ಅಳಿವಿನಂಚಿನ ಜೀವಿಗಳ ರಕ್ಷಣೆಗೆ ಸುಹಾಸ್ ವಿಶ್ವಪರ್ಯಟನೆ

ಕಾರವಾರ,ಅ.12: ನಶಿಸುತ್ತಿರುವ ರಾಷ್ಟ್ರೀಯ ಪ್ರಾಣಿ ಹುಲಿ ಹಾಗೂ ಅವನತಿ ಹಂತಕ್ಕೆ ತಲುಪುತ್ತಿರುವ ರಣಹದ್ದುಗಳ ರಕ್ಷಣೆಗಾಗಿ ಜನರಲ್ಲಿ ಜಾಗೃತಿ ಮೂಡಿಸಿ ಅವುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಯುವಕನೊಬ್ಬ ಬೈಕ್ ಮೂಲಕ ಏಕಾಂಗಿಯಾಗಿ ವಿಶ್ವಪರ್ಯಟನೆ ಆರಂಭಿಸಿದ್ದಾರೆ. ಆ ಯುವಕನು ಗೋವಾ ಮೂಲಕ ಕಾರವಾರಕ್ಕೆ ಬಂದು ಮಂಗಳೂರಿಗೆ ತೆರಳಿದ್ದಾರೆ. ಬೆಂಗಳೂರಿನ ಆರ್‌ಎನ್‌ಎಸ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ 20 ವರ್ಷದ ಸುಹಾಸ್ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಇಂಜಿನಿಯರಿಂಗ್ ಮೂರನೆ ವರ್ಷದಲ್ಲಿ ಓದುತ್ತಿರುವ ಈತ ಕಾಲೇಜಿನಿಂದ ಅನುಮತಿ ಪಡೆದು ಅ.4 ರಿಂದ ಭಾರತ ದೇಶದ ವೆಸ್ಟ್ ಕೋಸ್ಟ್ ಭಾಗಗಳಲ್ಲಿ ಸಂಚರಿಸಲಿದ್ದಾರೆ. ಮೂಲತಃ ಬೆಂಗಳೂರಿನವರಾದ ಸುಹಾಸ್ ತಮ್ಮ ಬೈಕ್ ಮೂಲಕ ಪ್ರಯಾಣ ಆರಂಭಿಸಿ ಮೊದಲು ಪೂನಾಕ್ಕೆ ತೆರಳಿ ಅಲ್ಲಿಂದ ಮುಂಬೈ, ಗುಜರಾತ್‌ನಲ್ಲಿ ಪ್ರವಾಸ ನಂತರ ಗೋವಾ ಮೂಲಕ ಕಾರವಾರಕ್ಕೆ ಬಂದಿದ್ದಾರೆ. ಇಲ್ಲಿ ಸುಹಾಸರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪ್ರಾಣಿ ಪ್ರಿಯರು ಬರಮಾಡಿಕೊಂಡರು.
ಒಂದುಕಡೆ ವೈಜ್ಞಾನಿಕತೆ, ತಾಂತ್ರಿಕತೆ ಜೀವಿಗಳಿಗೆ ಕಂಠಕವಾದರೆ ಇನ್ನೊಂದುಕಡೆ ಮನುಷ್ಯನ ದುರಾಸೆಗೆ ಕಾಡು ಪ್ರಾಣಿಗಳು ಬಲಿಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಹುಲಿಗಳ ಸಂರಕ್ಷಣೆಯಾಗಬೇಕು. ಆಕಾಶದಲ್ಲಿ ಹಾರಾಡುವ ರಣಹದ್ದುಗಳು ನಮ್ಮ ಸುತ್ತಲೂ ಬದುಕಬೇಕು ಎನ್ನುವ ಅಭಿಲಾಷೆ ಹೊಂದಿರುವ ಸುಹಾಸ್ ದೇಶಪರ್ಯಟನೆ ನಡೆಸುತ್ತಿದ್ದಾರೆ. ಇವರು ತೆರಳುವ ಪ್ರದೇಶದಲ್ಲಿ ಸಿಗುವ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ತೊಡಗಿದ್ದಾರೆ. ಸೇಫ್ ಟೈಗರ್ ಫಾರೆಸ್ಟ್ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಪ್ರಯಾಣ ಬೆಳೆಸುತ್ತಿದ್ದೇನೆ. ನಾನು ಸಂಚರಿಸಿದ ಭಾಗಗಳಲ್ಲಿ ಹುಲಿ ಮತ್ತು ರಣಹದ್ದುಗಳ ಬಗ್ಗೆ ಮಾಹಿತಿ ನೀಡುತ್ತಾ ಅವುಗಳ ಸಂರಕ್ಷಣೆಗೆ ಮುಂದಾಗುವಂತೆ ಜನರಿಗೆ ಮನವರಿಕೆ ಮಾಡುತ್ತಿದ್ದೇನೆ. ಈಗಾಗಲೇ ಆರು ದಿನಗಳ ಅವರ ಸಂಚಾರ ಮುಗಿದಿದ್ದು, ಇನ್ನು ಆರು ದಿನಗಳ ಕಾಲ ತಮ್ಮ ಪರ್ಯಟನೆ ನಡೆಸಲಿದ್ದೇನೆ. ಕೊನೆಗೆ ತಮಿಳುನಾಡಿನ ಕನ್ಯಾಕುಮಾರಿವರೆಗೆ ಸಾಗಿ ಅಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿ ಈ ಪ್ರಯಾಣವನ್ನು ಮುಗಿಸುತ್ತೇನೆ ಎನ್ನುತ್ತಾರೆ ಸುಹಾಸ್.







