ರಾಜ್ಯ ಮಟ್ಟದ ಬಯಲು ಜಂಗಿ ಕುಸ್ತಿ ಸ್ಪರ್ಧೆ ಉದ್ಘಾಟನೆ

ತರೀಕೆರೆ, ಅ.12: ಪಟ್ಟಣದ ಬಯಲು ರಂಗಮಂದಿರದಲ್ಲಿ ಬುಧವಾರ ಮೂರು ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಸ್ಪರ್ಧೆಯನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಬಗರ್ ಹುಕುಂ ಸಮಿತಿ ಸದಸ್ಯ ಜಗದೀಶ್ ಮಾತನಾಡಿ, ಕುಸ್ತಿ ಹೆಸರಾಂತ ಕ್ರೀಡೆಯಾಗಿದ್ದು, ಇಂತಹ ಗ್ರಾಮೀಣ ಕ್ರೀಡೆಗಳು ನಶಿಸಬಾರದು ಎಂದರು.
ಮಾಜಿ ಪುರಸಭಾಧ್ಯಕ್ಷೆ ಹೇಮಲತಾ ರೇವಣ್ಣ ಮಾತನಾಡಿ, ಪಟ್ಟಣದಲ್ಲಿ ಸಾಕಷ್ಟು ಗರಡಿ ಮನೆಗಳಿದ್ದು, ಯುವಕರು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಕಾಂಗ್ರೆಸ್ ಮುಖಂಡ ದೋರನಾಳು ಪರಮೇಶ್ ಮಾತನಾಡಿ, ರಾಜ ಮಹಾರಾಜರ ಕಾಲದಿಂದಲೂ ನಡೆದು ಬರುತ್ತಿರುವ ಈ ಕ್ರೀಡೆಗೆ ಪಟ್ಟಣದಲ್ಲಿ ಉತ್ತಮ ಪ್ರೋತ್ಸಾಹ ಸಿಗುತ್ತಿದೆ ಎಂದರು.
ಪುರಸಭಾ ಸದಸ್ಯ ಪ್ರಕಾಶ್ ವರ್ಮ ಮಾತನಾಡಿ, ಕಳೆದ 86 ವರ್ಷಗಳಿಂದ ಜಂಗೀ ಕುಸ್ತಿ ಸ್ಪರ್ಧೆ ನಡೆದು ಬರುತ್ತಿದೆ. ಅಂತರ ರಾಜ್ಯ ಮಟ್ಟದಲ್ಲಿಯೂ ಮನ್ನಣೆ ದೊರಕುತ್ತಿದೆ ಎಂದರು.
ಮಾಜಿ ಪೈಲ್ವಾನರಾದ ವಗ್ಗಪ್ಪರ ಮಂಜಣ್ಣ ಕುಸ್ತಿಯ ಅಖಾಡ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಮೋಹನ್‌ಕುಮಾರ್, ಶ್ರೀ ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದ ಪದಾಧಿಕಾರಿಗಳಾದ ದಿಲೀಪ್, ರಾಕೇಶ್, ಧನುಷ್, ಲೋಹಿತ್ ಕೋಟಿ, ವೇದಮೂರ್ತಿ, ಪ್ರಕಾಶ್, ರಾಘವೇಂದ್ರ, ಮಧು, ಪುನೀತ್, ಮಂಜುಮತ್ತಿತರರು ಉಪಸ್ಥಿತರಿದ್ದರು.
ಪೋಟೋ: ಪಟ್ಟಣದ ಬಯಲು ರಂಗಮಂದಿರದಲ್ಲಿ ಬುಧವಾರ ಮೂರು ದಿನ ನಡೆಯುವ ರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.







