಸುವ ಕಾಲವಿತ್ತು. ರೌಡಿಗಳು, ಕಳ್ಳರು, ಕೊಲೆಗಾರರು ಎಂದರೆ ಸಮಾಜ ಅವರನ್ನು ದೂರವಿಡುತ್ತಿತ್ತು. ಅವರನ್ನು ಯಾರೂ ಗೌರವಿಸುತ್ತಿರಲಿಲ್ಲ. ಸ್ವಂತ ಮನೆಯೊಳಗೇ ಅವರನ್ನು ಸೇರಿಸಿಕೊಳ್ಳುತ್ತಿರಲಿಲ್ಲ. ಆದರೆ ಇಂದು ಕಾಲ ಎಷ್ಟು ಬದಲಾಗಿದೆಯೆಂದರೆ, ರೇಪ್ ಮಾಡಿದವರೇ ಸಂಸ್ಕೃತಿ ರಕ್ಷಕನೆಂಬ ವೇಷಧರಿಸಿ, ಕೇಸರಿ ತೊಟ್ಟು ವೇದಿಕೆಯಲ್ಲಿ ಹಿಂದೂ ಸಂಸ್ಕೃತಿಯ ಕುರಿತಂತೆ ಭಾಷಣ ಮಾಡುತ್ತಾರೆ. ಬೀದಿಯಲ್ಲಿ ರೌಡಿಗಳ ತಂಡ ಕಟ್ಟಿಕೊಂಡು, ಜನರನ್ನು ಬೇರೆ ಬೇರೆ ನೆಪದಲ್ಲಿ ದೋಚುವವರು ‘ರಕ್ಷಕ’ರೆಂಬ ಹಣೆಪಟ್ಟಿಕಟ್ಟಿಕೊಂಡು ತಿರುಗಾಡುತ್ತಾರೆ. ಪೊಲೀಸರು ಇಂಥವರಿಗೆ ಯಾವ ನಾಚಿಕೆಯೂ ಇಲ್ಲದೆ ಸೊಂಟಬಗ್ಗಿಸಿ ಗೌರವ ನೀಡುತ್ತಾರೆ. ಇತ್ತೀಚೆಗೆ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಇದನ್ನು ಅತ್ಯಂತ ಪರಿಣಾಮಕಾರಿಯಾಗಿ ಹೇಳಿದರು ‘‘ನಕಲಿ ಗೋರಕ್ಷಣೆಯ ವೇಷಧರಿಸಿರುವ ಕೆಲವರು ಹೆಗಲಲ್ಲಿ ಗೋರಕ್ಷಣೆಯ ಮಾತನಾಡುತ್ತಾರೆ. ರಾತ್ರಿ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುತ್ತಾರೆ’’. ಇದು ಅಕ್ಷರಶಃ ಸತ್ಯವಾಗಿದೆ. ವಿಷಾದನೀಯ ಸಂಗತಿ ಅದಲ್ಲ. ಇವರ ಜೊತೆಗೆ ಕಾನೂನು ರಕ್ಷಕರೆಂದು ಕರೆಸಿಕೊಂಡ ಖಾಕಿಧಾರಿಗಳು ಶಾಮೀಲಾಗಿರುವುದು ಅತ್ಯಂತ ಅಪಾಯಕಾರಿಯಾಗಿದೆ. ಒಂದು ಕಾಲದಲ್ಲಿ ವಿದ್ಯಾರ್ಥಿಗಳನ್ನು ಎನ್ನೆಸ್ಸೆಸ್‌ನಂತಹ ಸಂಘಟನೆಗಳು ರೂಪಿಸುತ್ತಿತ್ತು. ಯುವಕರನ್ನು ಭಾರತ ಸೇವಾ ದಲ, ನೆಹರೂ ಯುವ ಕೇಂದ್ರದಂತಹ ಸಂಘಟನೆಗಳು ಬೆಳೆಸುತ್ತಿತ್ತು. ದುರದೃಷ್ಟಕ್ಕೆ ಇಂದು ರೌಡಿಗಳು, ಗೂಂಡಾಗಳನ್ನೊಳಗೊಂಡ ‘ಗೋ ರಕ್ಷಣಾ ಪಡೆ’ಯೇ ಕೆಲ ಯುವಕರಿಗೆ ಆದರ್ಶ ಪ್ರಾಯವಾಗಿದೆ. ಆರೆಸ್ಸೆಸ್‌ನಂತಹ ಸಂಘಟನೆಗಳು ಇದನ್ನು ಬಹಿರಂಗವಾಗಿ ಸಮರ್ಥಿಸುತ್ತಿವೆ. ಆರೆಸ್ಸೆಸ್‌ನ ನಾಯಕರು ಮಂಗಳವಾರ ನಡೆದ ಸಭೆಯೊಂದರಲ್ಲಿ ಗೋರಕ್ಷಕ ಪಡೆಯ ಕೆಲಸವನ್ನು ಶ್ಲಾಘಿಸಿದ್ದಾರೆ. ಇವರು ಕಾನೂನನ್ನು ರಕ್ಷಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಶಹಬಾಶ್ ಗಿರಿ ನೀಡಿದ್ದಾರೆ. ಹಾಗಾದರೆ ನಮ್ಮ ಪ್ರಧಾನಿ ಮೋದಿಯವರು ಇವರನ್ನು ಕ್ರಿಮಿನಲ್‌ಗಳೆಂದು ಕರೆದಿರುವುದರ ಹಿಂದಿರುವ ಔಚಿತ್ಯವಾದರೂ ಏನು? ಹಾಗಾದರೆ ಕ್ರಿಮಿನಲ್ ಕೆಲಸಗಳಿಗಾಗಿಯೇ ಗೋ ರಕ್ಷಣಾ ಪಡೆಯನ್ನು ರಚಿಸಲಾಗಿದೆಯೇ? ಎಂಬ ಪ್ರಶ್ನೆ ಈಗ ಎದ್ದಿದೆ. ಗೋ ರಕ್ಷಣಾ ಪಡೆಯು ಕಾನೂನಿನ ಕೆಲಸ ಮಾಡುವುದೇ ಆಗಿದ್ದಿದ್ದರೆ ಪೊಲೀಸರ ಕೆಲಸ ಏನು? ಇವರು ಸರಕಾರದ ಅಧಿಕೃತ ಸಿಬ್ಬಂದಿಯೇ? ಅಥವಾ ಪೊಲೀಸ್ ಇಲಾಖೆಯ ಯಾವುದಾದರೂ ವಿಭಾಗಗಳಿಗೆ ಸಂಬಂಧಿಸಿದವರೇ? ಹೀಗೆ ಅನಧಿಕೃತವಾಗಿ ಪೊಲೀಸ್ ವೇಷ ಧರಿಸಿ ಜನರಿಗೆ ಥಳಿಸುವ, ಜನರಿಂದ ದೋಚುವ, ಜನರನ್ನು ಕೊಲ್ಲುವ ಇವರ ಕೆಲಸ ಸರಿಯೆಂದಾದರೆ, ಪೊಲೀಸರು, ನ್ಯಾಯಾಲಯ ಇತ್ಯಾದಿಗಳ ಅಗತ್ಯವೇನು? ಅಥವಾ ನಿಧಾನಕ್ಕೆ ಈ ಪೊಲೀಸ್ ಇಲಾಖೆ, ನ್ಯಾಯಾಲಯ ಇತ್ಯಾದಿಗಳನ್ನು ವಿಸರ್ಜಿಸಿ ಈ ಗೋರಕ್ಷಕ ಪಡೆಯನ್ನೇ ಅಧಿಕೃತಗೊಳಿಸುವ ಹುನ್ನಾರವೇನಾದರೂ ಸರಕಾರದ ಬಳಿಯಿದೆಯೇ?
