ಮುಹರ್ರಂ ಪ್ರಯುಕ್ತ ಪಾನೀಯ ವಿತರಣೆ

ಚಿಕ್ಕಮಗಳೂರು, ಅ.12: ಮುಹರ್ರಂ ತಿಂಗಳು ಮುಸ್ಲಿಮರಿಗೆ ಹೊಸ ವರ್ಷವಾಗಿರುತ್ತದೆ. ಇದು ಮೊದಲ ಬಾರಿಗೆ 1438ನೆಯ ಇಸವಿಯಲ್ಲಿ ಆಚರಿಸಲಾಯಿತೆಂದು ಕರ್ನಾಟಕ ರಾಜ್ಯ ಹಜ್ಹರತ್ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ(ರಿ) ಕಮಿಟಿ ಅಧ್ಯಕ್ಷ ಜಂಷೀದ್ ಖಾನ್ ತಿಳಿಸಿದರು.
ಬುಧವಾರ ನಡೆದ ಮುಹರ್ರಂ ಅಂಗವಾಗಿ ಸಂಘದ ವತಿಯಿಂದ ಉಪಹಾರ ಸಾರ್ವಜನಿಕರಿಗೆ ಮಜ್ಜಿಗೆ ಇತ್ಯಾದಿ ಪಾನೀಯ ವಿತರಿಸಿ ಮಾತನಾಡಿದರು.
ಇಸ್ಲಾಂಗಾಗಿ ಪ್ರವಾದಿಯವರ ಮೊಮ್ಮಕ್ಕಳಾದ ಹಸೈನ್ ಮತ್ತು ಹುಸೈನ್ ಮಾಡಿದ ತ್ಯಾಗದ ನೆನಪಿಗೆ ಈ ಹಬ್ಬವನ್ನು ಆಚರಿಸಲಾಗುತ್ತದೆಂದರು.
ಸತ್ಯ ಮತ್ತು ಮಾನವ ಧರ್ಮ ಎಂದರೆ ಏನು ಎಂಬುದನ್ನು ಪ್ರಜೆಗಳಿಗೆ ತಿಳಿಸಿ ಇಸ್ಲಾಂ ದ್ರೋಹಿಗಳ ಖಡ್ಗಕ್ಕೆ ಬಲಿಯಾದರು. ಇವರಿಬ್ಬರ ತ್ಯಾಗದ ಸ್ಮರಣಾರ್ಥ ಅವರ ಹೆಸರಿನಲ್ಲಿ ಮುಸ್ಲಿಮರು ಸಾರ್ವಜನಿಕರಿಗೆ ತಂಪು ಪಾನೀಯ ವಿತರಿಸುತ್ತಾರೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಮಿಟಿಯ ಸದಸ್ಯರಾದ ಅಬ್ದುಲ್ ರೆಹಮಾನ್, ಮುಜಾಹಿದ್, ಸಮೀವುಲ್ಲಾ, ಅರಾಫ್ ಮತ್ತಿತರರು ಉಪಸ್ಥಿತರಿದ್ದರು.
Next Story