 ಈ ನಕಲಿ ಗೋರಕ್ಷಕ ಪಡೆಯಿಂದಾಗಿ ಸಮಾಜ ಹತ್ತು ಹಲವು ರೀತಿಯಲ್ಲಿ ತಲ್ಲಣಗೊಂಡಿದೆ. ಒಂದೆಡೆ ರೌಡಿಗಳು, ಪುಡಿಕಳ್ಳರು ಈ ಪಡೆಯನ್ನು ಸೇರಿಕೊಂಡು ಸಂಸ್ಕೃತಿ ರಕ್ಷಕರ ವೇಷದಲ್ಲಿ ಜನರ ನಡುವೆ ತಲೆಯೆತ್ತಿ ತಿರುಗಾಡುತ್ತಿದ್ದಾರೆ. ಸಮಾಜದ ಸಭ್ಯರು, ದುಡಿದು ಬದುಕುವ ಶ್ರೀಸಾಮಾನ್ಯರು ಇವರಿಗೆ ಹೆದರಿಕೊಂಡು ಓಡಾಡುವಂತಾಗಿದೆ. ಮಹಿಳೆಯರೂ ತಮ್ಮ ಮಾನ, ಮರ್ಯಾದೆಯನ್ನು ಇವರಿಗೆ ಒತ್ತೆಯಿಟ್ಟು ಜೀವನ ಮಾಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಹೊಸತಲೆಮಾರಿನ ಹಿಂದುಳಿದ ವರ್ಗದ ಹುಡುಗರನ್ನೇ ಈ ಗೋರಕ್ಷಕಪಡೆಗೆ ಬಳಸಿಕೊಳ್ಳುತ್ತಿರುವುದರಿಂದ, ಈ ದುರ್ಬಲ ಸಮಾಜದ ತರುಣರು ಜೈಲು ಸೇರುವುದು, ರೌಡಿಗಳ ಪಟ್ಟ ಪಡೆಯುವ ಸಂಖ್ಯೆ ಹಿಂದೆಂದಿಗಿಂತ ಹೆಚ್ಚಾಗಿದೆ. ಇದರ ಪ್ರಯೋಜನಗಳನ್ನೆಲ್ಲ ಮೇಲ್ಜಾತಿಯ ಜನರು ತಮ್ಮದಾಗಿಸಿಕೊಳ್ಳುತ್ತಾರಾದರೂ, ಜೈಲುಪಾಲಾಗುತ್ತಿರುವವರಲ್ಲಿ ಬಹುತೇಕ ಕೆಳವರ್ಗಕ್ಕೆ, ಕೆಳ ಜಾತಿಗೆ ಸೇರಿದ 18ರಿಂದ 25 ವರ್ಷದ ಹುಡುಗರಾಗಿದ್ದಾರೆ. ಇವರ ವಿರುದ್ಧ ಪೊಲೀಸರಿಗೂ ದೂರು ನೀಡದಂತಹ ಸನ್ನಿವೇಶ ನಿರ್ಮಾಣವಾಗಿದೆ. ಪೊಲೀಸರಿಗೂ ಇವರಿಗೂ ಒಳಗಿಂದೊಳಗೆ ಅನೈತಿಕ ಸಂಬಂಧವೊಂದು ತಳಕು ಹಾಕಿದೆ. ಆದುದರಿಂದ ಸಂತ್ರಸ್ತರು ಪೊಲೀಸ್ ಠಾಣೆ ಹತ್ತಿದರೆ, ಸಂತ್ರಸ್ತರ ಮೇಲೆಯೇ ದೂರು ದಾಖಲಿಸಿ, ದುಷ್ಕರ್ಮಿಗಳನ್ನು ರಕ್ಷಿಸುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ಗೋರಕ್ಷಣೆಗೆಂದು ಸರಕಾರ ಮೀಸಲಿಡುವ ಹಣ, ಪರೋಕ್ಷವಾಗಿ ಈ ಗೋರಕ್ಷಕ ಪಡೆಯ ವೇಷದಲ್ಲಿರುವ ರೌಡಿಗಳ ಕೈ ಸೇರುತ್ತಿರುವುದು. ಇಂದು ಗೋಶಾಲೆಗಳ ಹೆಸರಲ್ಲಿ, ಗೋಮಾಳಗಳ ಹೆಸರಲ್ಲಿ ಬಿಡುಗಡೆಯಾಗುವ ಕೋಟ್ಯಂತರ ರೂಪಾಯಿ, ಬೇರೆ ಬೇರೆ ಸಂಘಟನೆಗಳ ಮೂಲಕ ಈ ರೌಡಿಗಳನ್ನು ಸಾಕುವುದಕ್ಕಾಗಿಯೇ ವ್ಯಯವಾಗುತ್ತಿದೆ. ಜೀವನದಲ್ಲಿ ಗೋಸಾಕಣೆ ಬಿಡಿ, ದುಡಿಮೆಯೆಂದರೆ ಏನು ಎಂದೇ ಗೊತ್ತಿಲ್ಲದ ಈ ದುಷ್ಕರ್ಮಿಗಳು ಭವಿಷ್ಯದಲ್ಲಿ ಸಮಾಜವನ್ನು ಅತ್ಯಂತ ಭೀಕರವಾಗಿಸಲಿದ್ದಾರೆ ಎನ್ನುವ ಸೂಚನೆ ಅಲ್ಲಲ್ಲಿ ದೊರಕುತ್ತಿದೆ. ಅದಕ್ಕೆ ಒಂದು ಉದಾಹರಣೆಯೇ ಪ್ರವೀಣ್ ಪೂಜಾರಿಯ ಬರ್ಬರ ಕಗ್ಗೊಲೆ.
ಇದೇ ಸಂದರ್ಭದಲ್ಲಿ ಈ ಗೋರಕ್ಷಕ ಪಡೆಯಿಂದಾಗಿ ಇನ್ನೊಂದು ಅನಾಹುತ ನಡೆಯುತ್ತಿದೆ. ದೇಶಾದ್ಯಂತ ರೈತರು ಗೋಸಾಕಣೆಯಿಂದ ಹಿಂದೆ ಸರಿಯುತ್ತಿದ್ದಾರೆ. ಪುಣೆಯಲ್ಲಿ ಒಬ್ಬ ರೈತ ಪೊಲೀಸರು ಮತ್ತು ಗೋರಕ್ಷಕ ಪಡೆಯ ಕಿರುಕುಳ ತಾಳಲಾರದೆ, ತನ್ನ ಹಸುಗಳನ್ನು ದಾನ ಮಾಡಿ ಈ ಸಾಕಣೆಯನ್ನೇ ಕೈ ಬಿಡುವ ನಿರ್ಧಾರಕ್ಕೆ ಬಂದಿದ್ದಾರೆ. ವಿಪರ್ಯಾಸವೆಂದರೆ ಈ ಸಂದರ್ಭದಲ್ಲಿ ರೈತನಿಗೆ ನೆರವಾಗಬೇಕಾಗಿದ್ದ ನ್ಯಾಯಾಲಯವೂ ಗೋರಕ್ಷಕರನ್ನು, ಪೊಲೀಸರನ್ನೇ ಸಮರ್ಥಿಸಿ ತೀರ್ಪು ನೀಡಿತು. ಇಂದು ಮಾನ ಮರ್ಯಾದೆ ಇರುವವರು ಗೋಸಾಕಣೆ ಮಾಡುವಂತಿಲ್ಲ ಎಂಬ ಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿದೆ. ಹಟ್ಟಿಯಲ್ಲಿ ಗೋವುಗಳನ್ನಿಟ್ಟು ಸಾಕುವವರು ಯಾವಾಗ ಈ ಪಡೆ ತಮ್ಮ ಹಟ್ಟಿಗೆ ನುಗ್ಗುತ್ತದೆಯೋ ಎಂಬ ಭಯದಿಂದ ಕಾಲಕಳೆಯಬೇಕಾಗಿದೆ. ಬೆಂಗಳೂರಿನಲ್ಲಿ, ಗೋಸಾಕಣೆಯ ಫಾರ್ಮೊಂದಕ್ಕೆ ನುಗ್ಗಿ ಇದೇ ರೌಡಿಗಳು ನಡೆಸಿದ ಅವಾಂತರ ಇನ್ನೂ ಹಸಿಯಾಗಿದೆ. ಹಟ್ಟಿಯಲ್ಲಿದ್ದ ಎತ್ತುಗಳನ್ನು, ಹಾಲುಕೊಡದ ಹಸುಗಳನ್ನು ಮುಕ್ತವಾಗಿ ಮಾರಾಟಮಾಡುವಂತಹ ಸ್ಥಿತಿಯೂ ಇಂದು ಇಲ್ಲ. ಅದಕ್ಕೆ ಹುಲ್ಲುಹಾಕುವ ಸಾಮರ್ಥ್ಯ ಶ್ರೀಸಾಮಾನ್ಯನಲ್ಲಿಲ್ಲ. ಯಾರಿಗಾದರೂ ಮಾರಬೇಕೆಂದು ವಾಹನದಲ್ಲಿ ಕೊಂಡು ಹೋಗಬೇಕೆಂದರೆ ಅದಕ್ಕೆ ಚಾಲಕರೂ ಒಪ್ಪುವುದಿಲ್ಲ. ಅಂತಿಮವಾಗಿ ಈ ಗೋರಕ್ಷಕ ಪಡೆಗೇ ಪುಕ್ಕಟೆಯಾಗಿ ದಾನ ಮಾಡಬೇಕಾದಂತಹ ಸ್ಥಿತಿ. ಈ ಗೋರಕ್ಷಕ ಪಡೆ ಗೋಶಾಲೆಗಳಿಗೆ ಸೇರಿಸುವ ಹೆಸರಿನಲ್ಲಿ ಗೋವುಗಳನ್ನು ತಾವೇ ಕಟುಕರಿಗೆ ಗುಟ್ಟಾಗಿ ಮಾರಿ ಹಣ ಮಾಡುವ ದಂಧೆ ಶುರು ಹಚ್ಚಿದ್ದಾರೆ. ಗೂಂಡಾಗಿರಿಗೂ ಧರ್ಮ, ಸಂಸ್ಕೃತಿಯ ಗೌರವ ಸಿಗುತ್ತದೆ ಮತ್ತು ಅದರಿಂದಾಗಿ ಕುಳಿತಲ್ಲೇ ದುಡ್ಡು ಹುಟ್ಟುತ್ತದೆ ಎಂದಾದ ಮೇಲೆ ಹುಡುಗರು ಈ ಪಡೆಯನ್ನು ಸೇರಿಕೊಳ್ಳದೆ ಇನ್ನೇನು ಮಾಡುತ್ತಾರೆ?
ಪ್ರಜಾಸತ್ತಾತ್ಮಕ ದೇಶದಲ್ಲಿ ಗೋರಕ್ಷಣಾ ಪಡೆ ನಮ್ಮ ಕಾನೂನಿಗೆ ಪರ್ಯಾಯವಾಗಿ ಹುಟ್ಟಿದ ಭಯೋತ್ಪಾದನಾ ಸಂಘಟನೆಯಾಗಿದೆ. ಇಂದು ಈ ಪಡೆಗಳ ವಿರುದ್ಧ ದೂರು ಕೂಡ ನೀಡಲು ಆಗದಂತಹ ಭಯದ ವಾತಾವರಣ ನಿರ್ಮಾಣವಾಗಿದೆ. ಹಾಗಾಇ ನ್ಯಾಯಾಲಯವೇ ಇವುಗಳ ವಿರುದ್ಧ ಸ್ವಯಂ ಮೊಕದ್ದಮೆ ದಾಖಲಿಸಿ ಎಲ್ಲ ಗೋರಕ್ಷಕ ಪಡೆಗಳನ್ನು ಗುರುತಿಸಿ ಅವುಗಳ ಮುಖ್ಯಸ್ಥರನ್ನು, ಕಾರ್ಯಕರ್ತರನ್ನು ಜೈಲಿಗೆ ತಳ್ಳಬೇಕಾಗಿದೆ. ಇಲ್ಲವಾದರೆ ನಮ್ಮ ನಾಡಿನಲ್ಲಿರುವ ಅಳಿದುಳಿದ ಗೋವುಗಳೂ ಸಂಪೂರ್ಣ ಕಾಣೆಯಾಗಲಿವೆೆ ಮಾತ್ರವಲ್ಲ, ಬೀದಿ ಬೀದಿಗಳಲ್ಲಿ ಈ ಗೋರಕ್ಷಕ ವೇಷದ ರೌಡಿಗಳ ಅಟ್ಟಹಾಸ ಮಿತಿ ಮೀರಲಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X